ETV Bharat / city

ಬೆಂಗಳೂರಿನಲ್ಲಿ ಭಾರಿ ಮಳೆ: ಕಟ್ಟಡ ಕುಸಿತ, ಜನಜೀವನ ಅಸ್ತವ್ಯಸ್ತ

author img

By

Published : Nov 19, 2021, 9:39 AM IST

Updated : Nov 19, 2021, 10:10 AM IST

ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ (Bengaluru heavy rain news)ಅವಾಂತರ ಸೃಷ್ಟಿಯಾಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಹಲಸೂರಿನ ಸ್ಟ್ರೀಟ್ ಮುಖ್ಯರಸ್ತೆಯಲ್ಲಿ ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದಿದೆ.

building collapse
ಕುಸಿದ 50 ವರ್ಷಗಳ ಹಳೆಯ ಕಟ್ಟಡ

ಬೆಂಗಳೂರು: ನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ (Bengaluru heavy rain news)ಕೆಲವೆಡೆ ಶಿಥಿಲ ಹಂತದ ಕಟ್ಟಡಗಳು ಕುಸಿದಿದ್ದು, ಮರಗಳು ನೆಲಕ್ಕುರುಳಿವೆ. ಜೊತೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಭಾರಿ ಮಳೆಯಿಂದ ಉಂಟಾಗಿರುವ ಅನಾಹುತಗಳ ಕುರಿತು ಬಿಬಿಎಂಪಿ ಸಹಾಯವಾಣಿಗೆ ಅನೇಕ ದೂರುಗಳು ಬಂದಿವೆ. ಆರ್​.ಟಿ ನಗರ ಹಾಗೂ ಟ್ರಿನಿಟಿ ಸರ್ಕಲ್ ಬಳಿ ಎರಡು ಮರಗಳು ಧರೆಗುರುಳಿದ್ದು, ಲಿಡೋ ಮಾಲ್ ಮತ್ತು ಮಿಲ್ಕ್ ಮ್ಯಾನ್ ರಸ್ತೆಯ ಹತ್ತಿರ ಒಂದು ಕಟ್ಟಡ ಕುಸಿದಿದೆ.

ಕುಸಿದ 50 ವರ್ಷಗಳ ಹಳೆಯ ಕಟ್ಟಡ

ಬೆಂಗಳೂರು ಪಶ್ಚಿಮ ವಲಯದಲ್ಲಿ ಸಾಧಾರಣ ಮಳೆಯಾಗಿದ್ದು, ಚಲವಾದಿ ಪಾಳ್ಯದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ನಂದಿನಿ ಲೇಔಟ್​ನ ಕಂಠೀರವ ನಗರದ ಹೊನ್ನಮ್ಮ ಬಿಲ್ಡಿಂಗ್ ಬಳಿ ಗೋಡೆ ಕುಸಿದಿದೆ. ದಾಸರಹಳ್ಳಿಯಲ್ಲಿ ಮಲ್ಲಸಂದ್ರ ಕೆರೆ ಕೋಡಿ ಹರಿದಿದ್ದು, ಹಿನ್ನೀರಿನಿಂದ ಸುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ.

ಇದನ್ನೂ ಓದಿ: ಶ್ರೀ ಗಂಗಾ ಭಾಗೀರಥಿ ದೇವಾಲಯ ಜಲಾವೃತ: ಭಕ್ತರ ಪ್ರವೇಶ ನಿಷೇಧ

ಮಹದೇವಪುರದಲ್ಲಿ (Bengaluru rain effect) ಸಹ ಜನಜೀವನ ಅಸ್ತವ್ಯಸ್ತವಾಗಿದ್ದು, ಮಠಕ್ಕೂ ಹೆಚ್ಚು ಕಡೆ ನೀರು ನುಗ್ಗಿದೆ. ಯಲಹಂಕ , ಬೊಮ್ಮನಹಳ್ಳಿ, ಅನುಗ್ರಹ ಲೇಔಟ್, ಬಿಳೇಕಹಳ್ಳಿ ಸೇರಿದಂತೆ ಹಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ: ಇಂದು ಜಿಲ್ಲಾಡಳಿತಗಳ ಜೊತೆ ಸಿಎಂ ಸಭೆ

ಮಹದೇವಪುರ ವಲಯದ ಹಗದೂರಿನಲ್ಲಿ 142 ಮಿ.ಮೀ, ವರ್ತೂರಿನಲ್ಲಿ 104 ಮಿ.ಮೀ, ದೊಡ್ಡನೆಕ್ಕುಂದಿಯಲ್ಲಿ 104 ಮಿ.ಮೀ, ಹೆಚ್ ಎಎಲ್ ಬಳಿ 97.50 ಮಿ.ಮೀ ಮಳೆಯಾಗಿದೆ.

ಕುಸಿದ 50 ವರ್ಷಗಳ ಹಳೆಯ ಕಟ್ಟಡ :

ಹಲಸೂರಿನ ಸ್ಟ್ರೀಟ್ ಮುಖ್ಯರಸ್ತೆಯಲ್ಲಿ ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಸಾವು - ನೋವು ಸಂಭವಿಸಿಲ್ಲ. ಸುಮಾರು 50 ವರ್ಷಗಳ ಹಳೆಯ ಈ ಕಟ್ಟಡದಲ್ಲಿ ಶಂಕರ್, ಪತ್ನಿ ಹಾಗೂ ಮಗ ವಾಸವಾಗಿದ್ದರು. ಹಳೆ ಕಟ್ಟಡವಾದ ಹಿನ್ನೆಲೆ ಯಾವ ಕ್ಷಣದಲ್ಲಾದರೂ ಕುಸಿಯ ಬಹುದೆಂದು ನಿನ್ನೆ ಪಕ್ಕದ ಮನೆಯಲ್ಲಿ ಮಲಗಿದ್ದರು.

Last Updated : Nov 19, 2021, 10:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.