ETV Bharat / city

ಒಆರ್​ಆರ್-ಏರ್ಪೋರ್ಟ್ ಮೆಟ್ರೋ ಯೋಜನೆ.. ಸಿಎಂ ಸಮ್ಮುಖ BMRCL-BIL ನಡುವೆ ಎಂಒಯುಗೆ ಸಹಿ - ಬಿಎಂಆರ್ ಸಿಎಲ್-ಬಿಐಎಎಲ್ ನಡುವೆ ಎಂಒಯುಗೆ ಸಹಿ

ಈ ಯೋಜನೆಯನ್ನು ಬಿಎಂಆರ್‌ಸಿಎಲ್ ಅಂದಾಜು 14,844 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ನಿತ್ಯ ಸುಮಾರು 7.8 ಲಕ್ಷ ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ. ಏರ್‌ಪೋರ್ಟ್ ಮೆಟ್ರೋ ಸೆಕ್ಷನ್‌ನಲ್ಲಿ ಸಿವಿಲ್ ಕಾಮಗಾರಿ ಮಾರ್ಚ್ 2021ಕ್ಕೆ ಪ್ರಾರಂಭವಾಗಲಿದೆ..

ಒಆರ್​ಆರ್-ಏರ್ ಪೋರ್ಟ್ ಮೆಟ್ರೋ ಯೋಜನೆ
ಒಆರ್​ಆರ್-ಏರ್ ಪೋರ್ಟ್ ಮೆಟ್ರೋ ಯೋಜನೆ
author img

By

Published : Sep 8, 2020, 10:09 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ 800 ಕೋಟಿ ರೂ. ವೆಚ್ಚದ 4.95 ಕಿ.ಮೀ ಉದ್ದದ ಔಟರ್ ರಿಂಗ್ ರೋಡ್-ವಿಮಾನ ನಿಲ್ದಾಣ ಮೆಟ್ರೋ ಯೋಜನೆ ಅನುಷ್ಠಾನಕ್ಕಾಗಿನ ವಿನೂತನ ಪಿಪಿಪಿ ಮಾದರಿಯ ತಿಳುವಳಿಕಾ ಪತ್ರಕ್ಕೆ ಬಿಎಂಆರ್ ಸಿಎಲ್ ಮತ್ತು ಬಿಐಎಎಲ್ ಸಹಿ ಹಾಕಲಾಯಿತು.

ಡಿಸೆಂಬರ್ 2024 ಅವಧಿಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಬಿಎಂಆರ್‌ಸಿಎಲ್ ಸಂಸ್ಥೆ ವಿಮಾನ ನಿಲ್ದಾಣ ಮೆಟ್ರೋ ಸೆಕ್ಷನ್​ ನಿರ್ಮಾಣ,ಸಿವಿಲ್, ಮೆಕ್ಯಾನಿಕಲ್ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಿದೆ. ಬಿಐಎಎಲ್ ಎರಡು ಮೆಟ್ರೋ ನಿಲ್ದಾಣಗಳ ಅಭಿವೃದ್ಧಿ, ನಿರ್ವಹಣೆ ಮಾಡಲಿದೆ. ಈ ವಿಮಾನ ನಿಲ್ದಾಣ ಸೆಕ್ಷನ್ ಒಟ್ಟು 56 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಔಟರ್ ರಿಂಗ್ ರೋಡ್-ವಿಮಾನ‌ ನಿಲ್ದಾಣದ ಯೋಜನೆಯ ಭಾಗವಾಗಿದೆ.

ಸಿಎಂ ಸಮ್ಮುಖದಲ್ಲಿ ಬಿಎಂಆರ್ ಸಿಎಲ್-ಬಿಐಎಎಲ್ ನಡುವೆ ಎಂಒಯುಗೆ ಸಹಿ

ಇದೇ ವೇಳೆ ಮಾತನಾಡಿದ ಸಿಎಂ, ಮೆಟ್ರೋ ನೀತಿ 2017ರ ಪ್ರಕಾರ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಶೇರು ಮತ್ತು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳಿಂದ ದೀರ್ಘ ಕಾಲೀನ ಬಾಹ್ಯ ಸಾಲಗಳ ಮೂಲಕ ಈ ಯೋಜನೆಯ ವೆಚ್ಚ ಭರಿಸಲಾಗುತ್ತಿದೆ ಎಂದು ತಿಳಿಸಿದರು. ಎಲ್ಲಾ ಅಭಿವೃದ್ಧಿ ಏಜೆನ್ಸಿಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೊಸ ಶಕೆಯ ಬಹು ಮಾದರಿ ಸಂಪರ್ಕ ಮೂಲಸೌಕರ್ಯ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ‌ ಮಾಡಬೇಕು ಎಂದು ಕರೆ ನೀಡಿದರು.

