ETV Bharat / city

ಸೋಂಕು ಪರೀಕ್ಷೆಗಳು ಹೆಚ್ಚಾದರೆ ಸಾವಿನ ಪ್ರಮಾಣ ಇಳಿಕೆಯಾಗಬಹುದು: ಫನಾ ಅಧ್ಯಕ್ಷ - ಕೊರೊನಾ ಲಾಕ್​ಡೌನ್ ಬಗ್ಗೆ ಫನಾ ಅಭಿಪ್ರಾಯ

ಪಾಸಿಟಿವಿಟಿ ರೇಟು ಶೇಕಡಾ 5ಕ್ಕೆ ಇಳಿದರೆ ಸೋಂಕು ನಿಯಂತ್ರಣದಲ್ಲಿದೆ ಎಂದರ್ಥ.‌ ಸದ್ಯ ಪಾಸಿಟಿವ್ ರೇಟು ಶೇಕಡಾ 25ರ ಗಡಿದಾಟಿದೆ. ಹೀಗಾಗಿ ಕೊರೊನಾ ನಿಯಂತ್ರಣ ಮೀರಿದೆ. ಇದನ್ನ ಮತ್ತೆ ನಿಯಂತ್ರಣಕ್ಕೆ ತರಬೇಕು ಅಂದರೆ ಕಠಿಣ ಲಾಕ್​ಡೌನ್ ಅಗತ್ಯವಾಗಿದೆ

Phana organisation president on lockdown
ಸೋಂಕು ಪರೀಕ್ಷೆಗಳು ಹೆಚ್ಚಾದರೆ ಸಾವಿನ ಪ್ರಮಾಣ ಇಳಿಕೆಯಾಗಬಹುದು: ಫನಾ ಅಧ್ಯಕ್ಷ
author img

By

Published : May 22, 2021, 5:15 AM IST

ಬೆಂಗಳೂರು: ರಾಜ್ಯ ಸೇರಿದಂತೆ ದೇಶಾದ್ಯಂತ ಕೊರೊನಾ ಹಾವಳಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿವೆ. ಈ ನಡುವೆ ಕೋವಿಡ್ ನಿಯಂತ್ರಣಕ್ಕೆ ಲಾಕ್​ಡೌನ್ ಅಸ್ತ್ರ ಪ್ರಯೋಗ ಮಾಡಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬರಲು ವೈಜ್ಞಾನಿಕವಾಗಿ 45 ದಿನ ಅನಿವಾರ್ಯ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಸರ್ಕಾರ ಇನ್ನೆರಡು ವಾರ ಲಾಕ್​ಡೌನ್ ವಿಸ್ತರಣೆ ಮಾಡಿದ್ದು, ಈ ಕುರಿತು ಮಾಹಿತಿ ನೀಡಿರುವ ಫನಾ ಸಂಘದ ಡಾ.ಪ್ರಸನ್ನ, ಈ ಹಿಂದಿನ ಎರಡು ವಾರದ ಲಾಕ್​ಡೌನ್​ನಿಂದಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ಎರಡು ವಾರ ಲಾಕ್​ಡೌನ್ ವಿಸ್ತರಣೆ ಮಾಡುವುದರಿಂದ ಕೋವಿಡ್​​ ಚೈನ್ ಬ್ರೇಕ್ ಮಾಡಲು ಸಹಾಯವಾಗುತ್ತದೆ. ತಾಂತ್ರಿಕವಾಗಿ 45 ದಿನಗಳ ಲಾಕ್ ಡೌನ್ ಅವಶ್ಯಕತೆ ಇದೆ. ಆದರೆ ಇದು ಜನ ಆರ್ಥಿಕ ಜೀವನಕ್ಕೆ ಹೊಡೆತ ಬೀಳುತ್ತದೆ ಎಂದಿದ್ದಾರೆ.

ಕೊರೊನಾ ಚೈನ್ ಬ್ರೇಕ್ ಗೆ ಲಾಕ್ ಡೌನ್‌ ಪ್ಲಸ್​ ಪಾಯಿಂಟ್ ಆಗಲಿದೆ

ಲಾಕ್​​ಡೌನ್​ನಿಂದ ಜನರ ಓಡಾಟಕ್ಕೆ ಬ್ರೇಕ್ ಬೀಳಲಿದೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಹರಡುವಿಕೆ ಕಡಿಮೆ ಆಗಲಿದೆ.‌ ಕೊರೊನಾ ಹರಡದೇ ಇರಲು ದೈಹಿಕ ಅಂತರ ಅಗತ್ಯ, ಹೀಗಾಗಿ‌ ಜನಸಂದಣೆ, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದಾಗ ಜನರ ಪರಸ್ಪರ ಭೇಟಿ, ಸಭೆ ಸಮಾರಂಭ ನಿಲ್ಲಿಸಿದರೆ ಮಹಾಮಾರಿ ಕೊರೊನಾ ಸೋಂಕು ಹರಡುವ ದಾರಿಯನ್ನು ಬಂದ್ ಮಾಡಿದ್ದಂತಾಗುತ್ತದೆ.

