ETV Bharat / city

ಪ್ರಧಾನಿಯವರ ನಿರ್ದೇಶನ ಆಧರಿಸಿ ಮುಂದಿನ ಕ್ರಮ: ಸಿಎಂ ಯಡಿಯೂರಪ್ಪ - 119th Birthday of K.C.Reddy

ಲಾಕ್​ಡೌನ್​ ಜಾರಿಗೊಳಿಸುವ ಇಲ್ಲವೇ ಇರುವ ನಿಯಮಾವಳಿಗಳನ್ನೇ ಬಿಗಿಗೊಳಿಸುವ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಂದು ಪ್ರಧಾನಿ ಸುಪ್ರೀಂಕೋರ್ಟ್ ಸೂಚನೆ ವಿಚಾರವಾಗಿ ಕ್ಯಾಬಿನೆಟ್ ಸಭೆ ನಡೆಸುತ್ತಿದ್ದಾರೆ. ಸಭೆಯ ಬಳಿಕ ರಾಜ್ಯದಲ್ಲಿ ಏನು ಕ್ರಮ ಕೈಗೊಳ್ಳಬೇಕು ಅಂತ ನಿರ್ಧರಿಸುತ್ತೇವೆ ಎಂದು ಸಿಎಂ ಬಿಎಸ್​ವೈ ಹೇಳಿದರು.

CM Yeddyurappa
ಪ್ರಧಾನಿ ನಿರ್ದೇಶನ ಆಧರಿಸಿ ಮುಂದಿನ ಕ್ರಮ: ಸಿಎಂ ಯಡಿಯೂರಪ್ಪ
author img

By

Published : May 5, 2021, 11:39 AM IST

ಬೆಂಗಳೂರು: ಪ್ರಧಾನಮಂತ್ರಿಗಳ ನಿರ್ದೇಶನ ಆಧರಿಸಿ ರಾಜ್ಯದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿಯವರ 119ನೇ ಜನ್ಮದಿನ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಳಿಕ ಅವರು ಮಾತನಾಡಿದರು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದೆ. ಲಾಕ್​ಡೌನ್​ ಜಾರಿಗೊಳಿಸುವ ಇಲ್ಲವೇ ಇರುವ ನಿಯಮಾವಳಿಗಳನ್ನೇ ಬಿಗಿಗೊಳಿಸುವ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ ಕ್ರಮ ಕೈಗೊಳ್ಳುವ ಸಂಬಂಧ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ. ಇಂದು ಪ್ರಧಾನಿ ಸುಪ್ರೀಂಕೋರ್ಟ್ ಸೂಚನೆ ವಿಚಾರವಾಗಿ ಕ್ಯಾಬಿನೆಟ್ ಸಭೆ ನಡೆಸುತ್ತಿದ್ದಾರೆ. ಸಭೆಯ ಬಳಿಕ ರಾಜ್ಯದಲ್ಲಿ ಏನು ಕ್ರಮ ಕೈಗೊಳ್ಳಬೇಕು ಅಂತ ನಿರ್ಧರಿಸುತ್ತೇವೆ ಎಂದರು.

ಕೆ.ಸಿ.ರೆಡ್ಡಿ ಬಣ್ಣನೆ:

ನಮ್ಮ ರಾಜ್ಯದ ಮೊದಲ ಸಿಎಂ ಕ್ಯಾಸಂಬಳ್ಳಿಯ ಬಹುಮುಖ ಪ್ರತಿಭೆ ಕೆ.ಸಿ.ರೆಡ್ಡಿ. ದೇಶದ ಸ್ವಾತಂತ್ರ್ಯಕ್ಕಾಗಿ ಮೂರು ಬಾರಿ ಸೆರೆವಾಸ ಅನುಭವಿಸಿದರು. ಶಾಸಕ, ಎಂಪಿ, ಸಿಎಂ ಸೇರಿದಂತೆ ಹಲವು ಜವಾಬ್ದಾರಿ ನಿಭಾಯಿಸಿದ್ದಾರೆ. ನೇರ ವ್ಯಕ್ತಿತ್ವದ ವ್ಯಕ್ತಿ. ಅವರನ್ನ ಸ್ಮರಿಸಿಕೊಳ್ಳಬೇಕು. ವಿಧಾನಸೌಧ ಕಟ್ಟಡದ ನಿರ್ಮಾಣದಲ್ಲಿ ಅವರ ಪಾತ್ರವೂ ಇದೆ ಎಂದರು.

ಸಚಿವರು ಜಿಲ್ಲೆಗೆ ತೆರಳುತ್ತಿದ್ದಾರೆ:
ಎಲ್ಲಾ ಸಚಿವರು ಅವರ ಉಸ್ತುವಾರಿ ಜಿಲ್ಲೆಗಳಿಗೆ ಹೋಗ್ತಿದ್ದಾರೆ. ಜಿಲ್ಲೆಯಲ್ಲಿದ್ದುಕೊಂಡು ಕೆಲಸ ಮಾಡಲು ಸೂಚನೆ ನೀಡಿದ್ದೇನೆ. ಅದೇ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ಓದಿ: ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ: 17 ಮಂದಿ ಗುತ್ತಿಗೆ ಸಿಬ್ಬಂದಿ ಅಮಾನತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.