ETV Bharat / city

ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ಮೊದಲ ಆದ್ಯತೆ.. ಪರಿಷತ್‌ನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ಅಧಿಕಾರ ವಹಿಸಿಕೊಂಡ ತಕ್ಷಣ ನೆರೆ ಸಮಸ್ಯೆ ಬಂತು. ಆಗ ಸಂಪುಟ ಸದಸ್ಯರು ಇರಲಿಲ್ಲ. ಒಬ್ಬನೇ ಅಧಿಕಾರಿಗಳ ಜತೆ‌ ಸುತ್ತಾಡಿ ತಿಂಗಳುಗಳ ಕಾಲ ಕೆಲಸ ಮಾಡಿದ್ದೇನೆ. ಹಲವು ವರ್ಷಗಳ ಈಚೆ ಇಂತಹ ಪ್ರವಾಹ ಬಂದಿರಲಿಲ್ಲ. ಪರಿಹಾರಕ್ಕೆ ಶ್ರಮಿಸಿದ್ದೇನೆ. ನಾನು ಯಾವ ಸುಳ್ಳೂ ಹೇಳಿಲ್ಲ, ವಾಸ್ತವವನ್ನು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ್ದೇನೆ. ಕೇಂದ್ರದಿಂದ ಬಿಡುಗಡೆ ಆದ ಹಣ, ಆದ ನಷ್ಟ, ಹೊಸ ಮನೆ ನಿರ್ಮಾಣದ ವಿವರ ನೀಡಿದ್ದೇನೆ.

B.S. Yeddyurappa
ಬಿ.ಎಸ್. ಯಡಿಯೂರಪ್ಪ
author img

By

Published : Mar 9, 2020, 7:35 PM IST

ಬೆಂಗಳೂರು: ರಾಜ್ಯವನ್ನು ಸುಸ್ಥಿರವಾಗಿ ಅಭಿವೃದ್ಧಿ ಮಾಡುವುದೇ ತಮ್ಮ ಆದ್ಯತೆಯಾಗಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ನನಗೆ ಕೆಲಕಾಲ ಸಮಯ ಕೊಡಿ. ನಾನು ಅಧಿಕಾರಕ್ಕೆ ಬಂದು 7 ತಿಂಗಳಾಗಿದೆ. ನಿರಾವರಿಗೆ ಹೆಚ್ಚು ಆದ್ಯತೆ ಕೊಡಬೇಕಾಗಿದೆ. ರೈತ ನೆಮ್ಮದಿ, ಸ್ವಾವಲಂಬಿಯಾಗಿ ಬದುಕಬೇಕಾದರೆ ನೀರಿನ ಸೌಕರ್ಯ ಕಲ್ಪಿಸಬೇಕಾಗಿದೆ. ಸುಪ್ರೀಂ ತೀರ್ಪು ಮಹದಾಯಿ ವಿಚಾರದಲ್ಲಿ ಸಿಕ್ಕಿದೆ. ಆದಷ್ಟು ಬೇಗ ಅಭಿವೃದ್ಧಿಯ ಕಾರ್ಯ ಆರಂಭಿಸುತ್ತೇವೆ. ಕೃಷ್ಣಾ ಮೇಲ್ದಂಡೆ ವಿಚಾರವಾಗಿ ಹಿರಿಯರು ನೀಡಿದ ಸಲಹೆ ಹಾಗೂ ನಮ್ಮ ಆರ್ಥಿಕ ಇತಿಮಿತಿಯಲ್ಲಿ ಕೆಲಸ ಮಾಡಬೇಕಾಗಿದೆ. ಸದ್ಯ ವಾರ್ಷಿಕ 25 ಸಾವಿರ ಕೋಟಿಯಂತೆ ಮೂರು ವರ್ಷ ನಿರಂತರ ಹಣ ನೀಡಿ ಯೋಜನೆ ಪೂರ್ಣಗೊಳಿಸಿ ಎಂದು ಸಲಹೆ ನೀಡಿದ್ದಾರೆ. ಅದರ ಪ್ರಕಾರ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

ಅಧಿಕಾರ ವಹಿಸಿಕೊಂಡ ತಕ್ಷಣ ನೆರೆ ಸಮಸ್ಯೆ ಬಂತು. ಆಗ ಸಂಪುಟ ಸದಸ್ಯರು ಇರಲಿಲ್ಲ. ಒಬ್ಬನೇ ಅಧಿಕಾರಿಗಳ ಜತೆ‌ ಸುತ್ತಾಡಿ ತಿಂಗಳುಗಳ ಕಾಲ ಕೆಲಸ ಮಾಡಿದ್ದೇನೆ. ಹಲವು ವರ್ಷಗಳ ಈಚೆ ಇಂತಹ ಪ್ರವಾಹ ಬಂದಿರಲಿಲ್ಲ. ಪರಿಹಾರಕ್ಕೆ ಶ್ರಮಿಸಿದ್ದೇನೆ. ನಾನು ಯಾವ ಸುಳ್ಳೂ ಹೇಳಿಲ್ಲ, ವಾಸ್ತವವನ್ನು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ್ದೇನೆ. ಕೇಂದ್ರದಿಂದ ಬಿಡುಗಡೆ ಆದ ಹಣ, ಆದ ನಷ್ಟ, ಹೊಸ ಮನೆ ನಿರ್ಮಾಣದ ವಿವರ ನೀಡಿದ್ದೇನೆ.

