ETV Bharat / city

ಲಾಯರ್‌ಗಳ ಗುಮಾಸ್ತರ ನೆರವಿಗಾಗಿ ಬ್ಯಾಂಕ್‌ ಖಾತೆ ತೆರೆಯಿರಿ; ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ - ವಕೀಲರ ಗುಮಾಸ್ತರು

ಕೊರೊನಾ ಸಂಕಷ್ಟದಿಂದ ವಕೀಲರ ಗುಮಾಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಗುಮಾಸ್ತರಿಗೆ ಅಗತ್ಯ ನೆರವಿಗೆ ಮುಂದಾಗಬೇಕು. ತಕ್ಷಣವೇ 'ಕರ್ನಾಟಕ ರಿಜಿಸ್ಟರ್ಡ್ ಕ್ಲರ್ಕ್ಸ್ ವೆಲ್ ಫೇರ್ ಫಂಡ್ ' ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

Open 'Karnataka registered clerks welfare found' bank account: hc to state government
ಲಾಯರ್‌ಗಳ ಗುಮಾಸ್ತರ ನೆರವಿಗಾಗಿ ಬ್ಯಾಂಕ್‌ ಖಾತೆ ತೆರೆಯಿರಿ; ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ
author img

By

Published : Apr 22, 2021, 2:59 AM IST

ಬೆಂಗಳೂರು: ಕೋವಿಡ್ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಗುಮಾಸ್ತರಿಗೆ ಅಗತ್ಯ ನೆರವು ನೀಡಲು ತಕ್ಷಣವೇ 'ಕರ್ನಾಟಕ ರಿಜಿಸ್ಟರ್ಡ್ ಕ್ಲರ್ಕ್ಸ್ ವೆಲ್ ಫೇರ್ ಫಂಡ್ ' ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ವಕೀಲರ ಗುಮಾಸ್ತರಿಗೆ ಅಗತ್ಯ ನೆರವು ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲ ಮೂರ್ತಿ ಡಿ.ನಾಯಕ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಗುಮಾಸ್ತರ ನೆರವಿಗೆ 10 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದೆ. ಆದರೆ, ಈ ಹಣವನ್ನು ನಿರ್ವಹಣೆ ಮಾಡುವ ಸಮಿತಿ ನಿಷ್ಕ್ರಿಯವಾಗಿದೆ ಎಂದರು.

ಇದನ್ನೂ ಓದಿ: ಉಡುಪಿ ಜಿಲ್ಲಾಡಳಿತ ಜತೆ ಸಚಿವ ಬೊಮ್ಮಾಯಿ ಸಭೆ; ಕೋವಿಡ್‌ ನಿಯಂತ್ರಣಕ್ಕೆ ಸಜ್ಜಾಗುವಂತೆ ಆದೇಶ

ವಾದ ಆಲಿಸಿದ ಪೀಠ, ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯ್ದೆ-1983ರ ಸೆಕ್ಷನ್ 4(1) ಅಡಿ ಸಮಿತಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಬೇಕು. ರಾಜ್ಯ ವಕೀಲರ ಪರಿಷತ್ತು ವರ್ಗಾವಣೆ ಮಾಡಲು ನಿರ್ಧರಿಸಿರುವ 10 ಲಕ್ಷ ರೂಪಾಯಿ ಜಮೆ ಮಾಡಲು ಅಗತ್ಯವಿರುವ ಬ್ಯಾಂಕ್ ಖಾತೆಯನ್ನು ಕೂಡಲೇ ತೆರೆಯಬೇಕು. ಹಾಗೆಯೇ, ಖಾತೆ ತೆರೆದ ಬಳಿಕ ಆ ವಿವರಗಳನ್ನು ಪರಿಷತ್ತಿಗೆ ಒದಗಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.