ಈ ಯೋಜನೆಯನ್ನು ಬಿಎಂಆರ್‌ಸಿಎಲ್ ಅಂದಾಜು 14,844 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ನಿತ್ಯ ಸುಮಾರು 7.8 ಲಕ್ಷ ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ. ಏರ್‌ಪೋರ್ಟ್ ಮೆಟ್ರೋ ಸೆಕ್ಷನ್‌ನಲ್ಲಿ ಸಿವಿಲ್ ಕಾಮಗಾರಿ ಮಾರ್ಚ್ 2021ಕ್ಕೆ ಪ್ರಾರಂಭವಾಗಲಿದೆ. 56 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಹಾಗೂ 30 ನಿಲ್ದಾಣ ಕಾಮಗಾರಿಯ ಅಂದಾಜು ವೆಚ್ಚ 3,230 ಕೋಟಿ ರೂ. ಆಗಲಿದೆ. ಇದರ ಟೆಂಡರ್‌ನ ಐದು ಪ್ಯಾಕೇಜುಗಳಲ್ಲಿ ಕರೆಯಲಾಗಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಆರ್‌ಪುರಂವರೆಗಿನ ಮೊದಲ ಎರಡು ಪ್ಯಾಕೇಜ್‌ನ ಕಾಮಗಾರಿ ಡಿಸೆಂಬರ್ 2020ಕ್ಕೆ ಆರಂಭವಾಗಲಿದೆ. ಕೆಆರ್‌ಪುರಂ- ವಿಮಾನ ನಿಲ್ದಾಣದವರೆಗಿನ ಉಳಿದ ಮೂರು ಪ್ಯಾಕೇಜುಗಳ ಕಾಮಗಾರಿ ಮಾರ್ಚ್ 2021ಕ್ಕೆ ಆರಂಭವಾಗಲಿದೆ. ಯೋಜನೆಗೆ ಬೇಕಾಗಿರುವ 94 ಎಕರೆ ಪೈಕಿ ಸುಮಾರು ಮುಕ್ಕಾಲು ಭಾಗ ಸ್ವಾಧೀನ‌ ಪಡಿಸಿಕೊಳ್ಳಲಾಗಿದ್ದು, ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಾಗಿದೆ.

ಎಂಬೆಸ್ಸಿ ಗ್ರೂಪ್ ಜೊತೆ ಎಂಒಯುಗೆ ಸಹಿ : ಇದೇ ವೇಳೆ ನಮ್ಮ‌ ಮೆಟ್ರೋ ಮತ್ತು ಎಂಬೆಸ್ಸಿ ಗ್ರೂಪ್ ಮಧ್ಯೆ ಎಂಒಯುಗೆ ಸಹಿ ಹಾಕಲಾಯಿತು. ಇದರಡಿ 140 ಕೋಟಿ ರೂ. ವೆಚ್ಚದಲ್ಲಿ ಬೆಟ್ಟಹಲ್ಸೂರು ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. ಇದು ಎಂಬೆಸ್ಸಿ ಗ್ರೂಪ್ ಜೊತೆ ಬಿಎಂಆರ್‌ಸಿಎಲ್ ಮಾಡಿರುವ 3ನೇ ಪಾಲುದಾರಿಕೆಯಾಗಿದೆ.

ಡಿಸೆಂಬರ್ 2024ಕ್ಕೆ ಬೆಟ್ಟಹಲ್ಸೂರು ಮೆಟ್ರೋ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣದ ನಿರ್ಮಾಣ, ನಿರ್ವಹಣೆ, ಭೂಸ್ವಾಧೀನ, ಸಿವಿಲ್ ಕೆಲಸ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ. ಇದರ ಜೊತೆಗೆ ನಿಲ್ದಾಣ ಮತ್ತು ಎನ್‌ಹೆಚ್-44 ಮಧ್ಯೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಿದೆ.

ಎಂಬೆಸ್ಸಿ ಗ್ರೂಪ್ ಬಿಎಂಆರ್‌ಸಿಎಲ್‌ಗೆ 140 ಕೋಟಿ ರೂ. ಬಂಡವಾಳ ನೀಡಲಿದೆ. ಎಂಬೆಸ್ಸಿ ಗ್ರೂಪ್ ಇಂಟೀರಿಯರ್ ಡಿಸೈನ್ ಕಾಮಗಾರಿ ಮಾಡಲಿದೆ. ಬಳಿಕ ನಿಲ್ದಾಣದ ಸ್ವಚ್ಛತೆ, ನಿರ್ವಹಣೆಯನ್ನು ಎಂಬೆಸ್ಸಿ ಗ್ರೂಪ್ ನೋಡಿಕೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.