ದೇವನಹಳ್ಳಿ: ಉಕ್ರೇನ್‌ನ ಯುದ್ಧ ಭೂಮಿಯಿಂದ ತವರಿಗೆ ಬಂದಿಳಿದ ಕರುನಾಡಿನ ವಿದ್ಯಾರ್ಥಿಗಳಿಗೆ ಪೋಷಕರು ತಿರುಪತಿ ಲಡ್ಡು, ಮಂತ್ರಾಲಯದ ಸಿಹಿ ತಿನ್ನಿಸಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಉಕ್ರೇನ್‌ನಿಂದ ತವರಿಗೆ ವಾಪಸ್ಸಾಗುತ್ತೇವೆ ಎಂಬ ವಿಶ್ವಾಸ ಇರಲಿಲ್ಲ. ಅಕ್ಕಪಕ್ಕದಲ್ಲೇ ಬಾಂಬ್, ಶೆಲ್‌ಗಳ ಶಬ್ದ ಕಿವಿಗೆ ಬಡಿಯುತ್ತಿತ್ತು. ನಾವು 3 ಜನ ಝಪೊರಿಝಿಯಾ ವಿಶ್ವವಿದ್ಯಾಲಯದಲ್ಲಿ ಮಡಿಕಲ್ ವ್ಯಾಸಂಗ ಮಾಡ್ತಿದ್ವಿ. ರಷ್ಯಾ ಯುದ್ಧ ಘೋಷಿಸಿದ್ದರಿಂದ ತಾಯ್ನಾಡಿಗೆ ಬರುವ ಭರವಸೆಗೆ ಕೇಂದ್ರ ಸರ್ಕಾರ ಮತ್ತು ಭಾರತ ರಾಯಭಾರ ಕಚೇರಿ ಬೆಂಬಲ ನೀಡಿದೆ ಎಂದು ಹೇಳಿದರು.
ಆಪರೇಷನ್ ಗಂಗಾ ಯೋಜನೆಯ ಮೂಲಕ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಏರ್‌ಲಿಫ್ಟ್ ಮಾಡಿದ್ದಕ್ಕಾಗಿ ಪೋಷಕರು ಪ್ರಧಾನಿ ಮೋದಿ, ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
ಇಂದು ಒಟ್ಟು 74 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿದ್ದು ಪೋಷಕರೊಂದಿಗೆ ಸಂತಸದಿಂದ ತಮ್ಮ ಮನೆಗಳತ್ತ ತೆರಳಿದರು.
ಇದನ್ನೂ ಓದಿ: ಹೆಚ್ಐವಿಗೆ ತುತ್ತಾಗಿದ್ರೂ ಸಾವಿನ ಭಯ ಬದಿಗಿಟ್ಟು ಬದುಕಿದ ಬೆಳಗಾವಿ ಮಹಿಳೆ