ETV Bharat / city

ನಮ್ಮ ಮೆಟ್ರೋ ಕಾಮಗಾರಿಗೆ ನೈಸ್‌ ಕಂಪನಿ ತಕರಾರು.. ಸಮಸ್ಯೆ ಇತ್ಯರ್ಥಕ್ಕೆ ಸಿಎಂ ಸೂಚನೆ!

author img

By

Published : Dec 16, 2019, 9:48 PM IST

ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಅವರಿಂದಾಗಿ ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾಗುವುದು ಬೇಡ. ಈ ವಿವಾದ ಸಂಬಂಧ ಹಣವನ್ನು ನ್ಯಾಯಾಲಯಕ್ಕೆ ಡೆಪಾಸಿಟ್ ಮಾಡಿ ಆದಷ್ಟು ಬೇಗ ಕೆಲಸ ಮುಗಿಸಿ ಎಂದು ಮೆಟ್ರೋ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದರು.

Nice company disputes land: CM warning
ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಗೆ ನೈಸ್ ಕಂಪನಿ ಭೂಮಿ ನೀಡಲು ತಕರಾರು ಎದ್ದಿರುವ ಸಂಬಂಧ ಮೆಟ್ರೋ ನಿಗಮದ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ ಎಸ್​ಯಡಿಯೂರಪ್ಪ ಸಭೆ ನಡೆಸಿದರು.

ಮೈಸೂರು ರಸ್ತೆ, ಕನಕಪುರ ರಸ್ತೆಯ ಕೆಲ ಭಾಗಗಳಲ್ಲಿ ಮೆಟ್ರೋಗೆ ಭೂಮಿ ನೀಡಲು ನೈಸ್ ಕಂಪನಿ ತಕರಾರು ತೆಗೆದಿದೆ. ಈ ಬಗ್ಗೆ ಬಿ ಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದ ಮೆಟ್ರೋ ಅಧಿಕಾರಿಗಳು, ಇದಕ್ಕೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಅವರಿಂದಾಗಿ ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾಗುವುದು ಬೇಡ. ಈ ವಿವಾದ ಸಂಬಂಧ ಹಣವನ್ನು ನ್ಯಾಯಾಲಯಕ್ಕೆ ಡೆಪಾಸಿಟ್ ಮಾಡಿ ಆದಷ್ಟು ಬೇಗ ಕೆಲಸ ಮುಗಿಸಿ ಎಂದು ಮೆಟ್ರೋ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದರು.

ಹೊಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ಮೆಟ್ರೋಗೆ ನಾಲ್ಕು ಎಕರೆ ಜಾಗ ಬೇಕಿದೆ. ಮೂಲ‌ ಮಾಲೀಕರಿಂದ ಕೆಲ ಜಾಗ ನೈಸ್ ಕಂಪನಿಗೆ ಹೋಗಿದೆ. ಈಗ ಆ ಕಂಪನಿ ಕಡೆಯಿಂದ ಮೆಟ್ರೋಗೆ ಭೂಮಿ ಬರಬೇಕಿದೆ. ಕೆಲವು ಕಡೆ ಸರ್ಕಾರಿ ಜಾಗ ಲೀಸ್​ಗೆ ಕೊಡಲಾಗಿದೆ. ಹಾಗಾಗಿ ಸ್ವಲ್ಪ ವಿಳಂಬ ಆಗಿದೆ. ಖೇಣಿ ಅವರು ಕೋರ್ಟ್​​ನಲ್ಲಿ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆದಿಲ್ಲ. ತುಮಕೂರು ರಸ್ತೆ ಬಳಿ ನೈಸ್​​ ಕಂಪನಿಯವರು ಜಾಗ ಕೊಡಬೇಕು ಎಂದು ಸಿಎಂ ಬಿಎಸ್​​ವೈಗೆ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಮಾಹಿತಿ ನೀಡಿದರು.

ವಿವರವಾದ ಮಾಹಿತಿ ಪಡೆದುಕೊಂಡ ಸಿಎಂ, ನೈಸ್​​ಗೆ ಕೊಡಬೇಕಾಗಿರೋ ಹಣವನ್ನು ಕೋರ್ಟ್​ನಲ್ಲಿ ಪಾವತಿಸಿ ಕೆಲಸ ಆರಂಭಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಇದ್ದರು.

