ETV Bharat / city

ಕಲಬುರಗಿ ಮೇಯರ್, ಉಪಮೇಯರ್ ಬಗ್ಗೆ 'ನೋ ಕಾಮೆಂಟ್' ಎಂದ ಸಿಎಂ ಬೊಮ್ಮಾಯಿ - ಕಲಬುರಗಿ ಪಾಲಿಕೆ ಚುನಾವಣೆ ಫಲಿತಾಂಶ

ಕಲಬುರಗಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ಬಗ್ಗೆ ಮಾತನಾಡಲು ಸಿಎಂ ಬೊಮ್ಮಾಯಿ ನಿರಾಕರಿಸಿದರು.

cm bommai
cm bommai
author img

By

Published : Sep 16, 2021, 7:10 PM IST

ಹುಬ್ಬಳ್ಳಿ: ಕಲಬುರಗಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ನೋಟಿಪಿಕೇಶನ್ ಆಗಲಿ. ಆ ವಿಚಾರದಲ್ಲಿ ನಾನು ಏನನ್ನೂ ಮಾತನಾಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಲಬುರಗಿ ಮೇಯರ್, ಉಪಮೇಯರ್ ಆಯ್ಕೆ ಬಗ್ಗೆ ಮಾತನಾಡಲು‌ ನಿರಾಕರಿಸಿದರು. 2019-20 ಸಾಲಿನಲ್ಲಿ ಮಂಡಿಸಿದ ಅವಾಸ್ತವಿಕ ಬಜೆಟ್​​ನಿಂದ 29,863 ಕೋಟಿ ಹಣ ಬಳಕೆಯಾಗದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಅದನ್ನು ಮರಳಿ ಖರ್ಚು ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿರುವೆ ಎಂದು ತಿಳಿಸಿದರು.

ಶಿಕ್ಷಕರ ವರ್ಗಾವಣೆ ಮುಂದೂಡಿಕೆ ವಿಚಾರ ಸಂಬಂಧ ಮಾತನಾಡಿ, ಅದು ನ್ಯಾಯಾಲಯದ ತೀರ್ಮಾನವಾಗಿದೆ ಎಂದಿರುವ ಅವರು, ಪೆಟ್ರೋಲ್ ಬೆಲೆ ವಿಚಾರದಲ್ಲಿ ಸೆಸ್ ಕಡಿಮೆ ಮಾಡುವ ಬಗ್ಗೆ ನಾಳೆ ಸದನದಲ್ಲಿ ಉತ್ತರ ಕೊಡುತ್ತೇನೆ ಎಂದರು.

ಕರಾವಳಿ ಭಾಗದಲ್ಲಿ ಸ್ಯಾಟ​ಲೈಟ್ ಫೋನ್ ಬಳಕೆ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತಾ, ಆ ಬಗ್ಗೆ ಗೃಹ ಸಚಿವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರ ಸಂಪೂರ್ಣ ನಿಗಾವಹಿಸಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್​​-ಜೆಡಿಎಸ್​ ಮೈತ್ರಿ?: ಶರಣಪ್ರಕಾಶ್ ಪಾಟೀಲ್ ಸುಳಿವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.