ETV Bharat / city

ಆಸ್ಪತ್ರೆಗಳಲ್ಲಿ ಆಕ್ಸಿಜನ್​​ ಆಡಿಟ್ ಕಡ್ಡಾಯ: ಹೈಕೋರ್ಟ್ ನಿರ್ದೇಶನದನಂತೆ ಹೊಸ ಮಾರ್ಗಸೂಚಿ - Oxygen audit

ಕೋವಿಡ್ ನಿಯಂತ್ರಣ ಕುರಿತಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್. ಸುಬ್ರಮಣ್ಯಂ ಈ ಮಾಹಿತಿ ನೀಡಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರಡಿ ವೈದ್ಯಕೀಯ ಆಕ್ಸಿಜನ್ ನಿರ್ವಹಣೆಯ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಅವುಗಳನ್ನು ಉಲ್ಲಂಘಿಸಿದವರಿಗೆ ನಿಯಮದ ಪ್ರಕಾರ ದಂಡನೆಗೆ ಒಳಪಡಿಸಬಹುದಾಗಿದೆ.

oxygen-audit-compulsory-in-hospitals
ಹೈಕೋರ್ಟ್ ನಿರ್ದೇಶನ
author img

By

Published : May 17, 2021, 8:52 PM IST

ಬೆಂಗಳೂರು: ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರ ಎಲ್ಲ ಆಸ್ಪತ್ರೆಗಳಿಗೆ ಪೂರೈಸುತ್ತಿರುವ ಆಕ್ಸಿಜನ್​ನ ಆಡಿಟ್ ಕಡ್ಡಾಯಗೊಳಿಸಿದೆ. ಹಾಗೆಯೇ, ವೈದ್ಯಕಿಯ ಆಕ್ಸಿಜನ್ ಅನ್ನು ಆಸ್ಪತ್ರೆಗೆ ಬಿಟ್ಟು ಬೇರೆಲ್ಲಿಗೂ ಪೂರೈಕೆ ಮಾಡುವಂತಿಲ್ಲ ಎಂದು ಮಾರ್ಗಸೂಚಿ ರೂಪಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಕೋವಿಡ್ ನಿಯಂತ್ರಣ ಕುರಿತಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್. ಸುಬ್ರಮಣ್ಯಂ ಈ ಮಾಹಿತಿ ನೀಡಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರಡಿ ವೈದ್ಯಕೀಯ ಆಕ್ಸಿಜನ್ ನಿರ್ವಹಣೆಯ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಅವುಗಳನ್ನು ಉಲ್ಲಂಘಿಸಿದವರಿಗೆ ನಿಯಮದ ಪ್ರಕಾರ ದಂಡನೆಗೆ ಒಳಪಡಿಸಬಹುದಾಗಿದೆ.

ಮಾರ್ಗಸೂಚಿ ಪ್ರಕಾರ ಆಕ್ಸಿಜನ್ ರಿಫಿಲ್ ಮಾಡುವವರು ಇನ್ಮುಂದೆ ಖಾಸಗಿ ವ್ಯಕ್ತಿಗಳಿಗೆ ಆಮ್ಲಜನಕವನ್ನು ಪೂರೈಸುವುದು ನಿಷಿದ್ಧವಾಗಿದೆ ಮತ್ತು ಎಲ್ಲ ವೈದ್ಯಕೀಯ ಆಕ್ಸಿಜನ್ ಅನ್ನು ಆಸ್ಪತ್ರೆಗಳಿಗೆ ಮಾತ್ರ ಪೂರೈಕೆ ಮಾಡಬೇಕಾಗಿದೆ. ಜಿಲ್ಲೆಗಳಲ್ಲಿ ಆಮ್ಲಜನಕ ಕೊರತೆ ಉಂಟಾಗದಂತೆ ಜಿಲ್ಲಾಧಿಕಾರಿ ಬಫರ್ ಸ್ಟಾಕ್ ಹೊಂದಿರಬೇಕು. ಜಿಲ್ಲಾವಾರು ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತು ನಾನಾ ವರ್ಗದ ರೋಗಿಗಳು ಆಮ್ಲಜನಕ ಬಳಕೆ ಆಧರಿಸಿ ಅದನ್ನು ಹಂಚಿಕೆ ಮಾಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಬೆಂಗಳೂರಿನ 8 ವಲಯಗಳಲ್ಲಿ ಮತ್ತು 30 ಜಿಲ್ಲೆಗಳಲ್ಲಿ ದಿನದ 24 ಗಂಟೆಗಳೂ ಆಕ್ಸಿಜನ್ ಕೋಶಗಳು ಕಾರ್ಯನಿರ್ವಹಿಸಲಿವೆ. ಆಕ್ಸಿಜೆನ್ ಪೂರೈಕೆ ಹೆಚ್ಚಳದ ವ್ಯವಸ್ಥೆ ಇಲ್ಲದೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಬೆಡ್ ಗಳ ಹೆಚ್ಚಳ ಮಾಡುವಂತಿಲ್ಲ, ಪ್ರತಿ ಜಿಲ್ಲೆಯಲ್ಲಿ ದಿನ ಬಳಕೆ ಮಾಡುವ ಆಮ್ಲಜನಕದಲ್ಲಿ ಶೇ.10ರಷ್ಟು ಬಫರ್ ದಾಸ್ತಾನು ಹೊಂದಬೇಕು ಮತ್ತು ಬಾಟ್ಲಿಂಗ್ ಘಟಕಗಳಿಲ್ಲದ ಜಿಲ್ಲೆಗಳಲ್ಲಿ ಶೇ.20ರಷ್ಟು ಬಫರ್ ಸ್ಟಾಕ್ ಹೊಂದಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆಳೆರಡೂ ಆಮ್ಲಜನಕಕ್ಕಾಗಿ ಆಕ್ಸಿಜನ್​ ಉತ್ಪಾದಕರು ಮತ್ತು ರಿಫಿಲ್ಲರ್ ಗಳೊಂದಿಗೆ ತಾವೇ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.