ETV Bharat / city

ಲಸಿಕೆ ಖಾಲಿ, ಆಮ್ಲಜನಕ ಸಿಲಿಂಡರ್ ಒದಗಿಸಿ: ಸರ್ಕಾರಕ್ಕೆ ಫನಾ ಪತ್ರ - Karnataka covid death

60 ವರ್ಷ ಮೀರಿದವರು ಆಸ್ಪತ್ರೆಗಳಿಗೆ ನಿರಂತರವಾಗಿ ಕರೆ ಮಾಡಿ ಎರಡನೇ ಡೋಸ್ ಲಸಿಕೆ ಕೇಳುತ್ತಿದ್ದಾರೆ. ಆದರೆ ನಮ್ಮಲ್ಲಿ ಅವರಿಗೆ ನೀಡಲು ಲಸಿಕೆ ಇಲ್ಲ. ಆದ್ದರಿಂದ ಆದಷ್ಟು ಬೇಗ ಲಸಿಕೆ ಸಿಗುವಂತೆ, ಕನಿಷ್ಠ ಪಕ್ಷ ಎರಡನೇ ಡೋಸ್ ನೀಡುವಷ್ಟಾದರೂ ಲಸಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ಪೂರೈಸಿ ಎಂದು ಫನಾ ಮನವಿ ಮಾಡಿದ್ದಾರೆ.

vaccine
vaccine
author img

By

Published : May 7, 2021, 2:43 AM IST

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲು ಲಸಿಕೆ ಲಭ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಒಕ್ಕೂಟ (ಫನಾ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

60 ವರ್ಷ ಮೀರಿದವರು ಆಸ್ಪತ್ರೆಗಳಿಗೆ ನಿರಂತರವಾಗಿ ಕರೆ ಮಾಡಿ ಎರಡನೇ ಡೋಸ್ ಲಸಿಕೆ ಕೇಳುತ್ತಿದ್ದಾರೆ. ಆದರೆ ನಮ್ಮಲ್ಲಿ ಅವರಿಗೆ ನೀಡಲು ಲಸಿಕೆ ಇಲ್ಲ. ಆದ್ದರಿಂದ ಆದಷ್ಟು ಬೇಗ ಲಸಿಕೆ ಸಿಗುವಂತೆ, ಕನಿಷ್ಠ ಪಕ್ಷ ಎರಡನೇ ಡೋಸ್ ನೀಡುವಷ್ಟಾದರೂ ಲಸಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ಪೂರೈಸಿ ಎಂದು ಮನವಿ ಮಾಡಿದ್ದಾರೆ.

ಸರ್ಕಾರಕ್ಕೆ ಫನಾ ಪತ್ರ
ಸರ್ಕಾರಕ್ಕೆ ಫನಾ ಪತ್ರ

ಎರಡನೇ ಡೋಸ್ ಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡುವಂತೆ ಆದೇಶ ನೀಡಬೇಕು. ಅಲ್ಲಿಯವರೆಗೆ 18 ವರ್ಷ ಮೀರಿದವರ ಮೊದಲ ಡೋಸ್‌ನ ಲಸಿಕಾ ಅಭಿಯಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕು. ಏಪ್ರಿಲ್ ತಿಂಗಳಲ್ಲಿದ್ದಷ್ಟು ಮತ್ತು ಆಗಿನ ದರದಲ್ಲೇ ಎರಡನೇ ಡೋಸ್ ಲಸಿಕೆಯನ್ನು ನೀಡಬೇಕು ಎಂದು ಫನಾ, ಮುಖ್ಯ ಕಾರ್ಯದರ್ಶಿಗಳಲ್ಲಿ ಕೋರಿದೆ.

ಬೆಡ್‌ಗೆ 7 ಜಂಬೋ ಸಿಲಿಂಡರ್ ಬಗ್ಗೆಯೂ ಆಕ್ಷೇಪ:

ರಾಜ್ಯ ಸರ್ಕಾರವು ಹೊರಡಿಸಿದ್ದ ಆದೇಶದಲ್ಲಿ ಮೂರು ದಿನಗಳಿಗೆ ಆಗುವಷ್ಟು ಆಮ್ಲಜನಕ ದಾಸ್ತಾನು ಆಸ್ಪತ್ರೆಗಳು ಹೊಂದಿರಬೇಕು ಎಂಬ ಅಂಶದ ಬಗ್ಗೆ ಫನಾ ಆಕ್ಷೇಪ ವ್ಯಕ್ತಪಡಿಸಿದೆ.
ಈ ಆದೇಶದಂತೆ ಪ್ರತಿ ಹಾಸಿಗೆಗೆ 7 ಜಂಬೋ ಸಿಲಿಂಡರ್ ಆಮ್ಲಜನಕ ಬೇಕು. ಆದರೆ ಆದೇಶದಲ್ಲಿ ಇನ್ನೊಂದೆಡೆ ಪ್ರತಿ ಹಾಸಿಗೆಗೆ 4 ಜಂಬೋ ಸಿಲಿಂಡರ್ ಬೇಕು ಎಂದು ಹೇಳಿರುವುದು ಗೊಂದಲಕಾರಿಯಾಗಿದೆ. ಒಂದು ಬೆಡ್‌ಗೆ 7 ಜಂಬೋ ಸಿಲಿಂಡರ್ ಬೇಕು ಎಂದಾದರೆ 100 ಕೋವಿಡ್ ಹಾಸಿಗೆಗಳ ಆಸ್ಪತ್ರೆಗೆ 700 ಜಂಬೋ ಸಿಲಿಂಡರ್ ಬೇಕಾಗುತ್ತದೆ. ಒಂದು ವೇಳೆ ಆಸ್ಪತ್ರೆಯಲ್ಲಿ 150 ಜಂಬೋ ಸಿಲಿಂಡರ್ ಇದ್ದರೆ ಆ ಆಸ್ಪತ್ರೆಯವರು ಒಂದೊ 550 ಜಂಬೋ ಸಿಲಿಂಡರ್ ಕೊಂಡುಕೊಳ್ಳಬೇಕು ಅಥವಾ ಕೇವಲ 20 ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಆಖ್ತರ್ ಅವರಿಗೆ ಪತ್ರ ಬರೆದಿದೆ.

ಸದ್ಯ ಜಂಬೋ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಆದ್ದರಿಂದ ಮುಂದಿನ ಕೆಲ ವಾರಗಳಲ್ಲಿ ಆಸ್ಪತ್ರೆಗಳಿಗೆ ಬೇಕಾದಷ್ಟು ಸಿಲಿಂಡರ್‌ಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಮಾರ್ಗಸೂಚಿಯನ್ನು ಪಾಲಿಸಲು ಮುಂದಾದರೆ ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50ರಷ್ಟು ಕೋವಿಡ್ ಬೆಡ್ ಕಡಿತವಾಗುವ ಸಾಧ್ಯತೆಯಿದೆ. ಹಾಗೆಯೇ ಆಮ್ಲಜನಕದ ಪೂರೈಕೆಯಲ್ಲಿ ಸಮಸ್ಯೆ ಇರುವುದರಿಂದ ಇಷ್ಟೊಂದು ಪ್ರಮಾಣದಲ್ಲಿ ಸಿಲಿಂಡರ್‌ಗಳನ್ನು ಭರ್ತಿ ಮಾಡಿಡುವುದು ಕೂಡ ಕಷ್ಟ ಎಂದು ಫನಾ ತನ್ನ ಪತ್ರದಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.