ETV Bharat / city

ಶಬ್ಧ ಮಾಲಿನ್ಯ : ವಾಹನಗಳು, ನೈಟ್ ಕ್ಲಬ್ ವಿರುದ್ಧ ಕ್ರಮ ಜರುಗಿಸಲು ಹೈಕೋರ್ಟ್ ಸೂಚನೆ

ಶಬ್ಧ ಮಾಲಿನ್ಯಕ್ಕೆ (Noise Pollution) ಕಾರಣವಾಗಿರುವ ದ್ವಿಚಕ್ರ ವಾಹನಗಳು, ನೈಟ್ ಕ್ಲಬ್​​ಗಳ (Nigh Clubs) ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶಿಸಿದೆ..

hc
hc
author img

By

Published : Nov 16, 2021, 4:19 PM IST

ಬೆಂಗಳೂರು : ರಾಜ್ಯದಲ್ಲಿ ಶಬ್ಧ ಮಾಲಿನ್ಯಕ್ಕೆ (Noise Pollution) ಕಾರಣವಾಗಿರುವ ದ್ವಿಚಕ್ರ ವಾಹನಗಳು, ನೈಟ್ ಕ್ಲಬ್​​ಗಳ (Night Clubs) ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ (Karnataka High court) ನಿರ್ದೇಶಿಸಿದೆ.

ನಗರದ ಥಣಿಸಂದ್ರ ಸುತ್ತಮುತ್ತಲಿನ ಮಸೀದಿಗಳು ಶಬ್ಧ ಮಾಲಿನ್ಯ ಉಂಟು ಮಾಡುತ್ತಿರುವುದನ್ನು ಆಕ್ಷೇಪಿಸಿ ಸ್ಥಳೀಯ ನಿವಾಸಿಗಳು ಹಾಗೂ ರಾಜ್ಯದಲ್ಲಿ ಶಬ್ಧ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಕೋರಿ ಗಿರೀಶ್ ಭಾರದ್ವಾಜ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿ, ನಗರದಲ್ಲಿ ಶಬ್ಧ ಮಾಲಿನ್ಯ ಹೆಚ್ಚುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಿತ ಪ್ರಾಧಿಕಾರಗಳು ಯಾವುವೂ ಕಾನೂನು ರೀತಿ ಕ್ರಮ ಜರುಗಿಸುತ್ತಿಲ್ಲ. ಇತ್ತೀಚೆಗೆ ತನಗೆ ಅಧಿಕಾರವಿಲ್ಲದಿದ್ದರೂ ವಕ್ಫ್ ಮಂಡಳಿ ಕಡಿಮೆ ಡೆಸಿಬಲ್​​ನಲ್ಲಿ ದ್ವನಿವರ್ಧಕಗಳನ್ನು ಬಳಸಲು ಸುತ್ತೋಲೆ ಹೊರಡಿಸಿದೆ.

ಇದು ಸರಿಯಾದ ಕ್ರಮವಲ್ಲ. ಶಬ್ಧ ಮಾಲಿನ್ಯ ನಿಯಂತ್ರಣ ನಿಯಮಗಳು-2000ರ ನಿಯಮಗಳ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ದ್ವನಿವರ್ಧಕ ಬಳಸುವಂತಿಲ್ಲ. ಅದೇ ರೀತಿ ಸಾರ್ವಜನಿಕ ಹಬ್ಬಗಳ ಸಂದರ್ಭದಲ್ಲಿ ವಾರ್ಷಿಕ 15 ದಿನಗಳಷ್ಟೇ ದ್ವನಿವರ್ಧಕ ಬಳಕೆಗೆ ಅವಕಾಶವಿದೆ. ಆದರೆ, ರಾಜ್ಯದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ ಎಂದರು.

ವಾದ ಆಲಿಸಿದ ಪೀಠ, ಮಾರ್ಪಾಡಿತ ವಾಹನಗಳು ಮತ್ತು ಅವುಗಳ ದ್ವನಿವರ್ಧಕಗಳಿಂದಲೂ ಶಬ್ಧ ಮಾಲಿನ್ಯ ಉಂಟಾಗುತ್ತಿದೆ. ಈ ವಾಹನಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿತು. ನಗರದ ಯಾವುದೇ ಮುಖ್ಯ ರಸ್ತೆ ಸಮೀಪ ಹೋದರೂ ಶಬ್ಧ ಮಾಲಿನ್ಯ ವಿಪರೀತಿ ಇರುವುದು ಗೊತ್ತಾಗುತ್ತದೆ.

ಪರಿಸ್ಥಿತಿ ನೋಡಿದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ, ಮಸೀದಿಗಳು ಪ್ರಮಾಣ ಪತ್ರದಲ್ಲಿ ವಕ್ಫ್ ಬೋರ್ಡ್ (Wakf Board) ಸೂಚನೆಯಂತೆ ದ್ವನಿವರ್ಧಕ ಬಳಸುತ್ತಿದ್ದೇವೆ ಎಂದು ತಿಳಿಸಿವೆ. ಆದರೆ ವಕ್ಪ್ ಬೋರ್ಡ್​ಗೆ ದ್ವನಿವರ್ಧಕ ಬಳಸಲು ಅನುಮತಿ ನೀಡುವ ಅಧಿಕಾರವಿಲ್ಲ. ಹೀಗಾಗಿ ಯಾವ ಕಾನೂನಿನ ಅಡಿ ಇಂತಹ ಸುತ್ತೋಲೆ ಹೊರಡಿಸಿದೆ ಎಂಬ ಬಗ್ಗೆ ವಕ್ಪ್ ಮಂಡಳಿ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿತು.

ಇನ್ನು ರಾಜ್ಯದಲ್ಲಿ ಮಾರ್ಪಾಡು ಆಗಿರುವ ವಾಹನಗಳಿಂದಲೂ ಶಬ್ಧ ಮಾಲಿನ್ಯ ಮಿತಿಮೀರಿದೆ. ನೈಟ್ ಕ್ಲಬ್​​ಗಳೂ ಇದಕ್ಕೆ ಹೊರತಾಗಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳು ಮಿತಿಮೀರಿದ ಶಬ್ಧ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ವಾಹನಗಳ ವಿರುದ್ಧ, ನೈಟ್ ಕ್ಲಬ್​​ಗಳ ವಿರುದ್ಧ ಕಾರ್ಯಾಚರಣೆ ನಡೆಸಬೇಕು. ಶಬ್ಧ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ವಾಹನಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಮುಂದಿನ ವಿಚಾರಣೆ ವೇಳೆ ಈ ಕುರಿತು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.