ETV Bharat / city

ಒನ್​ ಸ್ಟೇಶನ್​ ಒನ್ ಪ್ರಾಡಕ್ಟ್ ಯೋಜನೆ : ಸ್ಥಳೀಯ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆ..‌ - 1 ಸ್ಟೇಶನ್ 1 ಪ್ರಾಡೆಕ್ಟ್ ಯೋಜನೆ

ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಲ್ಲಿ ಸ್ಥಳೀಯ ಕುಶಲಕರ್ಮಿಗಳು, ಉತ್ಪನ್ನಗಳು,‌ ಉದ್ಯಮವನ್ನು ಉತ್ತೇಜಿಸಲು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಪ್ರತಿ ರೈಲು ನಿಲ್ದಾಣವನ್ನು ಉತ್ಪನ್ನದ ಪ್ರಚಾರ ಮತ್ತು ಮಾರಾಟ ಕೇಂದ್ರವನ್ನಾಗಿ ಮಾಡುವ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಯೋಜನೆಯು ಮೊಟ್ಟ ಮೊದಲು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಶುರುವಾಗಿದೆ ಎಂಬುದೇ ವಿಶೇಷ.‌.

one station one product project Begin in Bangalore
ಒನ್​ ಸ್ಟೇಶನ್​ ಒನ್ ಪ್ರಾಡಕ್ಟ್ ಯೋಜನೆ
author img

By

Published : Mar 25, 2022, 5:56 PM IST

ಬೆಂಗಳೂರು : ವಿದೇಶಿ ಉತ್ಪನ್ನಗಳ ಮಾರುಕಟ್ಟೆ ಪೈಪೋಟಿ ನಡುವೆ ನಮ್ಮ ಸ್ಥಳೀಯ ಉತ್ಪನ್ನ ಮಾರಾಟಗಾರರು ಕಂಡು ಕಾಣದಂತೆ ಆಗಿದ್ದರು. ಇದೀಗ ನಮ್ಮದೇ ಉತ್ಪನ್ನಗಳು ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಲು ಅವಕಾಶ ಕಲ್ಪಿಸಲಾಗಿದೆ. 2022-2023ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಒನ್​ ಸ್ಟೇಶನ್​ ಒನ್ ಪ್ರಾಡಕ್ಟ್‌ ಯೋಜನೆಯು ಇದೀಗ ಸ್ಥಳೀಯ ಕುಶಲಕರ್ಮಿಗಳ ಜೀವನಕ್ಕೆ ಹೊಸ ರೂಪ ಸಿಕ್ಕಿದೆ.

ಒನ್​ ಸ್ಟೇಶನ್​ ಒನ್ ಪ್ರಾಡಕ್ಟ್ ಯೋಜನೆ

ಒನ್​ ಸ್ಟೇಶನ್​ ಒನ್ ಪ್ರಾಡಕ್ಟ್ ಯೋಜನೆ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆಯ ಮೊಟ್ಟಮೊದಲ ಮಳಿಗೆ ಇಂದು ಆರಂಭವಾಗಿದೆ. 15 ದಿನಗಳವರೆಗೆ ಪ್ರಾಯೋಗಿಕ ಯೋಜನೆಯಾಗಿ ನಿಲ್ದಾಣದಲ್ಲಿ ಈ ಮಳಿಗೆ ಇರಲಿದ್ದು, ನಂತರದ ದಿನದಲ್ಲಿ ಇದನ್ನ ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ. ಮಾರಾಟಗಾರರು ನಿಲ್ದಾಣದ ಆವರಣದಲ್ಲಿ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ವಸ್ತುಗಳನ್ನ ಮಾರಾಟ ಮಾಡಬಹುದು. ಇದಕ್ಕಾಗಿ ಮಳಿಗೆ ಶುಲ್ಕವಾಗಿ 500 ರೂ. ನಿಗದಿ ಮಾಡಲಾಗಿದೆ.

ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಲ್ಲಿ ಸ್ಥಳೀಯ ಕುಶಲಕರ್ಮಿಗಳು, ಉತ್ಪನ್ನಗಳು,‌ ಉದ್ಯಮವನ್ನು ಉತ್ತೇಜಿಸಲು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಪ್ರತಿ ರೈಲು ನಿಲ್ದಾಣವನ್ನು ಉತ್ಪನ್ನದ ಪ್ರಚಾರ ಮತ್ತು ಮಾರಾಟ ಕೇಂದ್ರವನ್ನಾಗಿ ಮಾಡುವ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಯೋಜನೆಯು ಮೊಟ್ಟ ಮೊದಲು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಶುರುವಾಗಿದೆ ಎಂಬುದೇ ವಿಶೇಷ.‌

ಇಂದು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ-ಒಂದು ಉತ್ಪನ್ನ ಯೋಜನೆಯಡಿ ಚನ್ನಪಟ್ಟಣ ಆಟಿಕೆಗಳ ಮಳಿಗೆಯನ್ನು ಉದ್ಘಾಟಿಸಿದರು. ಇದು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತ್ ಅಭಿಯಾನದ ಅಡಿಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ರೈಲ್ವೆ ಸಚಿವಾಲಯದ ಉಪಕ್ರಮವಾಗಿದೆ. ಸ್ಥಳೀಯ ಕುಶಲಕರ್ಮಿಗಳು ತಮ್ಮ ಉತ್ಪನ್ನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಪ್ರೋತ್ಸಾಹಿಸುವುದು ಎಂದರು.

ಚನ್ನಪಟ್ಟಣ ಕರಕುಶಲ ಕಲಾವಿದರ ಸಂಘಕ್ಕೆ ಸಂಬಂಧಿಸಿದ ಸ್ಥಳೀಯ ಕುಶಲಕರ್ಮಿ ವಿ. ಪ್ರಕಾಶ್ ಅವರಿಗೆ ಚನ್ನಪಟ್ಟಣದ ಆಟಿಕೆಗಳ ಪ್ರಚಾರಕ್ಕಾಗಿ ಬೆಂಗಳೂರು ವಿಭಾಗವು ಪ್ರಾಯೋಗಿಕ ಆಧಾರದ ಮೇಲೆ ಮಳಿಗೆಯನ್ನು ಮಂಜೂರು ಮಾಡಿದೆ. ಇನ್ನು ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳಾದ ಡಾ.ಅನುಪ್ ದಯಾನಂದ ಸಾಧು, ಕುಸುಮಾ ಹರಿಪ್ರಸಾದ್, ಡಾ. ಎ.ಎನ್. ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಈ ಯುಗಾದಿಗೆ ಕರೆಂಟ್ ಶಾಕ್.. ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.