ETV Bharat / city

ವಿಧಾನ ಪರಿಷತ್ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭ - legislative Council Elections nomination date

ವಿಧಾನ ಪರಿಷತ್ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗುತ್ತಿದೆ. ಡಿಸೆಂಬರ್ 10ರ ಶುಕ್ರವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಮಾಡಬಹುದಾಗಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಡಿಸೆಂಬರ್ 16ರ ವೇಳೆಗೆ ಎಲ್ಲ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.

nomination-process-start-for-karnataka-legislative-council-elections
ವಿಧಾನ ಪರಿಷತ್ ಚುನಾವಣೆ
author img

By

Published : Nov 16, 2021, 7:23 AM IST

Updated : Nov 16, 2021, 8:37 AM IST

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆ (ಸ್ಥಳೀಯ ಸಂಸ್ಥೆ) (karnataka legislative Council Elections) ಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗುತ್ತಿದ್ದು, ಚುನಾವಣೆ ಶಾಂತಿಯುತ, ನ್ಯಾಯಸಮುತ ಹಾಗೂ ಪಾರದರ್ಶಕವಾಗಿ ನಡೆಸಲು ಚುನಾವಣಾ ಆಯೋಗ ಎಲ್ಲ ಸಿದ್ದತೆ ಮಾಡಿಕೊಂಡಿದೆ.

ನಾಮಪತ್ರ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಯು 10,000 ರೂ. ಹಾಗೂ ಪರಿಶಿಷ್ಟ ವರ್ಗದ ಅಭ್ಯರ್ಥಿಯು 5,000 ರೂ.ಗಳ ಠೇವಣಿ ಇಡಬೇಕು. ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ನವೆಂಬರ್ 23ರ ಮಧ್ಯಾಹ್ನ 3 ಗಂಟೆಯೊಳಗಾಗಿ ನಾಮಪತ್ರ ಸಲ್ಲಿಸಬಹುದಾಗಿದೆ.

ಡಿಸೆಂಬರ್ 10ರ ಶುಕ್ರವಾರ ಚುನಾವಣೆ ನಡೆಯಲಿದೆ.(legislative Council Elections 2021) ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಮಾಡಬಹುದಾಗಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಡಿಸೆಂಬರ್ 16ರ ವೇಳೆಗೆ ಎಲ್ಲ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.

ಬೀದರ್ 1 , ಕಲಬುರ್ಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಮೈಸೂರು ,2, ಚಿಕ್ಕಮಗಳೂರು 1, ಹಾಸನ1, ತುಮಕೂರು 1, ಮಂಡ್ಯ1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1 ಹಾಗೂ ಕೊಡಗು ಜಿಲ್ಲೆಯ ಒಂದು ಕ್ಷೇತ್ರಕ್ಕೆ ಡಿ. 10ರಂದು ಚುನಾವಣೆ ನಡೆಯಲಿದೆ.

ಜನವರಿ 5ಕ್ಕೆ ತೆರವಾಗುವ ವಿಧಾನ ಪರಿಷತ್ ಸ್ಥಾನಗಳು:

  • ಬಿಜೆಪಿ: ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ
  • ಎಂ.ಕೆ. ಪ್ರಾಣೇಶ್ (ಉಪ ಸಭಾಪತಿ)- ಚಿಕ್ಕಮಗಳೂರು ಸ್ಥಳೀಯ ಸಂಸ್ಥೆ
  • ಮಹಾಂತೇಶ್ ಕವಟಗಿಮಠ (ಸರ್ಕಾರಿ ಮುಖ್ಯ ಸಚೇತಕ)-ಬೆಳಗಾವಿ ಸ್ಥಳೀಯ ಸಂಸ್ಥೆ
  • ಬಿ.ಜಿ. ಪಾಟೀಲ್ - ಕಲಬುರಗಿ ಸ್ಥಳೀಯ ಸಂಸ್ಥೆ
  • ಪ್ರದೀಪ್ ಶೆಟ್ಟರ್- ಧಾರವಾಡ ಸ್ಥಳೀಯ ಸಂಸ್ಥೆ
  • ಸುನೀಲ್ ಸುಬ್ರಮಣಿ- ಕೊಡಗು ಸ್ಥಳೀಯ ಸಂಸ್ಥೆ
  • ಪಕ್ಷೇತರ

