ETV Bharat / city

ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ಪ್ರಯತ್ನ: ಸಿಎಂ ಭರವಸೆ

author img

By

Published : May 13, 2022, 1:10 PM IST

Updated : May 13, 2022, 1:23 PM IST

ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು..

cm basavaraja bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ. ಮಾದಿಗರ ಪರವಾಗಿ ನಮ್ಮ ಸರ್ಕಾರವಿದೆ. ಈ ಸಮುದಾಯದ ಯೋಜನೆಗಳ ಅನುಷ್ಠಾನ, ಬೇಡಿಕೆಗಳ ಈಡೇರಿಕೆಯ ವಿಚಾರದಲ್ಲಿ ಕೇವಲ ನನ್ನ ಮನೆ ಬಾಗಿಲು ಮಾತ್ರವಲ್ಲ ಹೃದಯದ ಬಾಗಿಲು ಕೂಡ ಸದಾ ತೆರೆದಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು 4ನೇ ವಿಶ್ವ ಮಾದಿಗ ದಿನದ ಅಂಗವಾಗಿ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಳ ಮೀಸಲಾತಿ ಮಾಡುವ ಪ್ರಕ್ರಿಯೆಯಲ್ಲಿ ಯಾರಿಗೂ ಕೂಡ ಅನ್ಯಾಯವಾಗಬಾರದು. ಹಾಗಾದಾಗ ಮಾತ್ರ ಅದು ಶಾಶ್ವತವಾಗಿ ಉಳಿಯಲಿದೆ.

ಸದ್ಯ ಕ್ಲಿಷ್ಟಕರ ಸನ್ನಿವೇಶವಿದ್ದು, ಹೇಗೆ ಒಳ ಮೀಸಲಾತಿ ಒದಗಿಸಬೇಕು ಅಂತಾ ಎಲ್ಲರೂ ಮಾರ್ಗದರ್ಶನ ಮಾಡಿದ್ದಾರೆ, ಹಲವು ವರದಿಗಳು ಇವೆ. ಎಲ್ಲವನ್ನೂ ಗಮನಿಸಿ ಸಾಮಾಜಿಕ ನ್ಯಾಯದಡಿ ಮೀಸಲಾತಿ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ನಮ್ಮ ಸರ್ಕಾರ ದುಡಿಯುವ ವರ್ಗಕ್ಕೆ ಅತಿ ಹೆಚ್ಚಿನ ಅವಕಾಶವನ್ನು, ಹಣಕಾಸಿನ ನೆರವನ್ನು ಬಜೆಟ್​ನಲ್ಲಿ ಕೊಟ್ಟಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎಲ್ಲರಿಗೂ ದುಡಿಯುವ ಅವಕಾಶ ಸಿಕ್ಕು ಆರ್ಥಿಕವಾಗಿ ಸಬಲರಾದರೆ ಅವರ ತಲಾವಾರು ಆದಾಯ ಹೆಚ್ಚಾಗುತ್ತದೆ. ಆಗ ರಾಜ್ಯದ ಆದಾಯ ಹೆಚ್ಚಾಗಲಿದೆ. ಹಾಗಾಗಿ, ಆರ್ಥಿಕತೆ ಎಂದರೆ ಹಣ ಅಲ್ಲ, ಅದು ಜನರ ಕ್ರಿಯಾಶೀಲತೆ. ಅದಕ್ಕೆ ಕಷ್ಟಪಡುವ ಸಮುದಾಯವಾಗಿರುವ ಮಾದಿಗ ಸಮುದಾಯಕ್ಕೆ ನಾವು ಆದ್ಯತೆ ಕೊಡಲಿದ್ದೇವೆ ಎಂದರು.

ಮಾದಿಗ ಸಮುದಾಯದಲ್ಲಿ ಜಮೀನು ಇಲ್ಲದವರಿಗೆ ಜಮೀನು ಕೊಡೋಣ. ಆದರೆ, ಎಲ್ಲರಿಗೂ ಕೊಡಲು ಜಮೀನು ಬೇಕಲ್ವಾ?. ಹಾಗಾಗಿ, ಎಲ್ಲರಿಗೂ ಜಮೀನು ಕೊಡಲು ಸಾಧ್ಯವಾಗದಿರಬಹುದು. ಆದರೆ, ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಬೇರೆ ಬೇರೆ ರಂಗದಲ್ಲಿ ಅವರು ಮುಂದೆ ಬರಬಲು ಸಾಧ್ಯವಾಗಲಿದೆ. ಆ ರೀತಿಯ ಬದಲಾವಣೆ ತರಲು ಪ್ರಯತ್ನ ನಡೆಸುತ್ತೇವೆ ಎಂದರು.

ಇದನ್ನೂ ಓದಿ: ಚೌಡೇಶ್ವರಿ ದೇವಿಗೆ ಪ್ರಾಣಿಬಲಿ: 23 ಮಂದಿಯ ವಿರುದ್ಧ ಪ್ರಕರಣ ದಾಖಲು

ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಸಿಎಂ ಬೆಂಬಲಕ್ಕೆ ಹಿಂದುಳಿದ ಮತ್ತು ದಲಿತ ಮಠಾಧಿಪತಿಗಳು ನಿಲ್ಲಬೇಕು. ವೀರಶೈವ ಲಿಂಗಾಯತ ಮಠಗಳು ಎಷ್ಟು ಬೆಂಬಲ ನೀಡಲಿದೆ ಅಂತಾ ಗೊತ್ತಿಲ್ಲ. ಆದರೆ, ಎಲ್ಲ ಸಮುದಾಯವನ್ನು ಸಿಎಂ ಸಮನಾಗಿ ಕಾಣುತ್ತಿದ್ದಾರೆ. ಮಾದಿಗ ಸಮುದಾಯ ತೆಲೆ ಎತ್ತಿ ನಿಲ್ಲಬೇಕು ಅಂತಾ ಭರವಸೆ ಕೊಟ್ಟಿದ್ದಾರೆ. ಹಾಗಾಗಿ, ಹಿಂದುಳಿದ ಸ್ವಾಮೀಜಿಗಳು ಮುಂದಿನ ದಿನಗಳಲ್ಲಿ ಸಿಎಂ ಬೊಮ್ಮಾಯಿ ಬೆಂಬಲಕ್ಕೆ ನಿಲ್ಲಬೇಕು ಅಂತಾ ತೀರ್ಮಾನ ಮಾಡಿದ್ದೇವೆ ಎಂದರು.

Last Updated : May 13, 2022, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.