ETV Bharat / city

ನೈಟ್‌ ಕರ್ಫ್ಯೂ ಎಫೆಕ್ಟ್‌ ; ಜನ ಸಂಚಾರವಿಲ್ಲದೆ ಸ್ತಬ್ಧವಾದ ಎಂ.ಜಿ.ರೋಡ್

author img

By

Published : Dec 31, 2021, 10:19 PM IST

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೈಟ್‌ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ 10 ಗಂಟೆಯೊಳಗೆ ಜನ ಮನೆ ಸೇರಿಕೊಂಡಿದ್ದಾರೆ. ಪೊಲೀಸರು ಚರ್ಚ್ ಸ್ಟ್ರೀಟ್, ಬಿಗ್ರೇಡ್ ರೋಡ್‌ಗಳ‌ಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದಾರೆ. ಸದಾ ಗಿಜುಗುಡುತ್ತಿದ್ದ ಎಂಜಿ ರೋಡ್‌ ಜನರಿಲ್ಲದೆ ಬಿಕೋ ಎನ್ನುತ್ತಿದೆ..

Night curfew effect; MG Road Quiet without traffic
ನೈಟ್‌ ಕರ್ಫ್ಯೂ ಎಫೆಕ್ಟ್‌; ಜನ ಸಂಚಾರವಿಲ್ಲದೆ ಸ್ತಬ್ಧವಾದ ಎಂ.ಜಿ.ರೋಡ್

ಬೆಂಗಳೂರು : ಸದಾ‌ ಗಿಜುಗುಡುತ್ತಿದ್ದ ಎಂಜಿ ರೋಡ್ ಹಾಗೂ ಬಿಗ್ರೇಡ್ ರೋಡ್ ಸಂಪೂರ್ಣ ಸ್ತಬ್ಧವಾಗಿದೆ. ನೈಟ್ ಕರ್ಫ್ಯೂ ಜಾರಿಯಿಂದಾಗಿ ನಗರದೆಲ್ಲೆಡೆ ಬ್ಯಾರಿಕೇಡ್ ಹಾಕಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಜನರ ಓಡಾಟ ವಿರಳವಾಗಿದೆ.

ರಾತ್ರಿ 10ಗಂಟೆಯವರೆಗೂ ಓಡಾಟಕ್ಕೆ ಅವಕಾಶವಿದ್ದರೂ 9ಗಂಟೆಗೆ ಪೊಲೀಸರು ಚರ್ಚ್ ಸ್ಟ್ರೀಟ್, ಬಿಗ್ರೇಡ್ ರೋಡ್‌ಗಳ‌ಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದಾರೆ. ‌ಸ್ಥಳದಲ್ಲಿರುವ ಅಂಗಡಿ-ಮುಂಗಟ್ಟುಗಳು 9 ಗಂಟೆಗೆ ಬೀಗ ಹಾಕುವ ದೃಶ್ಯ ಸಾಮಾನ್ಯವಾಗಿತ್ತು.

ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪೊಲೀಸರು, ಗಲ್ಲಿ ಗಲ್ಲಿಯಲ್ಲಿಯೂ ಭದ್ರತೆ ಹೆಚ್ಚಿಸಿದ್ದರಿಂದ ಅಹಿತಕರ ಘಟನೆಗೆ ಸಾಕ್ಷಿಯಾಗದಂತೆ ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.

ಇದನ್ನೂ ಓದಿ: ನಿಷೇಧಾಜ್ಞೆ ನಡುವೆಯೂ ಎಂಜಿ ರಸ್ತೆಯಲ್ಲಿ ಗರಿಗೆದರುತ್ತಿದೆ ಹೊಸ ವರ್ಷಾಚರಣೆ ಸಂಭ್ರಮ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.