ETV Bharat / city

ರಾಜ್ಯದಲ್ಲಿ ಡಿ.28 ರಿಂದ 10 ದಿನ ನೈಟ್​​ ಕರ್ಫ್ಯೂ ಜಾರಿ

ಡಿಸೆಂಬರ್‌ 28ರಿಂದ ಹತ್ತು ದಿನಗಳ ಕಾಲ (ಜನವರಿ 8) ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ತಿಳಿಸಿದರು.

Minister K sudhakar
ಸಚಿವ ಡಾ.ಕೆ.ಸುಧಾಕರ್​
author img

By

Published : Dec 26, 2021, 10:49 AM IST

Updated : Dec 26, 2021, 11:35 AM IST

ಬೆಂಗಳೂರು: ಒಮಿಕ್ರಾನ್ ತಡೆಯಲು ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಡಿಸೆಂಬರ್ 28 ರಿಂದ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿರುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಜ್ಞರ ಸಮಿತಿ ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಒಮಿಕ್ರಾನ್ ಯಾವ ರೀತಿಯಲ್ಲಿ ಹರಡಿದೆ ಎಂದು ಬೇರೆ ದೇಶ ಮತ್ತು ರಾಜ್ಯಗಳ ಅಧ್ಯಯನ ಮಾಡಿ, ನಮ್ಮ ರಾಜ್ಯದಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಅದರಂತೆ ರಾಜ್ಯಾದ್ಯಂತ ಡಿಸೆಂಬರ್ 28 ರಿಂದ 10 ದಿನಗಳ ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿದ್ದು, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಹೊಸ ವರ್ಷಾಚರಣೆ ನಿಷೇಧವಿರಲಿದೆ ಎಂದರು.

ಮೊದಲಿಗೆ ಪಬ್, ಬಾರ್, ಹೋಟೆಲ್‌ಗೆ ‌ಮಾತ್ರ ಆಸನ ಸಾಮರ್ಥ್ಯದ ಶೇ. 50ಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ, ಸಿನಿಮಾಗೆ ಶೇ.50 ಆಸನ ನಿಯಮ ಅನ್ವಯ ಆಗಲ್ಲ, ಆದರೆ ನೈಟ್ ಕರ್ಫ್ಯೂ ವೇಳೆ ಸಿನಿಮಾ ಬಂದ್ ಇರಲಿದೆ, ಮುಂದಿನ 10 ದಿನ ಪರಿಸ್ಥಿತಿ ‌ನೋಡಿಕೊಂಡು ಸಿಎಂ ತೀರ್ಮಾನ ಮಾಡುವರು ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲಿ ಈಗಾಗಲೇ ಮೊದಲ ಡೋಸ್ ಶೇ.97ರಷ್ಟು ಆಗಿದೆ. ಬಾಕಿ ಉಳಿದ ಶೇ.3ರಷ್ಟು ಮೊದಲ ಡೋಸ್ ಅನ್ನು ಶೀಘ್ರವೇ ಹಾಕಲಾಗುತ್ತದೆ. ರಾಜ್ಯದಲ್ಲಿ ಲಸಿಕೆ ಹಾಕಲು ಸಮರೋಪಾದಿಯಲ್ಲಿ ಕೆಲಸ ನಡೆಸುತ್ತಿದೆ. ದೇಶದಲ್ಲಿ ಒಮಿಕ್ರಾನ್ 400ರ ಗಡಿ ದಾಟಿದೆ, ಒಮಿಕ್ರಾನ್ ಪ್ರಮಾಣ ಹೆಚ್ಚಳವಾಗೋ ಎಲ್ಲಾ ಸಾಧ್ಯತೆ ಇದೆ, ಹಾಗಾಗಿ, ಮುಂಜಾಗ್ರತಾ ಕ್ರಮ ಅನಿವಾರ್ಯ ಎಂದು ತಿಳಿಸಿದರು.

ಸೋಂಕು ಹೆಚ್ಚಾಗುವ ಮುನ್ನವೇ 2 ಡೋಸ್ ತೆಗೆದುಕೊಳ್ಳಿ, ಇದರಿಂದ ಸಾವು ನೋವು ಕಡಿಮೆ ಆಗಲಿದೆ ಎಂದು ಜನತೆಗೆ ಮನವಿ ಮಾಡಿದ ಡಾ.ಸುಧಾಕರ್, ಪರಿಸ್ಥಿತಿ ಎದುರಿಸಲು 4000 ಐಸಿಯು ಬೆಡ್ ತಯಾರು ಮಾಡಿದ್ದೇವೆ, 7051 ಐಸಿಯು ಬೆಡ್‌ಗಳನ್ನು ರೆಡಿ ಮಾಡಲು ಹೇಳಿದ್ದೇವೆ. ಒಮಿಕ್ರಾನ್ ಎದುರಿಸಲು ಉಪಕರಣಗಳನ್ನು ತಗೆದುಕೊಳ್ಳಲು ತಜ್ಞರ ಸಮಿತಿ ಹೇಳಿದೆ. ಅದರಂತೆ, ಒಮಿಕ್ರಾನ್ ಶೀಘ್ರ ಪತ್ತೆಗೆ ಥರ್ಮೋಫಿಶೆರ್ ಖರೀದಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೊದಲನೇ ಹಂತದಲ್ಲಿ 15 -18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭಿಸಲಿದ್ದು, ಜನವರಿ 3ರಿಂದ ಮೊದಲ ಹಂತದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಚಾಲನೆ ನೀಡಲಾಗುತ್ತದೆ.

15-18 ವರ್ಷದ 45 ಲಕ್ಷ ಜನ ಮಕ್ಕಳಿದ್ದಾರೆ, ಅವರಿಗೆಲ್ಲಾ ಲಸಿಕೆ ನೀಡಲಾಗುತ್ತದೆ. 3ನೇ ಡೋಸ್ ಜನವರಿ 10ರಿಂದ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ 3ನೇ ಡೋಸ್ ನೀಡಲಾಗುತ್ತದೆ. ಪ್ರತೀ ಜಿಲ್ಲೆ, ಪ್ರತಿ ರಾಜ್ಯದಲ್ಲಿ ಕೋವಿಡ್ ವಾರಿಯರ್ಸ್‌ಗೆ 3ನೇ ಡೋಸ್ ನೀಡುತ್ತೇವೆ. ಕೇಂದ್ರದಿಂದ ಮಾರ್ಗಸೂಚಿ ಇನ್ನೂ ಬಂದಿಲ್ಲ, ಮಾರ್ಗಸೂಚಿ ಬರುತ್ತಿದ್ದಂತೆ ಅದರ ಪ್ರಕಾರ ಮಕ್ಕಳಿಗೆ ಲಸಿಕೆ ನೀಡುತ್ತೇವೆ ಎಂದರು.

ಇದನ್ನೂ ಓದಿ: ಒಮಿಕ್ರಾನ್ ಬಗ್ಗೆ ತಜ್ಞರ ಸಮಿತಿ ಜೊತೆ ಸಿಎಂ ಮಹತ್ವದ ಸಭೆ ಆರಂಭ: ಜಾರಿಯಾಗುತ್ತಾ ನೈಟ್ ಕರ್ಫ್ಯೂ?

Last Updated : Dec 26, 2021, 11:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.