ಬೆಂಗಳೂರು : ನಗರದ ಸೌತ್ ಎಂಡ್ ಸರ್ಕಲ್ನಲ್ಲಿ ನಕಲಿ ವಿಕಲಚೇತನನ ಬಣ್ಣ ಬಟಾ ಬಯಲಾಗಿದೆ. ಕೈಯಿಲ್ಲ ಎಂದು ನಟಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೆ ಜನರು ಛೀಮಾರಿ ಹಾಕಿದ್ದಾರೆ.
ಎರಡೂ ಕೈಗಳಿದ್ದರೂ ಕೂಡ ಈ ಭೂಪ ಒಂದು ಕೈಯನ್ನು ಬಟ್ಟೆಯೊಳಗೆ ಅಡಗಿಸಿಟ್ಟುಕೊಂಡು ಕೈಯಿಲ್ಲದಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ. ಒಂದು ಕೈಯಲ್ಲಿ ಊರುಗೋಲು ಹಿಡಿದು ಹೋಗಿ ಬರುವ ವಾಹನ ಸವಾರರ ಬಳಿ ಹಣ ಬೇಡುತ್ತಿದ್ದ. ಪ್ರಯಾಣಿಕರೂ ಸಹ ಕೊರೊನಾ ಸಮಯ, ತಿನ್ನಲು ಏನೂ ಇಲ್ವೇನೋ ಎಂದು ಅಯ್ಯೋಪಾಪ ಎಂಬ ಕನಿಕರದಿಂದ ದುಡ್ಡು ನೀಡುತ್ತಿದ್ದರು.
ಇದನ್ನೂ ಓದಿ: ಠಾಣೆಯಲ್ಲಿದ್ದ ವಾಹನದ ನಂಬರ್ ಪ್ಲೇಟ್ ನಕಲು ಮಾಡಿ ಸ್ಕೂಟಿಯಲ್ಲಿ ಸುತ್ತಾಡುತ್ತಿರುವ ಭೂಪ
ಇದೀಗ ಒಬ್ಬರು ಈತನ ಅಸಲಿ ಮುಖವಾಡವನ್ನು ಬಯಲು ಮಾಡಿದ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಕೊರೊನಾ ಸಮಯದಲ್ಲಿ ಎಲ್ಲರೂ ಕಷ್ಟದಲ್ಲಿದ್ದರೂ ನಿಮ್ಮಂತವರಿಗೆ ಹತ್ತು ರೂಪಾಯಿಯಾದರೂ ಭಿಕ್ಷೆ ಕೊಡುತ್ತಾರೆ.
ಆದರೆ, ನಿಮ್ಮಂತವರಿಂದ ನಿಜವಾದ ವಿಕಲಚೇತನರಿಗೂ ಅವಮಾನ ಮಾಡಿದಂತೆ. ಕೈ ಸರಿ ಇದ್ದರೂ ದುಡಿದು ತಿನ್ನಲು ಏನ್ ಕಷ್ಟ ಎಂದು ಕಿಡಿಕಾರಿದ್ದಾರೆ.