ಬೆಂಗಳೂರು: ನಿಷೇಧಿತ ಐಸಿಸ್ ಸಂಘಟನೆ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳೊಂದಿಗೆ ನಂಟು ಬೆಳೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ತಂಡ (ಎಎನ್ಐ) ಬಂಧಿಸಿದೆ. ಮೊಹಮ್ಮದ್ ತಾಕಿರ್(33) ಬಂಧಿತ ಆರೋಪಿಯಾಗಿದ್ದಾನೆ.
ಬೆಂಗಳೂರು ಮೂಲದ ತಾಕಿರ್ ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದನಂತೆ. ಐಸಿಸ್ ಸೇರಿದಂತೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಿಗೆ ಸೇರಲು ಭಾರತೀಯ ಯುವಕರನ್ನ ಪ್ರಚೋದಿಸುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. 2013ರಲ್ಲಿ ತನ್ನ ಸಹಚರರೊಂದಿಗೆ ತಾಕಿರ್ ಸಿರಿಯಾಗೆ ಭೇಟಿ ನೀಡಿದ್ದನಂತೆ. ಭಾರತೀಯ ಮುಸ್ಲೀಂಮರಿಂದ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಿದ್ದ ಎಂದು ಹೇಳಲಾಗಿದೆ. ನಿಷೇಧಿತ ಸಂಘಟನೆಗಳಾದ ಐಸಿಸ್, ಐಎಸ್ ಐಎಲ್ ಹಾಗೂ ದಹೇಶ್ ಜೊತೆ ನಿರಂತರ ಸಂಪರ್ಕ ಹೊಂದಿರುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿರಿ: ಮೂರು ದಿನದ ಹಿಂದೆ ರಿಲೀಸ್ ಆಗಿದ್ದ ರೌಡಿಶೀಟರ್ನ ಬರ್ಬರ ಹತ್ಯೆ... ಬೆಚ್ಚಿಬಿದ್ದ ಬೆಂಗಳೂರು
ಇದೇ ಏಪ್ರಿಲ್ನಲ್ಲಿ ಈತನ ಇಬ್ಬರು ಸಹಚರರಾದ ಅಹಮದ್ ಅಬ್ದುಲ್ ಖಾದರ್ ಹಾಗೂ ಇರ್ಫಾನ್ ನಾಸಿರ್ ಎಂಬುವರನ್ನು ಎನ್ಐಎ ಬಂಧಿಸಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣದ ತನಿಖೆ ವೇಳೆ ಮೊಹಮ್ಮದ್ ತಾಕಿರ್ ಲಿಂಕ್ ಹೊಂದಿರುವುದು ಪತ್ತೆಯಾಗಿತ್ತು. ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಷೇಧಿತ ಸಂಘಟನೆಗಳಿಗೆ ಹಣದ ವ್ಯವಸ್ಥೆ ಮಾಡಿಸುತ್ತಿದ್ದನೆಂಬ ವಿಚಾರ ಬೆಳಕಿಗೆ ಬಂದಿದೆ. ದೇಶದ ಯುವಕರನ್ನು ಪ್ರಚೋದಿಸಿ, ಕ್ವಾರನ್ ಹೆಸರಿನ ಗ್ರೂಪ್ಗೆ ನೇಮಕ ಮಾಡಿಸುತ್ತಿದ್ದನಂತೆ.ಬಳಿಕ ಅವರನ್ನು ಅಕ್ರಮವಾಗಿ ಸಿರಿಯಾಗೆ ಕಳುಹಿಸಿ, ISIS ಸೇರಿಸಲು ಪ್ರಚೋದನೆ ನೀಡುತ್ತಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.