Intro:

ಬೆಂಗಳೂರು: ನೈಸ್ ಮುಖ್ಯಸ್ಥ ಅಶೋಕ್ ಖೇಣಿಯಿಂದ ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾಗುವುದು ಬೇಡ ವಿವಾದ ಸಂಬಂಧ ಹಣವನ್ನು ನ್ಯಾಯಾಲಯಕ್ಕೆ ಡೆಪಾಸಿಟ್ ಮಾಡಿ
ಆದಷ್ಟು ಬೇಗ ಕೆಲಸ ಮುಗಿಸಿ ಎಂದು ಮೆಟ್ರೋ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಖಡಕ್ ಸೂಚನೆ ನೀಡಿದ್ದಾರೆ.

ಮೆಟ್ರೊ ಕಾಮಗಾರಿಗೆ ನೈಸ್ ಸಂಸ್ಥೆ ಭೂಮಿ ನೀಡಲು ತಕರಾರು ಸಂಬಂಧ ಮೆಟ್ರೋ ನಿಗಮದ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಸೆಲ್ವಕುಮಾರ್ ಪಾಲ್ಗೊಂಡಿದ್ದರು.

ಮೈಸೂರು ರೋಡ್, ಕನಕಪುರ ರಸ್ತೆಯ ಕೆಲವು ಭಾಗಗಳಲ್ಲಿ ಮೆಟ್ರೊಗೆ ಭೂಮಿ ನೀಡಲು ನೈಸ್ ತಕರಾರು ತೆಗೆದಿರುವ ಬಗ್ಗೆ ಸಿಎಂ ಗಮನಕ್ಕೆ ತಂದ ಮೆಟ್ರೊ ಅಧಿಕಾರಿಗಳು
ನೈಸ್ ಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸ್ಪಂಧಿಸಬೇಕು ಎಂದು ಮನವಿ ಮಾಡಿದರು.

ಹೊಸೂರು ರೋಡ್ ತುಮಕೂರು ರೋಡ್ ಮೆಟ್ರೋಗೆ ಒಟ್ಟು 4 ಎಕರೆ ಜಾಗ ಬೇಕು. ಮೂಲ‌ ಮಾಲೀಕರಿಂದ ಕೆಲ ಜಾಗ ನೈಸ್ ಕಂಪನಿಗೆ ಹೋಗಿದೆ. ಈಗ ನೈಸ್ ಕಡೆಯಿಂದ ಮೆಟ್ರೋಗೆ ಭೂಮಿ ಬರಬೇಕಿದೆ ಇನ್ನು ಕೆಲವು ಕಡೆ ಸರ್ಕಾರಿ ಜಾಗ ಲೀಸ್ ಗೆ ಕೊಡಲಾಗಿದೆ. ಹಾಗಾಗಿ ಸ್ವಲ್ಪ ವಿಳಂಬ ಆಗಿದೆ ಖೇಣಿ ಅವರು ಇನ್ನು ಕೋರ್ಟ್ ನಿಂದ ಕೇಸ್ ವಾಪಸ್ ತೆಗೆದಿಲ್ಲ ತುಮಕೂರು ರೋಡ್ ಬಳಿ ನೈಸ್ ನವರು ಜಾಗ ಕೊಡಬೇಕು ಎಂದು ಸಿಎಂ ಬಿಎಸ್ವೈಗೆ ಮೆಟ್ರೋ ಎಂಡಿ ಅಜಯ್ ಸೇಠ್ ಮಾಹಿತಿ ನೀಡಿದರು.

ವಿವರವಾದ ಮಾಹಿತಿ ಪಡೆದುಕೊಂಡ ಸಿಎಂ ನೈಸ್ ಗೆ ಕೊಡಬೇಕಾಗಿರೋ ಹಣವನ್ನು ಕೋರ್ಟ್ ನಲ್ಲಿ ಡೆಪಾಸಿಟ್‌ ಮಾಡಿ‌ ಕೆಲಸ ಶುರು ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.