ETV Bharat / city

ರಾತ್ರಿ ಮಾಂಸ ತಿಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗ್ಬಹುದು, ಬೆಳಿಗ್ಗೆ ತಿಂದು ಸಂಜೆ ಹೋಗ್ಬಾರ್ದು, ಏನು ಮೌಢ್ಯ?: ಸಿದ್ದರಾಮಯ್ಯ - ಮಧುಲಿಮಯೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕೆಂಬ ಒತ್ತಾಯವಿದೆ ಎಂದು ಹೇಳಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಅವರನ್ನು ಮೂರ್ಖರು ಎನ್ನಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Bengaluru
ಶಾಂತವೇರಿ ಗೋಪಾಲಗೌಡ ಮತ್ತು ಮಧುಲಿಮಯೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ
author img

By

Published : Aug 22, 2022, 9:25 AM IST

ಬೆಂಗಳೂರು: ಸಮಾಜವಾದಿ ಹೋರಾಟಗಳಿಂದ ಬೆಳೆದು ಬಂದ ನಾನು ಲಾಠಿ ಏಟು ತಿಂದ ನಂತರವೇ ರಾಜಕೀಯಕ್ಕೆ ಬಂದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಗಾಂಧಿ ಭವನದಲ್ಲಿ ಸಮಾಜವಾದಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಶಾಂತವೇರಿ ಗೋಪಾಲಗೌಡ ಮತ್ತು ಮಧುಲಿಮಯೆ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಕಾನೂನು ಪದವಿ ಓದುವಾಗ ಲೋಹಿಯಾ ಅವರ ಸಮಾಜವಾದಿ ಪಕ್ಷಕ್ಕೆ ಸೇರಿದ್ದೆ. ಪ್ರೊ.ನಂಜುಡಸ್ವಾಮಿ ಅವರ ಸಂಪರ್ಕ ಬೆಳೆಯಿತು. ಅವರು ನಮಗೆ ರಾಜಕೀಯ ಪಾಠ ಹೇಳುತ್ತಿದ್ದರು. ಆಗ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದರು. ಸರ್ಕಾರದ ವಿರುದ್ಧ ಒಂದು ಚಳುವಳಿ ರೂಪಿಸಿದ್ದರು. ನಾನು, ದೇವನೂರು ಚಳುವಳಿಯಲ್ಲಿ ಭಾಗಿಯಾಗಿದ್ದೆವು. ರಾಮಸ್ವಾಮಿ ಸರ್ಕಲ್​​ನಲ್ಲಿ ಪೊಲೀಸರು ಲಾಠಿ ಬೀಸಿದರು.

ಕಾನ್ವಕೇಷನ್ ಕೊಡುವ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಲು ಹೋಗಿ ಏಟು ತಿಂದಿದ್ದೆ. ನಂಜುಂಡ ಸ್ವಾಮಿ ಅವರು ಚಾರ್ಮಿನಾರ್ ಸಿಗರೇಟ್​​ ಸೇದುತ್ತಿದ್ದರು. ಅವತ್ತಿಗೆ ಚಾರ್ಮಿನಾರ್ ಯಾಕೆ ಅಂತಾ ಕೇಳಿದರೆ ಸ್ಟ್ರಾಂಗ್ ಸಿಗರೇಟ್ ಸೇದಿದರೆ ನಾವು ಸ್ಟ್ರಾಂಗ್ ಆಗಿ ಇರುತ್ತೇವೆ ಎನ್ನುತ್ತಿದ್ದರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಮೊಟ್ಟೆ ಎಸೆದವ ಆರ್​​ಎಸ್​​ಎಸ್ ಗಿರಾಕಿ: ಕರ್ನಾಟಕ ರಾಜಕಾರಣ ಹೇಗೆ ಆಗುತ್ತಿದೆ ಎಂದು ನೀವೇ ನೋಡ್ತಿದೀರಲ್ಲ. ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಕೊಡಗಿನಲ್ಲಿ ನನ್ನ ಮೇಲೆ ಮೊಟ್ಟೆ ಎಸೆದವ ಆರ್​​ಎಸ್​​ಎಸ್ ಗಿರಾಕಿ. ಅವನಿಂದ ಕಾಂಗ್ರೆಸ್​​ನವನು ಎಂದು ಹೇಳಿಸುತ್ತಾರೆ. ಅಪ್ಪಚ್ಚು ರಂಜನ್ ಆಪ್ತ ಸೆಲೆಬ್ರಿಟಿಗಳ ಜೊತೆ ಫೊಟೋ ತೆಗೆಯುತ್ತಾರೆ. ಸಂಪತ್ ಕೂಡ ಅಪ್ಪಚ್ಚು ರಂಜನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಎಂದು ಹೇಳ್ತಾರೆ ಎಂದರು.

