ETV Bharat / city

ವಿಶ್ವ ಪರಿಸರ ದಿನಕ್ಕೆ ಆರಂಭವಾಯ್ತು ಅರಳಿ ಗಿಡ ನೆಡುವ ಚಾಲೆಂಜ್ - ಕೃಷಿತಜ್ಞ ವಿಶ್ವನಾಥ್ ಅಣೇಕಟ್ಟೆ

ವಿಶ್ವ ಪರಿಸರ ದಿನವನ್ನು ಜವಾಬ್ದಾರಿಯುತವಾಗಿ ಆಚರಿಸಲು, ಜೂನ್ ತಿಂಗಳ ಒಳಗೆ ಒಂದು ಅರಳಿಮರ ನೆಡುವ ಸವಾಲನ್ನು ಒಬ್ಬರಿಗೊಬ್ಬರು ಸ್ವೀಕರಿಸಲು ಆರಂಭವಾಗಿದೆ. ಮನೆ ಹತ್ತಿರದಲ್ಲೋ, ಜಮೀನಿನಲ್ಲೋ, ಸಾರ್ವಜನಿಕ ಜಾಗದಲ್ಲಿಯೋ ನೆಡಬಹುದಾಗಿದೆ. . ಏನಿದು ಅಂತೀರಾ..? ನೀವೇ ನೋಡಿ.

peepul-tree-planting-challenge
ಅರಳಿ ಗಿಡ ನೆಡುವ ಚಾಲೆಂಜ್
author img

By

Published : Jun 5, 2021, 8:55 PM IST

ಬೆಂಗಳೂರು: ಜೂನ್ 05 ಪ್ರತೀ ವರ್ಷ ಪರಿಸರದ ಕುರಿತು ಕಾಳಜಿ ತೋರಿಸಲು, ಪರಿಸರದಿಂದ ನಮಗಾಗುತ್ತಿರುವ ಉಪಯೋಗಗಳ ಕುರಿತು ನೆನೆಯುವ ದಿನ. ಆದರೆ, ಪರಿಸರ ದಿನದಂದೇ, ಪರಿಸರಕ್ಕೆ ಉಪಯುಕ್ತವಾಗುವಂತಹ ಯಾವುದಾದರೂ ಕೆಲಸಗಳನ್ನು ಮಾಡಿಯಾದರೂ, ಪ್ರಕೃತಿ ರಕ್ಷಣೆಗೆ ಮುಂದಾಗುವುದು ನಾಗರಿಕರ ಜವಾಬ್ದಾರಿ. ಇದೇ ರೀತಿ ನಗರದಲ್ಲಿ ಇದೀಗ ಅರಳಿಮರ ಚಾಲೆಂಜ್ ಆರಂಭವಾಗಿದೆ.

ಓದಿ: ದಾರಿ ತಪ್ಪಿ ಬಂದ ಮೊಸಳೆ.. ಹಿಡಿದು ಕಂಬಕ್ಕೆ ಕಟ್ಟಿಹಾಕಿದ ಗ್ರಾಮಸ್ಥರು

ಅರಳಿಗಿಡ ನೆಡುವ ಚಾಲೆಂಜ್:

ವಿಶ್ವ ಪರಿಸರ ದಿನವನ್ನು ಜವಾಬ್ದಾರಿಯುತವಾಗಿ ಆಚರಿಸಲು, ಜೂನ್ ತಿಂಗಳ ಒಳಗೆ ಒಂದು ಅರಳಿಮರವನ್ನು ನೆಡುವ ಸವಾಲನ್ನು ಒಬ್ಬರಿಗೊಬ್ಬರು ಸ್ವೀಕರಿಸಲು ಆರಂಭವಾಗಿದೆ. ಮನೆ ಹತ್ತಿರದಲ್ಲೋ, ಜಮೀನಿನಲ್ಲೋ, ಸಾರ್ವಜನಿಕ ಜಾಗದಲ್ಲಿಯೋ ನೆಡಬಹುದಾಗಿದೆ.

ಅಂದಹಾಗೇ ಈ ಚಾಲೆಂಜ್ ಆರಂಭಿಸಿದವರು ಕೃಷಿತಜ್ಞ ವಿಶ್ವನಾಥ್ ಅಣೆಕಟ್ಟೆ ಅವರು. ಇದಕ್ಕೆ ಕಾರಣವನ್ನೂ ತಿಳಿಸುವ ಅವರು, ಉತ್ತರಪ್ರದೇಶದಲ್ಲಿ ಕೋವಿಡ್ ನಿಂದ ಸಾಕಷ್ಟು ಜನರಿಗೆ ಆಮ್ಲಜನಕದ ಸಮಸ್ಯೆಯಾದಾಗ, ಆಸ್ಪತ್ರೆಗಳಲ್ಲೂ ಕೃತಕ ಆಮ್ಲಜನಕ ಸಿಗದೇ ಇದ್ದಾಗ, ವಾಪಸ್ ಊರಿಗೆ ಬಂದ ಕೋವಿಡ್ ಸೋಂಕಿತರು ಅರಳಿಮರದ ಕೆಳಗೆ ಮಲಗಿದ್ದಾರೆ. ಇದರಿಂದ ಅವರ ಉಸಿರಾಟವೂ ಸರಾಗವಾಗಿ ಆಗಿದೆ.

ಏಕೆಂದರೆ ರಾತ್ರಿ ಸಮಯದಲ್ಲಿಯೂ, ಹಗಲಲ್ಲೂ ಹೆಚ್ಚು ಆಮ್ಲಜನಕ ಹೊರಸೂಸುವ ಮರ ಅರಳೀಮರ. ಈಗಾಗಲೇ ಆಮ್ಲಜನಕದ ಸಮಸ್ಯೆ ಇರುವುದರಿಂದ ಮುಂದಿನ ದಿನಗಳಲ್ಲಾದರೂ ಇದು ಕಾಡದಂತೆ, ಪ್ರತಿಯೊಬ್ಬರೂ ಗಿಡ ನೆಡುವಂತೆ ಚಾಲೆಂಜ್ ಮಾಡಿದ್ದಾರೆ. ಈಗಾಗಲೇ 25 ಮಂದಿ ಈ ಚಾಲೆಂಜ್ ಸ್ವೀಕರಿಸಿದ್ದು, ಜೂನ್ ಒಳಗೆ ಈ ಅರಳಿಗಿಡ ನೆಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಸವಾಲು ಸ್ವೀಕರಿಸುವವರಿಗಾಗಿಯೇ ವಾಟ್ಸ್​ಆ್ಯಪ್​ ತಂಡ ಮಾಡಿದ್ದು, ನೆಟ್ಟ ಗಿಡದೊಂದಿಗೆ ಒಂದು ಸೆಲ್ಫಿ ಕಳಿಸಲು ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.