ಈಗಾಗಲೇ ಲಾಕ್​ಡೌನ್ ಕಾರಣಕ್ಕೆ ಬೆಂಗಳೂರಿನಲ್ಲಿದ್ದ ಜನರು ಗ್ರಾಮೀಣ ಭಾಗಕ್ಕೆ ಹೋದರು. ಪರಿಣಾಮ ಇಲ್ಲಿಂದ ಸೋಂಕು ರಾಜ್ಯದ ಹಲವು ಜಿಲ್ಲೆಗಳಿಗೆ ಹರಡುವಿಕೆ ಸಾಕ್ಷಿಯಾಯಿತು. ಈಗ ಮತ್ತೆ ಲಾಕ್​​ಡೌನ್​​ಗೆ ವಿದಾಯ ಹೇಳಿದರೆ, ಊರು ಸೇರಿದವರು ಮರಳಿ ಬರುವುದರಿಂದ ಮತ್ತಷ್ಟು ಸೋಂಕು ಉಲ್ಬಣವಾಗಲಿದೆ. ಹೀಗಾಗಿ ಈಗ ಇರುವ ಸ್ಥಿತಿಯನ್ನ ಮುಂದುವರೆಸಿದರೆ ಹಂತ ಹಂತವಾಗಿ ಕೊರೊನಾ ನಿಯಂತ್ರಣಕ್ಕೆ ಬರಲಿದೆ.

ಇದನ್ನೂ ಓದಿ: ''ಕೊಡುವ ಮೂರು ಸಾವಿರ ರೂಪಾಯಿಯಲ್ಲಿ ಬಾಡಿಗೆ ಕಟ್ಬೇಕಾ? ಬಡ್ಡಿ ಕಟ್ಬೇಕಾ? ಫೈನಾನ್ಸ್​ ಕಟ್ಬೇಕಾ..?''

ಪಾಸಿಟಿವಿಟಿ ರೇಟು ಶೇಕಡಾ 5ಕ್ಕೆ ಇಳಿದರೆ ಸೋಂಕು ನಿಯಂತ್ರಣದಲ್ಲಿದೆ ಎಂದರ್ಥ.‌ ಸದ್ಯ ಪಾಸಿಟಿವ್ ರೇಟು ಶೇಕಡಾ 25ರ ಗಡಿದಾಟಿದೆ. ಹೀಗಾಗಿ ಕೊರೊನಾ ನಿಯಂತ್ರಣ ಮೀರಿದೆ. ಇದನ್ನ ಮತ್ತೆ ನಿಯಂತ್ರಣಕ್ಕೆ ತರಬೇಕು ಅಂದರೆ ಕಠಿಣ ಲಾಕ್​ಡೌನ್ ಅಗತ್ಯವಾಗಿದೆ. ಇದಕ್ಕಾಗಿ ತ್ವರಿತ ಚಿಕಿತ್ಸೆ, ಹೆಚ್ಚು ಟೆಸ್ಟಿಂಗ್, ಟ್ರೆಸಿಂಗ್ ಮಾಡಬೇಕಿದೆ. ಈ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು.

'ಕೋವಿಡ್ ಟೆಸ್ಟಿಂಗ್ ಏರಿಕೆ ಆದರಷ್ಟೇ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ'

ಒಂದು ಕಾಲದಲ್ಲಿ ನಿತ್ಯ 2 ಲಕ್ಷ ಸನಿಹದಷ್ಟು ಮಂದಿಗೆ ಕೋವಿಡ್ ಟೆಸ್ಟ್ ಮಾಡುತ್ತಿದ್ದ ಸರ್ಕಾರ ಇದೀಗ 96 ಸಾವಿರಕ್ಕೆ ಇಳಿಸಿದೆ. ಈ ಪ್ರಕ್ರಿಯೆಯಿಂದ ಸಾವಿನ ಸಂಖ್ಯೆ ಹೆಚ್ಚಾಗ್ತಿದ್ದು, ಈ ಹಿಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಹೆಚ್ಚಳ ಮಾಡುವ ಅಗತ್ಯವಿದೆ ಎಂಬುದು ಫನಾ ಸಂಘದ ಅಧ್ಯಕ್ಷರ ಅಭಿಪ್ರಾಯ.

ಲಾಕ್​ಡೌನ್​​ಗೂ ಕೋವಿಡ್ ಸೋಂಕಿತರ ಸಾವಿಗೆ ಯಾವುದೇ ಸಂಬಂಧವಿಲ್ಲ‌. ಸಾವಿನ ಪ್ರಮಾಣ ಕಡಿಮೆಯಾಗಲು ಟೆಸ್ಟ್ ಸಂಖ್ಯೆ ಹೆಚ್ಚಿಸಬೇಕು, ಆಗ ಸೋಂಕಿತರಿಗೆ ಬಹುಬೇಗ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಬಹಳಷ್ಟು ಮಂದಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳದೇ, ಮನೆಯಲ್ಲೇ ಮಾತ್ರೆಗಳನ್ನ ತೆಗೆದುಕೊಳ್ಳುತ್ತಿದ್ದು, ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಬರುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಡಾ.ಪ್ರಸನ್ನ ಅವರ ಅಭಿಪ್ರಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.