ETV Bharat / city

Dharwad corona report : ಇಳಿಕೆ ಕಂಡ ಕೊರೊನಾ, SDM ಸೇರಿ 311 ಸಕ್ರಿಯ ಪ್ರಕರಣಗಳು

ಧಾರವಾಡದ ಎಸ್​ಡಿಎಂ ಕಾಲೇಜಿನಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತ ಹೈಅಲರ್ಟ್​ ಅಗಿದೆ. ಭಾನುವಾರ ಕೋವಿಡ್​​ ಪ್ರಕರಣಗಳು ಇಳಿಮುಖ ಕಂಡಿವೆ. ಹಳೆಯ ಹಾಗೂ ಎಸ್​ಡಿಎಂ ಪ್ರಕರಣಗಳು ಸೇರಿ ಒಟ್ಟು 311 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾಡಳಿತ ತಿಳಿಸಿದೆ.

dharwad-district
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
author img

By

Published : Nov 29, 2021, 12:37 PM IST

ಧಾರವಾಡ: ಜಿಲ್ಲೆಯಲ್ಲಿ ಭಾನುವಾರ ಯಾವುದೇ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಆದ್ರೆ ಹಳೆಯ ಹಾಗೂ ಎಸ್​ಡಿಎಮ್​​​ ವೈದ್ಯಕೀಯ ಕಾಲೇಜಿನ ಕೇಸ್​ಗಳು ಸೇರಿ ಒಟ್ಟು 311 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

SDM corona cases : ಎಸ್​ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮೂರು ದಿನಗಳಿಂದ ಕೊರೊನಾ ಸ್ಫೋಟಗೊಂಡಿತ್ತು. ಭಾನುವಾರ ಕೋವಿಡ್ ಪ್ರಕರಣಗಳು ಸ್ವಲ್ಪ ಇಳಿಮುಖ ಕಂಡಿವೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈವರೆಗೆ ವೈರಸ್​ ತಗುಲಿರುವ 306 ಜನರ ಪೈಕಿ 14 ಮಂದಿ ವೈದ್ಯರಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗ್ತಿದೆ.

ಸೋಂಕು ಕಾಣಿಸಿಕೊಂಡಿರುವ ಕೆಲವರಲ್ಲಿ ಮಾತ್ರ ರೋಗದ ಲಕ್ಷಣಗಳು ಕಂಡುಬಂದಿವೆ. ಉಳಿದವರಲ್ಲಿ ಯಾವುದೇ ಲಕ್ಷಣಗಳಿಲ್ಲ ಎಂಬ ಮಾಹಿತಿಯಿದೆ. ಮುಂಜಾಗ್ರತಾ ‌ಕ್ರಮವಾಗಿ ಜಿಲ್ಲಾಡಳಿತ ಸತ್ತೂರಿನ ಎಸ್​ಡಿಎಂ ಸುತ್ತಲಿನ 500 ಮೀಟರ್ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಇಂದಿನಿಂದ ಡಿಸೆಂಬರ್ 1 ರವರೆಗೆ ಮೂರು ದಿನಗಳ ಕಾಲ ರಜೆ ಮುಂದುವರಿಕೆ ಮಾಡಿದೆ. ಎಸ್​ಡಿಎಂ ಆವರಣದಲ್ಲಿ ಸೋಂಕು ಪತ್ತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.