ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್ನ 11ನೇ ಸಾಲಿನ 'ಬೆಂಗಳೂರು ಪ್ರಶಸ್ತಿ 2020' ಆಯ್ಕೆಗೆ ನಾಮಿನೇಷನ್ ಪ್ರಕ್ರಿಯೆಗೆ ನಿನ್ನೆ ಚಾಲನೆ ನೀಡಲಾಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿಷಯವನ್ನು ಹಂಚಿಕೊಂಡ ನಮ್ಮ ಬೆಂಗಳೂರು ಟ್ರಸ್ಟ್, ಇಂದಿನಿಂದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಶುರು ಮಾಡಿಕೊಂಡಿದೆ.
ಬೆಂಗಳೂರಿನಂತ ಮಹಾನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವಂತ ಗಣ್ಯರನ್ನು ಆಯ್ಕೆ ಮಾಡಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯ ನಾಮಿನೇಷನ್ ಪ್ರಕ್ರಿಯೆ ಇಂದು ಶುರುವಾಗಿದೆ. ಇನ್ನು ಬೆಂಗಳೂರಿಗರು ತಮ್ಮ ನೆಚ್ಚಿನ ವ್ಯಕ್ತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಬೇಕಾದರೆ ಆನ್ಲೈನ್ ಮೂಲಕ ಆಯ್ಕೆ ಮಾಡಬೇಕಿದೆ. ಅಂತಿಮವಾಗಿ 'ನಮ್ಮ ಬೆಂಗಳೂರು ಪ್ರಶಸ್ತಿ' ಆಯ್ಕೆ ತೀರ್ಮಾನ , ಜ್ಯೂರಿ ಮೆಂಬರ್ಗಳಿಗೆ ಸೇರಿರುತ್ತದೆ. ಇನ್ನು ಪ್ರಶಸ್ತಿ ಸಮಿತಿಯಲ್ಲಿ 16 ಮಂದಿ ಇದ್ದು, ಪ್ರಶಸ್ತಿಗೆ ಆಯ್ಕೆ ಮಾಡುವ ನಿರ್ಧಾರ, ಆಯ್ಕೆ ಸಮಿತಿಯ ಸದಸ್ಯರ ತಿರ್ಮಾನವೇ ಅಂತಿಮವಾಗಿರುತ್ತದೆ. ಇನ್ನು ಈ ಪ್ರಶಸ್ತಿಗೆ ನಟ ರಮೇಶ್ ಅರವಿಂದ್ ಬ್ರಾಂಡ್ ಅಂಬಾಸಿಡರ್ ಆಗಿದ್ದು. ಇಂದಿನಿಂದ ಆರಂಭವಾಗಿರುವ ನಮ್ಮ ಬೆಂಗಳೂರು ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಮೂರು ತಿಂಗಳು ನಡೆಯಲಿದೆ. 2020 ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು , ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಡಾ. ಅಶ್ವಿನ್ ಮಹೇಶ್ ಹೇಳಿದರು.
ಬೆಂಗಳೂರಿನಲ್ಲಿ ಎಲೆಮರೆಕಾಯಿಯಂತೆ ಇರುವ , ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಎಷ್ಟೋ ಸಾಧಕರು ಈ ಪ್ರಶಸ್ತಿಯಿಂದ ಸಮಾಜದ ಮುನ್ನೆಲೆಗೆ ಬರುತ್ತಾರೆ. ನಾನು ಈಗ ಆಯ್ಕೆ ಸಮಿತಿಯಲ್ಲಿದ್ದು ನಾನೂ ಕೂಡಾ ಈ ಹಿಂದೆ ನಮ್ಮ ಬೆಂಗಳೂರು ಪ್ರಶಸ್ತಿ ಪಡೆದಿದ್ದೇನೆ ಎಂದು ಆಯ್ಕೆ ಸಮಿತಿ ಸದಸ್ಯರಾದ ಡಾ. ಕಾತ್ಯಾಯಿನಿ ಚಾಮರಾಜ್ ತಿಳಿಸಿದರು. ಇನ್ನು 2009ರಲ್ಲಿ ಸ್ಥಾಪನೆಯಾಗಿ ಬೆಂಗಳೂರಿನಲ್ಲಿ ಶಿಕ್ಷಣ, ಕ್ರೀಡೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್ ಸುಮಾರು 10 ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈಗ 11 ನೇ ಸಾಲಿನ ಅವಾರ್ಡ್ ನೀಡಲು ಸಜ್ಜಾಗಿದೆ.