ಬೆಂಗಳೂರು: ದೂರವಾಣಿ ಕದ್ದಾಲಿಕೆ ಪ್ರಕರಣದ ನೇತೃತ್ವ ವಹಿಸಿಕೊಂಡಿರುವ ಸಿಬಿಐ, ಆಡಳಿತ ಹಾಗೂ ವಿರೋಧ ಪಕ್ಷಗಳ ಕೆಲ ಮುಖಂಡರು ಹಾಗೂ ಆಪ್ತರ ದೂರವಾಣಿಗಳನ್ನು ಅಕ್ರಮವಾಗಿ ಕದ್ದಾಲಿಕೆ ನಡೆಸಿದ್ದಾರೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ 2018ರ ಅಗಸ್ಟ್ 1ರಿಂದ 2019 ಅಗಸ್ಟ್ 19ರವರೆಗೆ ಕಾಲಾವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ್ದರು.
ಸದ್ಯ ಐಟಿ ಆ್ಯಕ್ಟ್-2000 ಹಾಗೂ ಇಂಡಿಯನ್ ಟೆಲಿಪೋನ್ ಆ್ಯಕ್ಟ್-1885 ಪ್ರಕರಣದಡಿ ಕೇಸು ದಾಖಲಿಸಿ ಸಿಬಿಐ ತನಿಖೆ ನಡೆಸಲಿದೆ.