ETV Bharat / city

ರಾಜ್ಯದಲ್ಲಿ ಮೊದಲ ದಿನದ ನೈಟ್ ಕರ್ಫ್ಯೂ ಯಶಸ್ವಿ: ತಡರಾತ್ರಿ ಬೆಂಗಳೂರಲ್ಲಿ ರೌಂಡ್ಸ್ ಹಾಕಿದ ಆರೋಗ್ಯ ಸಚಿವರು - ಕೊರೊನಾ ಎರಡನೇ ಅಲೆ

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಶನಿವಾರ ರಾತ್ರಿಯಿಂದ ರಾಜ್ಯದ 8 ನಗರಗಳಲ್ಲಿ ಹೇರಿರುವ ನೈಟ್​ ಕರ್ಫ್ಯೂ ಮೊದಲ ದಿನ ಯಶಸ್ವಿಯಾಗಿದೆ. ರಾತ್ರಿ ಬೆಂಗಳೂರಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಖುದ್ದು ತಪಾಸಣೆ ನಡೆಸಿದರು.

night curfew in eight cities was successful
ತಡರಾತ್ರಿ ಸಿಲಿಕಾನ್​ ಸಿಟಿ ರೌಂಡ್ಸ್ ಹಾಕಿದ ಆರೋಗ್ಯ ಸಚಿವ
author img

By

Published : Apr 11, 2021, 8:59 AM IST

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಎಂಟು ನಗರಗಳಲ್ಲಿ ಹೊರಡಿಸಿದ ರಾತ್ರಿ ಕರ್ಫ್ಯೂ ಯಶಸ್ವಿಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಡರಾತ್ರಿ ರೌಂಡ್ಸ್​ ಹಾಕಿ, ಬಂದೋಬಸ್ತ್ ಪರಿಶೀಲಿಸಿದರು‌‌.

ತಡರಾತ್ರಿ ಸಿಲಿಕಾನ್​ ಸಿಟಿ ರೌಂಡ್ಸ್ ಹಾಕಿದ ಆರೋಗ್ಯ ಸಚಿವ

ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ರ್ಕಾರ ಎಂಟು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಮಾರ್ಗಸೂಚಿ ಹೊರಡಿಸುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಜಾರಿಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿತ್ತು. ರಾತ್ರಿ 10 ರಿಂದ ಮುಂಜಾನೆ 5 ಗಂಟೆವರೆಗೆ ಅನಗತ್ಯ ವಾಹನ ಹಾಗೂ ಸಾರ್ವಜನಿಕರ ಸಂಚಾರ ಓಡಾಟಕ್ಕೆ ನಿರ್ಬಂಧ ಹೇರಿ, ರಾತ್ರಿ 10 ಗಂಟೆ ನಂತರ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ ಚಟುವಟಿಕೆ ಮೇಲೆ ನಿಯಂತ್ರಣ ವಿಧಿಸಲಾಗಿತ್ತು. ಇದನ್ನು ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಪಾಲಿಸಲಾಯಿತು.

night curfew in eight cities was successful
ತಡರಾತ್ರಿ ಸಿಲಿಕಾನ್​ ಸಿಟಿ ರೌಂಡ್ಸ್ ಹಾಕಿದ ಆರೋಗ್ಯ ಸಚಿವ

ರಾತ್ರಿ ವೇಳೆ ಕಾರಣ ಇಲ್ಲದೆ ಅನಗತ್ಯವಾಗಿ ಓಡಾಟ ಮಾಡುವ ಸಾರ್ವಜನಿಕರು ಹಾಗೂ ವಾಹನಗಳ ಬಗ್ಗೆ ನಿಗಾವಹಿಸಿ ಕ್ರಮಕೈಗೊಳ್ಳಲಾಯಿತು. ಕಾನೂನು ಮೀರಿದವರ ವಿರುದ್ಧ ಹಲವು ಪ್ರಕರಣ ದಾಖಲಿಸಲಾಗಿದೆ. ನಗರದ ಪ್ರಮುಖ ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರ ನಿರ್ಬಂಧ ಹಾಗೂ ರಾತ್ರಿ ಕರ್ಫ್ಯೂೂ ಅನುಷ್ಠಾನ ಸಂಬಂಧ ಬಿಬಿಎಂಪಿ ಸೇರಿದಂತೆ ಇತರೆ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಿವೆ.

ಆರೋಗ್ಯ ಸಚಿವರ ಸಿಟಿ ರೌಂಡ್ಸ್:
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಡರಾತ್ರಿ ಸಿಲಿಕಾನ್​ ಸಿಟಿಯಲ್ಲಿ ಸಂಚಾರ ನಡೆಸಿ, ಪ್ರಮುಖ ಆಸ್ಪತ್ರೆಗಳು ಹಾಗೂ ಪ್ರಮುಖ ಜಂಕ್ಷನ್​ಗಳಿಗೆ ತೆರಳಿ ಪೊಲೀಸರು, ಪಾಲಿಕೆ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಸಿದ್ಧತೆ ಬಗ್ಗೆ ತಪಾಸಣೆ ನಡೆಸಿದರು.

ಪ್ರಮುಖವಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು, ಆರೋಗ್ಯ ಸಿಬ್ಬಂದಿಯ ಕೆಲಸ ಕಾರ್ಯಗಳು ಹಾಗೂ ನೈಟ್ ಕರ್ಫ್ಯೂ ಸಮಯದಲ್ಲಿ ಆಸ್ಪತ್ರೆಯ ಸಿದ್ಧತೆ, ಕೋವಿಡ್ ಟೆಸ್ಟಿಂಗ್, ಔಷಧದ ದಾಸ್ತಾನು ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಟೌನ್​ಹಾಲ್​ಗೆ ತೆರಳಿ ಫ್ರಂಟ್​ಲೈನ್ ತಪಾಸಣೆ ನಡೆಸಿ, ಸಿಬ್ಬಂದಿಯನ್ನು ಹುರಿದುಂಬಿಸಿ ಫೋಟೋಗೆ ಫೋಸ್ ಕೊಟ್ಟರು.

ಒಟ್ಟಿನಲ್ಲಿ ನೈಟ್ ಕರ್ಫ್ಯೂ ನಿನ್ನೆಯಿಂದ ಏಪ್ರಿಲ್ 20ರ ತನಕ ಜಾರಿಯಲ್ಲಿದ್ದು, ಇಷ್ಟಾಗಿಯೂ ಕೊರೊನಾ ನಿಯಂತ್ರಣಕ್ಕೆ ಸಿಗದಿದ್ದರೆ ಹಗಲು ಕೂಡ ಕರ್ಫ್ಯೂ ಜಾರಿಗೊಳಿಸಲು ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಓದಿ: ಮುದಗಲ್​ನಲ್ಲಿ ಬಿಎಸ್​ವೈ ಮಠಗಳಿಗೆ ಭೇಟಿ: ಆಲಂ ದರ್ಗಾದತ್ತ ಸುಳಿಯದ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.