ಪ್ರತಿ ಮನೆ ನಿರ್ಮಾಣಕ್ಕೆ ಐದು ಲಕ್ಷ ಘೋಷಿಸಿದ್ದು, ಮೊದಲ ಹಂತದಲ್ಲಿ ₹1 ಲಕ್ಷ ನೀಡಿದ್ದೇವೆ. 2ನೇ ಕಂತು ಬಿಡುಗಡೆ ಕಾರ್ಯ ಆರಂಭವಾಗಲಿದೆ. ಸಿಎಂ ಕಿಸಾನ್ ಯೋಜನೆಯಡಿ 4 ಸಾವಿರ ಜನರಿಗೆ ಸೌಲಭ್ಯ ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೃಷಿ ಮತ್ತು ಇತರೆ ಭಾಗಗಳಿಗೆ ಉತ್ತೇನ ನೀಡಲು ಯತ್ನಿಸುತ್ತೇನೆ. ಹೆಚ್ವು ಅನುದಾನ ಕೃಷಿಗೆ ಮೀಸಲಿಟ್ಟಿದ್ದೇನೆ. ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಇಲಾಖೆಗೆ ಬಿಡುಗಡೆ ಮಾಡಿದ ಹಣದ ವಿವರ ಸದನಕ್ಕೆ ನೀಡುತ್ತಿದ್ದೇನೆ ಎಂದರು.

ಕೈಗಾರಿಕೆಗೆ ಉತ್ತೇಜನ ಕೊಟ್ಟಿದ್ದೇನೆ. ಹುಬ್ಬಳ್ಳಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದ ಮೂಲಕ 70 ಸಾವಿರ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ಇನ್ವೆಸ್ಟ್ ಕರ್ನಾಟಕ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ಹೂಡಿಕೆದಾರರನ್ನ ರಾಜ್ಯಕ್ಕೆ ಕರೆತರುವ ಕೆಲಸ ಮಾಡುತ್ತಿದ್ದೇವೆ. 1 ಲಕ್ಷ ಮನೆ ನಿರ್ಮಿಸುವ ಯೋಜನೆ ನಮ್ಮ ಮುಂದಿದೆ. 900 ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ರಾಜ್ಯದ ಮತದಾರರು ಬಿಜೆಪಿ ಕಾರ್ಯ ನಿರ್ವಹಣೆಯನ್ನು ಮೆಚ್ಚಿದ್ದಾರೆ, ಅದಕ್ಕೆ ಲೋಕಸಭೆ ಚುನಾವಣೆಯಲ್ಲಿ 25 ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಿದ್ದೇವೆ ಎಂದಾಗ ಆಪರೇಷನ್ ಕಮಲದ ವಿಚಾರ ಪ್ರಸ್ತಾಪಿಸಿ ಪ್ರತಿಪಕ್ಷಗಳು ಗದ್ದಲ ನಡೆಸಿದವು. ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಸದಸ್ಯರು ಅವರ ವಿರುದ್ಧ ಕಿಡಿಕಾರಿದರು.

ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಸಿಎಂ ಭಾಷಣ ಮುಗಿಯಲಿ, ಆಮೇಲೆ ಮಾತಾಡಿ ಎಂದು ಸಲಹೆ ನೀಡಿದರು. ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಎದ್ದು ನಿಂತು ಆಡಳಿತ ಪಕ್ಷ ಸದಸ್ಯರು ಸುಮ್ಮನಾಗಿ ಎಂದರು. ಕೊನೆಗೆ ಸಿಎಂ ಸೂಚನೆ ನೀಡಿ ಮಾತು ಮುಂದುವರಿಸಿ, ನಾನು ಏಳು ತಿಂಗಳಲ್ಲಿ ಬಹುದೊಡ್ಡ ಸಾಧನೆ ಏನೂ ಮಾಡಿಲ್ಲ, ಕೇಂದ್ರ ಸರ್ಕಾರ ಹಣ ನೀಡದಿರುವುದನ್ನು ವಿವರಿಸಿದ್ದೇನೆ. ಇತಿಮಿತಿಯಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಬೆಂಗಳೂರಿನಲ್ಲಿ ಭೂಮಿ ನುಂಗಿದವರಿಂದ ವಾಪಸ್ ಪಡೆಯುವ ಯತ್ನ ಮಾಡುತ್ತಿದ್ದೇನೆ. ಕೆ ಜಿ ಬೋಪಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅವರ ವರದಿ ಆಧರಿಸಿ ಪ್ರತಿ ತಿಂಗಳು ಒತ್ತುವರಿ ತೆರವು ಮಾಡುತ್ತೇವೆ.

ರಾಜ್ಯಕ್ಕೆ ಎದುರಾಗುವ ಹಣದ ಕೊರತೆಯನ್ನು ಇದರಿಂದ ಭರಿಸಿಕೊಳ್ಳುತ್ತೇವೆ. ಕ್ರಿಶ್ಚಿಯನ್ ಸಮುದಾಯಕ್ಕೆ ₹ 200 ಕೋಟಿ ನೀಡಿದ್ದೇವೆ. ಅದರ ಸದ್ಬಳಕೆಗೆ ಕ್ರಮ ಕೈಗೊಳ್ಳುತ್ತೇವೆ. ಸದಸ್ಯರೆಲ್ಲಾ ನೀಡಿದ ಸಲಹೆ ಸ್ವೀಕರಿಸಿ ಗೌರವ ನೀಡುತ್ತೇನೆ, ನೆರೆ ಸಂತ್ರಸ್ತರಿಗೆ ಹಣ ಪೂರ್ಣ ನೀಡುತ್ತೇನೆ. ಅಕ್ರಮ ಆಗಿದ್ದರೆ ದಾಖಲೆ ನೀಡಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿದ್ದು ಎಲ್ಲವನ್ನೂ ಗಮನಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.