ಏನು ಮೌಢ್ಯ ಇದು?: ನಾನು ವೀಣಾ ಅಚ್ಚಯ್ಯ ಅವರ ಮನೆಗೆ ಹೋಗಿಲ್ಲ. ಅವರ ಮನೆಗೆ ಹೋಗಿ ನಾನ್ ವೆಜ್ ತಿಂದೆ ಎಂದು ಹೇಳ್ತಾರೆ. ನಾನು ಸುದರ್ಶನ ಗೆಸ್ಟ್ ಹೌಸ್​​ನಲ್ಲಿ ಊಟ ಮಾಡಿದ್ದು. ನಾವು ಮೈಸೂರಿನಲ್ಲಿ ಚಾಮುಂಡೇಶ್ವರಿ ಹಬ್ಬ ಮಾಡ್ತೀವಿ. ಆಗ ಮರಿನೇ ಹೊಡೆಯೋದು. ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗದೆ ಬಿಡ್ತಾರಾ? ಆಷಾಢ ಬಂದಾಗ ಕಾಯ್ತಾ ಇರ್ತಾರೆ. ಏನು ಮೌಢ್ಯ ಆಚರಿಸುತ್ತಾರೆ. ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋದೆ ಎನ್ನುವುದೇ ಹೆಡ್ ಲೈನ್. ರಾತ್ರಿ ಮಾಂಸ ತಿಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಬಹುದಂತೆ. ಬೆಳಿಗ್ಗೆ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಂತೆ. ಏನು ಮೌಢ್ಯ ಇದು ಅವರು ಪ್ರಶ್ನಿಸಿದರು.

ಕೆಸಿಆರ್‌ ಮೂರ್ಖ: ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಒಬ್ಬ ಮೂರ್ಖ. ರಾಯಚೂರು ಜಿಲ್ಲೆ ತೆಲಂಗಾಣಗೆ ಸೇರಿಸುವ ಬಗ್ಗೆ ಮಾತನಾಡುತ್ತಾರೆ. ರಾಜಕೀಯ ಬೆಳೆ ಬೇಯಿಸಲು ಈ ರೀತಿ ಹೇಳುತ್ತಾರೆ. ಕರ್ನಾಟಕದ ಮಂತ್ರಿ ಉಮೇಶ್ ಕತ್ತಿ ಕೂಡ ಪ್ರತೇಕ ರಾಜ್ಯ ಬೇಕು ಅಂತಾ ಹೇಳ್ತಾರೆ. ಕತ್ತಿ ಮಂತ್ರಿಯಾಗಿದವನು ಇಷ್ಟು ವರ್ಷ ಏನ ಕಡ್ದು ಗುಡ್ಡೆ ಹಾಕಿದ್ದಾರೆ?, ಇಲ್ಲಿವರೆಗೆ ಉತ್ತರ ಕರ್ನಾಟಕಕ್ಕೆ ಉಮೇಶ್ ಕತ್ತಿ ಕೊಡುಗೆ ಏನು? ಕೇವಲ ರಾಜಕೀಯಕ್ಕಾಗಿ ಇಂತಹ ಹೇಳಿಕೆ ಕೊಡ್ತಿದ್ದಾರೆ. ಹೇಳಿಕೆ ಕೊಡುವ ಮುನ್ನ ಇತಿಹಾಸ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಗೋಪಾಲಗೌಡರರಿಂದ ಯುವಕರು ಪ್ರೇರಣೆ ಪಡೆದುಕೊಳ್ಳಬೇಕು. ಕರ್ನಾಟಕ ಏಕೀಕರಣಕ್ಕೆ ಸಾಕಷ್ಟು ಹೋರಾಟಗಳು ಆಗಿವೆ. ಶಾಂತವೇರಿ ಗೋಪಾಲಗೌಡರು ಸೇತುವೆ ಆಗಿ ಕೆಲಸ ಮಾಡಿದ್ದರು. ಇದರ ಅರಿವು ಇಲ್ಲದವರು ಸುಮ್ಮನೆ ಮಾತಾಡುತ್ತಾರೆ. ನಾವೆಲ್ಲರೂ ಮೊದಲು ಮನುಷ್ಯರಾಗಿ ಬದುಕಬೇಕು. ಆಮೇಲೆ ಜಾತಿ. ಕುವೆಂಪು ಹೇಳಿದ್ದಾರೆ. ಹುಟ್ಟಿದ್ದಾಗ ವಿಶ್ವಮಾನವ. ಬೆಳೆಯುತ್ತ ಅಲ್ಪಮಾನವ. ನಮ್ಮಲ್ಲಿ ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಜಾತಿಯಲ್ಲಿ ಮೇಲು ಕೀಳು ಅಂತಾ ಇದ್ದರೆ ನಾವು ಇನ್ನೂ ಗುಲಾಮಗಿರಿಯಲ್ಲಿ ಇದ್ದ ಹಾಗೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಕಳಲೆ, ಅಕ್ಕಿರೊಟ್ಟಿ ತಿಂದಿದ್ದಾರೆ ನಾನೇ ಊಟ ಬಡಿಸಿದ್ದೇನೆ: ವೀಣಾ ಅಚ್ಚಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.