ETV Bharat / city

'ರಾಜ್ಯೋತ್ಸವ ಪ್ರಶಸ್ತಿ' ಪ್ರದಾನಕ್ಕೂ ಮುನ್ನ ಆಯ್ಕೆ ಸಮಿತಿ ಸದಸ್ಯೆ ಯಡವಟ್ಟು ಮಾಡಿದರೇ? - ನಿರುಪಮಾ ರಾಜ್ಯೋತ್ಸವ ಪ್ರಶಸ್ತಿ ಮಾಹಿತಿ ಸುದ್ದಿ

ಪ್ರಶಸ್ತಿ ಪ್ರದಾನಕ್ಕೂ ಮುನ್ನವೇ ತಾನು ಸೂಚಿಸಿರುವ ಐವರಿಗೆ ಪ್ರಶಸ್ತಿ ಘೋಷಣೆಯಾಗಿದ್ದು ಖುಷಿ ತಂದಿದೆ ಎಂದು ರಾಜ್ಯೋತ್ಸವ ಆಯ್ಕೆ ಸಮಿತಿ ಸದಸ್ಯೆ ವಿಡಿಯೋ ಮೂಲಕ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ‌ ಸದಸ್ಯೆಯಿಂದ ಯಡವಟ್ಟು
author img

By

Published : Oct 29, 2019, 5:44 PM IST

Updated : Oct 29, 2019, 6:31 PM IST

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೂ ಮೊದಲೇ ತಾನು ಸೂಚಿಸದ ಐವರ ಹೆಸರನ್ನು ಪರಿಗಣಿಸಿ ಪ್ರಶಸ್ತಿ ಪ್ರಕಟಿಸಲಾಗಿದೆ ಎಂಬ ವಿಚಾರವನ್ನು ಆಯ್ಕೆ ಸಮಿತಿ ಸದಸ್ಯೆ ವಿಡಿಯೋ ಮುಖೇನ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಆಯ್ಕೆ ಸಮಿತಿಯ ಯಾವೊಬ್ಬ ಸದಸ್ಯರೂ ಸಮಿತಿಯ ಗುಟ್ಟು ಬಿಟ್ಟುಕೊಡುವಂತಿಲ್ಲ. ಆದರೂ ಇದೇ ಮೊದಲ ಬಾರಿಗೆ ಆಯ್ಕೆ ಸಮಿತಿಯ ಗುಟ್ಟು ರಟ್ಟಾಗಿದೆ. ಆಯ್ಕೆ ಸಮಿತಿ ಸದಸ್ಯೆಯಾಗಿರುವ ನಿರುಪಮಾ ತಾನು ಸೂಚಿಸಿರುವ ರಾಘವೇಂದ್ರ ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ ಎಂಬುದನ್ನು ತಿಳಿದು ಸಂತಸವಾಗಿದೆ ಎಂದಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ‌ ಸದಸ್ಯೆ ನಿರುಪಮಾ ಹರಿಬಿಟ್ಟಿರುವ ವಿಡಿಯೋ

ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್ ಹೋಟೆಲ್ ಮಾಲಿಕರಿಗೆ ಸಂಘ ಸಂಸ್ಥೆಗಳ ಕೆಟಗರಿಯಲ್ಲಿ ರಾಜ್ಯೋತ್ಸವ ‌ಪ್ರಶಸ್ತಿ ಬಂದಿದೆ. ಹೋಟೆಲ್ ಮಾಲಿಕ ರಾಘವೇಂದ್ರ ಸೇರಿದಂತೆ ಐವರ ಹೆಸರನ್ನು ನನ್ನ ಕಡೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಿಳಿಸಿದ್ದೆ. ನನ್ನ ಆಯ್ಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ಮತ್ತು ಸಿಎಂ ಯಡಿಯೂರಪ್ಪ ಗೌರವಿಸಿ ಪ್ರಶಸ್ತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

Intro:

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೂ ಮೊದಲೇ ತಾನು ಶಿಫಾರಸ್ಸು ಮಾಡಿದ್ದ ಐವರ ಹೆಸರನ್ನು ಪರಿಗಣಿಸಿ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಆಯ್ಕೆ ಸಮಿತಿ ಸದಸ್ಯರೊಬ್ಬರು ಮಾಹಿತಿಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೀಡಿಯೋ ಫುಲ್ ವೈರಲ್ ಆಗಿದೆ.

