ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದೆ. ಹೀಗಾಗಿ, ಪರೀಕ್ಷೆಗೆ ಕಟ್ಟಿದ ಶುಲ್ಕ ವಾಪಸ್ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ನಡೆಯದೇ ಇರುವುದರಿಂದ ಶುಲ್ಕ ಮರುಪಾವತಿಸಿ ಎಂದು ಪೋಷಕರ ಸಮನ್ವಯ ಸಮಿತಿ ವತಿಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿದ್ದಾರೆ. ಪರೀಕ್ಷಾ ಶುಲ್ಕ ಬರೋಬ್ಬರಿ 11 ಕೋಟಿ ಸಂಗ್ರಹವಾಗಿದ್ದು, ತಲಾ ಒಂದು ವಿದ್ಯಾರ್ಥಿಯಿಂದ 190 ರೂ. ಶುಲ್ಕ ಸಂಗ್ರಹಿಸಲಾಗಿದೆ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ 50 ರೂ. ಸಂಗ್ರಹಿಸಲಾಗಿದೆ.
ಪರೀಕ್ಷೆ ರದ್ದಾದ ಮೇಲೆ ಫೀಸ್ ಯಾಕೆ, ಪಿಯುಸಿ ಶುಲ್ಕ ವಾಪಸ್ ಕೊಡಿ ಎಂದು ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪಿಯುಸಿ ಫಲಿತಾಂಶ ಗೊಂದಲ: 3 ಸಲಹೆ, 6 ಸವಾಲುಗಳನ್ನು ಮುಂದಿಟ್ಟ ರುಪ್ಸಾ