ವಿವೇಕರಾವ್ ಪಾಟೀಲ್ – ಬೆಳಗಾವಿ ಸ್ಥಳೀಯ ಸಂಸ್ಥೆ

  • ಕಾಂಗ್ರೆಸ್- ಎಸ್.ಆರ್. ಪಾಟೀಲ್ (ವಿಪಕ್ಷ ನಾಯಕ)- ವಿಜಯಪುರ ಸ್ಥಳೀಯ ಸಂಸ್ಥೆ
  • ಎಂ. ನಾರಾಯಣಸ್ವಾಮಿ (ವಿಪಕ್ಷ ಮುಖ್ಯ ಸಚೇತಕ)-ಬೆಂಗಳೂರು ಸ್ಥಳೀಯ ಸಂಸ್ಥೆ
  • ಪ್ರತಾಪ್ ಚಂದ್ರ ಶೆಟ್ಟಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ
  • ಶ್ರೀಕಾಂತ್ ಘೋಟ್ನೇಕರ್- ಉತ್ತರ ಕನ್ನಡ ಸ್ಥಳೀಯ ಸಂಸ್ಥೆ
  • ಶ್ರೀನಿವಾಸ್ ಮಾನೆ- ಧಾರವಾಡ ಸ್ಥಳೀಯ ಸಂಸ್ಥೆ( ಇವರು ಹಾನಗಲ್​ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ)
  • ಧರ್ಮಸೇನ-ಮೈಸೂರು ಸ್ಥಳೀಯ ಸಂಸ್ಥೆ
  • ವಿಜಯ್ ಸಿಂಗ್- ಬೀದರ್ ಸ್ಥಳೀಯ ಸಂಸ್ಥೆ
  • ಬಸವರಾಜ್ ಪಾಟೀಲ್ ಇಟಗಿ- ರಾಯಚೂರು ಸ್ಥಳೀಯ ಸಂಸ್ಥೆ
  • ಕೆ.ಸಿ. ಕೊಂಡಯ್ಯ-ಬಳ್ಳಾರಿ ಸ್ಥಳೀಯ ಸಂಸ್ಥೆ
  • ಆರ್. ಪ್ರಸನ್ನಕುಮಾರ್- ಶಿವಮೊಗ್ಗ ಸ್ಥಳೀಯ ಸಂಸ್ಥೆ
  • ಎಂ.ಎ. ಗೋಪಾಲಸ್ವಾಮಿ-ಹಾಸನ ಸ್ಥಳೀಯ ಸಂಸ್ಥೆ
  • ಎಸ್. ರವಿ- ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆ
  • ರಘು ಆಚಾರ್- ಚಿತ್ರದುರ್ಗ ಸ್ಥಳೀಯ ಸಂಸ್ಥೆ
  • ಸುನೀಲ್ ಗೌಡ ಪಾಟೀಲ್- ವಿಜಯಪುರ ಸ್ಥಳೀಯ ಸಂಸ್ಥೆ
  • ಜೆಡಿಎಸ್ : ಎನ್. ಅಪ್ಪಾಜಿ ಗೌಡ (ಜೆಡಿಎಸ್ ಮುಖ್ಯ ಸಚೇತಕ)-ಮಂಡ್ಯ ಸ್ಥಳೀಯ ಸಂಸ್ಥೆ
  • ಸಂದೇಶ್ ನಾಗರಾಜ್-ಮೈಸೂರು ಸ್ಥಳೀಯ ಸಂಸ್ಥೆ( ಇವರು ಇದೀಗ ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ)
  • ಸಿ.ಆರ್. ಮನೋಹರ್- ಕೋಲಾರ ಸ್ಥಳೀಯ ಸಂಸ್ಥೆ
  • ಕಾಂತರಾಜು- ತುಮಕೂರು ಸ್ಥಳೀಯ ಸಂಸ್ಥೆ

ತೆರವಾಗುತ್ತಿರುವ 25 ವಿಧಾನ ಪರಿಷತ್ ಸ್ಥಾನಗಳ ವಿವರ

  1. ಬಿಜೆಪಿ – 6
  2. ಪಕ್ಷೇತರ – 1
  3. ಕಾಂಗ್ರೆಸ್​​- 14
  4. ಜೆಡಿಎಸ್​​​ -4
  • ದ್ವಿಸದಸ್ಯ ಸ್ಥಾನಗಳಿರುವ ಕ್ಷೇತ್ರಗಳು
  1. ವಿಜಯಪುರ
  2. ಬೆಳಗಾವಿ
  3. ಮೈಸೂರು
  4. ಧಾರವಾಡ
  5. ದಕ್ಷಿಣ ಕನ್ನಡ

ಮಾದರಿ ನೀತಿಸಂಹಿತೆಯು ನವೆಂಬರ್ 9 ರಿಂದ ಡಿಸೆಂಬರ್ 16ರ ತನಕ ಜಾರಿಯಲ್ಲಿರುತ್ತದೆ. ಒಟ್ಟು 25 ಸದಸ್ಯರು ನಿವೃತ್ತರಾಗಲಿದ್ದು, ಅವರ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣೆ ನಡೆಸಲಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆಯಬಹುದಾಗಿದೆ.

ನೀತಿ ಸಂಹಿತೆ, ಮತದಾರರು ಚುನಾವಣಾ ಮಾದರಿ ನೀತಿ ಸಂಹಿತೆ ಜನಪ್ರತಿನಿಧಿಗಳಿಗೆ ಮಾತ್ರವಲ್ಲದೇ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ನೀತಿ ಸಂಹಿತೆಗೆ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕಾಗಿದೆ. ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ.

ಮತದಾರರು; ವಿಧಾನ ಪರಿಷತ್ ಚುನಾವಣೆಯಲ್ಲಿ ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನ ಪರಿಷತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ. ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯವನ್ನು ನಿಗದಿತ ನಮೂನೆಯಲ್ಲಿ ಕೈಗೊಂಡು ಅರ್ಹ ಮತದಾರರ ವಿವರಗಳನ್ನು ಪ್ರಕಟಿಸಲಾಗುತ್ತದೆ

Last Updated : Nov 16, 2021, 8:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.