ETV Bharat / city

ಪೊಲೀಸರ ದುರ್ವರ್ತನೆಗೆ ಯೋಗಿ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ: ಸಿದ್ದರಾಮಯ್ಯ ಕಿಡಿ

ರಾಹುಲ್‌ ಗಾಂಧಿ, ಪ್ರಿಯಾಂಕ‌‌ ಗಾಂಧಿ ಬಂಧನ ಮತ್ತು ಅವರ ಜೊತೆಗಿನ ಪೊಲೀಸರ ದುರ್ವರ್ತನೆ ಖಂಡನೀಯವಾಗಿದೆ. ಇದಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Opposition leader Siddaramaiah reaction about Arrest of Rahul Gandhi
ಪೊಲೀಸರ ದುರ್ವರ್ತನೆಗೆ ಯೋಗಿ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ: ಸಿದ್ದರಾಮಯ್ಯ ಕಿಡಿ
author img

By

Published : Oct 1, 2020, 6:58 PM IST

ಬೆಂಗಳೂರು: ಉತ್ತರಪ್ರದೇಶದ ಪೊಲೀಸರು ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ‌‌ ಗಾಂಧಿಯನ್ನು ಬಂಧಿಸಿರುವುದು ಖಂಡನೀಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪೊಲೀಸರ ದುರ್ವರ್ತನೆಗೆ ಯೋಗಿ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ: ಸಿದ್ದರಾಮಯ್ಯ ಕಿಡಿ

ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ರಾಹುಲ್‌ ಗಾಂಧಿ, ಪ್ರಿಯಾಂಕ‌‌ ಗಾಂಧಿ ಬಂಧನ ಮತ್ತು ಅವರ ಜೊತೆಗಿನ ಪೊಲೀಸರ ದುರ್ವರ್ತನೆ ಖಂಡನೀಯವಾಗಿದೆ. ಇದಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ. ಉತ್ತರಪ್ರದೇಶದ ಪೊಲೀಸ್ ರಾಜ್ಯದಲ್ಲಿ‌ ಸಂಸದ ರಾಹುಲ್ ಗಾಂಧಿ ಮತ್ತು ನಮ್ಮ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿಯವರೇ ಸುರಕ್ಷಿತರಲ್ಲ ಎಂದ‌ ಮೇಲೆ ಅಲ್ಲಿನ‌ ದಲಿತರು,‌ ಮಹಿಳೆಯರು, ರೈತರು, ಕಾರ್ಮಿಕರು ಹೇಗೆ ಸುರಕ್ಷಿತರಾಗಿರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಯೋಗಿ ಆದಿತ್ಯನಾಥ್ ಸರ್ಕಾರ ಪ್ರಜಾಪ್ರಭುತ್ವಕ್ಕೆ ಕಳಂಕ. ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬವನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ. ಯುಪಿ ಬಿಜೆಪಿ ಸರ್ಕಾರದ ಬಣ್ಣ ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಆ ಕುಟುಂಬದ ಭೇಟಿಗೆ ನಮ್ಮ ನಾಯಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.