ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಅವರು ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ನಾಳೆ ಡಿಸ್ಚಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯ ಡಾ. ಸಂಜಯ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಂತೋಷ್ ಜನರಲ್ ವಾರ್ಡ್ಗೆ ಶಿಫ್ಟ್: ಇಂದು ಹೇಳಿಕೆ ಪಡೆಯಲು ಪೊಲೀಸರ ನಿರ್ಧಾರ
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂತೋಷ್ ಆರೋಗ್ಯವಾಗಿದ್ದು, ಹಾರ್ಟ್ ರೇಟ್ ಕೂಡ ನಾರ್ಮಲ್ ಆಗಿದೆ. ನಾವು ಚಿಕಿತ್ಸೆಗೆ ತೆರಳಿದಾಗ ಸಂತೋಷ್ ಮಾತನಾಡಿದ್ದಾರೆ. 24 ರಿಂದ 48 ಗಂಟೆಗಳ ಕಾಲ ಅವರನ್ನು ಅಬ್ಸರ್ವೇಷನ್ನಲ್ಲಿ ಇಡಲಾಗಿದೆ. ಹೀಗಾಗಿ ನಾಳೆ ಡಿಸ್ಚಾರ್ಜ್ ಮಾಡಲಾಗುವುದು ಎಂದರು.
ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಕುರಿತು ಸದಾಶಿವ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ. ನಮಗೆ ಯಾವುದೇ ರಾಜಕೀಯ ಒತ್ತಡಗಳಿಲ್ಲ, ಪೊಲೀಸರ ತನಿಖೆಗೆ ನಾವೂ ಕೂಡ ಸಹಕಾರ ನೀಡುತ್ತೇವೆ ಡಾ. ಸಂಜಯ್ ಕುಲಕರ್ಣಿ ಹೇಳಿದ್ರು.
ಇದನ್ನೂ ಓದಿ: ಎನ್.ಆರ್.ಸಂತೋಷ್ ಆರೋಗ್ಯದಲ್ಲಿ ಚೇತರಿಕೆ : ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಮಾಹಿತಿ