ನವದೆಹಲಿ: ದೇಶದಲ್ಲಿ ಕಳೆದ ಒಂದು ತಿಂಗಳಿಂದ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಈ ಹಿಂದೆ ಇಂಧನ ದರವನ್ನು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿತ್ತು. ಇದರಿಂದ 2 ವಾರಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 10 ರೂ. ಹೆಚ್ಚಾಗಿತ್ತು.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ ₹ 105.41 ಇದ್ದು, ಲೀಟರ್ ಡೀಸೆಲ್ ಬೆಲೆ ₹ 96.67 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 120.51, ಡೀಸೆಲ್ ₹ 104.71ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 110.86 ರೂ. ಹಾಗೂ ಲೀಟರ್ ಡೀಸೆಲ್ ದರ 100.94 ರೂ. ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 115.12 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 99.83 ರೂ. ಆಗಿದೆ. ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 119.49 ರೂ. ಹಾಗೂ ಲೀಟರ್ ಡೀಸೆಲ್ ದರ 105.49 ರೂ. ನಿಗದಿಯಾಗಿದೆ.
ರಾಜ್ಯದಲ್ಲಿ ಇಂದಿನ ತೈಲ ದರ:
- ಮಂಗಳೂರು : ಪೆಟ್ರೋಲ್-110.29 ರೂ. ಮತ್ತು ಡಿಸೇಲ್-94.03 ರೂ.
- ಮೈಸೂರು : ಪೆಟ್ರೋಲ್ -110.59 ರೂ.ಮತ್ತು ಡೀಸೆಲ್ -94.34 ರೂ.
- ಬೆಂಗಳೂರು: ಪೆಟ್ರೋಲ್ - 111.11 ರೂ., ಡೀಸೆಲ್ - 94.81 ರೂ. ಮತ್ತು ಸ್ಪೀಡ್ ಪೆಟ್ರೋಲ್ ದರ - 114.06 ರೂ. ಇದೆ.
- ಹುಬ್ಬಳ್ಳಿ: ಪೆಟ್ರೋಲ್ - 110.81ರೂ., ಡೀಸೆಲ್ - 94.56ರೂ.
- ಬೆಳಗಾವಿ: ಪೆಟ್ರೋಲ್- 111, ಡೀಸೆಲ್ - 95
(ಇದನ್ನೂ ಓದಿ: ವಿದೇಶಿ ಮಾರುಕಟ್ಟೆಗಳ ಪ್ರಭಾವ: ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ!)