ಆಯ್ಕೆ ಸಮಿತಿ ಸದಸ್ಯೆಯಾಗಿದ್ದ ನಿರೂಪಮಾ ರಾಜೇಂದ್ರ ಯಡವಟ್ಟು ಮಾಡಿಕೊಂಡಿದ್ದಾರೆ.ಇದೂವರೆಗೂ ಯಾರೂ ಮಾಡದ ಯಡವಟ್ಟು ಮಾಡಿದ್ದು,ತಾನು ಶಿಫಾರಸು ಮಾಡಿದ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ವಿತರಣೆಗೆ ಮುನ್ನವೇ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಆಯ್ಕೆ ಸಮಿತಿಯ ಯಾವೊಬ್ಬ ಸದಸ್ಯರೂ ಸಮಿತಿಯ ಗುಟ್ಟು ಬಿಟ್ಟುಕೊಡುವಂತಿಲ್ಲ ಆದರೂ ಇದೇ ಮೊದಲ ಬಾರಿಗೆ ಆಯ್ಕೆ ಸಮಿತಿಯ ಗುಟ್ಟು ರಟ್ಟಾಗಿದೆ.ಆಯ್ಕೆ ಸಮಿತಿ ಸದಸ್ಯೆಯಾಗಿದ್ದೂ ನಿಯಮ‌ ಮೀರಿ ವರ್ತಿಸಿರುವ ನಿರೂಪಮಾ ತಾನು ಶಿಫಾರಸ್ಸು ಮಾಡಿದ ರಾಘವೇಂದ್ರಗೆ ಪ್ರಶಸ್ತಿ ಘೋಷಣೆಯಾಗಿದೆ ಎಂದು ಅದೇ ಹೋಟೆಲ್ ನಲ್ಲಿ ಕುಳಿತು ವಿಡಿಯೋ‌ ಮಾಡಿ ಹರಿಬಿಟ್ಟಿದ್ದಾರೆ.

ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್ ಹೋಟೆಲ್ ಮಾಲಿಕರಿಗೆ ಸಂಘ ಸಂಸ್ಥೆಗಳ ಕೆಟಗರಿಯಲ್ಲಿ ರಾಜ್ಯೋತ್ಸವ ‌ಪ್ರಶಸ್ತಿ ಬಂದಿದೆ.ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್ ಮಾಲಿಕ ರಾಘವೇಂದ್ರ ಸೇರಿದಂತೆ ಐವರಿಗೆ ನನ್ನ ಕಡೆಯಿಂದ ಶಿಫಾರಸ್ಸು ಮಾಡಿದ್ದೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪಗೇ ನಾನು ಐವರ ಹೆಸರನ್ನು ಶಿಫಾರಸು ಮಾಡಿದ್ದೆ.ನನ್ನ ಶಿಫಾರಸ್ಸನ್ನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಸಿಎಂ ಯಡಿಯೂರಪ್ಪ ಗೌರವಿಸಿದ್ದಾರೆ. ನಾನು ಶಿಫಾರಸ್ಸು ಮಾಡಿದ ಐವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಮಾಹಿತಿ ಬಹುರಂಗೊಡಿಸಿದ್ದು, ಪ್ರಶಸ್ತಿಯ ಮೌಲ್ಯದ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ ಇದರಿಂದಾಗಿ ರಾಜ್ಯ ಸರ್ಕಾರವೂ
ಮುಜುಗರಕ್ಕೀಡಾಗಿದೆ.
Body:.Conclusion:
Last Updated : Oct 29, 2019, 6:31 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.