ETV Bharat / city

'ಸಂಚಿಗೊಂದು'.. ಹಸಿದವರ ಹೊಟ್ಟೆ ತುಂಬಿಸಲು ಮುಂದಾದ ಹೋಟೆಲ್ ಮಾಲೀಕರು

ಈಗಾಗಲೇ ಬೆಂಗಳೂರಿನ 100 ಹೋಟೆಲುಗಳು ಇದಕ್ಕೆ ಕೈಜೋಡಿಸಿವೆ. ಇದರಿಂದಾಗಿ ಹೋಟೆಲುಗಳಲ್ಲೂ ಇನ್ಮುಂದೆ ಊಟ ತಿಂಡಿ ದಾನ ಮಾಡಬಹುದು. ಆರಂಭದಲ್ಲಿ ಭಾಗವಹಿಸುವ ಪ್ರತಿ ಹೋಟೆಲಿನಲ್ಲಿ ಎರಡು ದರಗಳ ಟೋಕನ್ ಇರಿಸಲು ನಿರ್ಧಾರ ಮಾಡಲಾಗಿದೆ..

new-sanchighondhu-program-inauguration-in-benglure
'ಸಂಚಿಗೊಂದು' ಕಾರ್ಯಕ್ರಮದ ಮೂಲಕ ಹಸಿದವರ ಹೊಟ್ಟೆ ತುಂಬಿಸಲು ಮುಂದಾದ ಹೋಟೆಲ್ ಮಾಲೀಕರು
author img

By

Published : Oct 2, 2020, 4:56 PM IST

ಬೆಂಗಳೂರು : ಒಂದು ಹೋಟೆಲ್​​ಗೆ ತಿಂಡಿ-ಊಟ ಮಾಡೋಕೆ ಹೋಗ್ತಿರಾ.. ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ತಿಂಡಿ ಕೊಳ್ಳುವ ಶಕ್ತಿ ಇದೆ. ಅದನ್ನು ಯಾರಿಗಾದ್ರೂ ದಾನ ಮಾಡ್ಬೇಕು ಅನ್ನೋ ಮನಸ್ಸೂ ಇದೆ. ಅದೇ ರೀತಿ ಹಸಿದ ಕೆಲವರಿಗೆ ಹಣ ಕೊಟ್ಟು ಊಟ ತಿಂಡಿ ಕೊಳ್ಳುವ ಶಕ್ತಿ ಇರೋದಿಲ್ಲ.

ಯಾರಾದರೂ ಒಂದು ಹೊತ್ತಿನ ಊಟ ದಾನ ಮಾಡ್ತಾರಾ ಅಂತಾ ಕಾಯುತ್ತಿರುವವರೂ ಇರ್ತಾರೆ. ಈ ಎರಡೂ ವರ್ಗಗಳ ನಡುವೆ ಸೇತುವೆಯಾಗಿ ಬೆಂಗಳೂರಿನ ಹೋಟೆಲುಗಳು ಕೆಲಸ ಮಾಡಲು ಸಜ್ಜಾಗಿವೆ. ಅದಕ್ಕೆ ಅವರಿಟ್ಟಿರುವ ಹೆಸರು 'ಸಂಚಿಗೊಂದು'..

'ಸಂಚಿಗೊಂದು' ಕಾರ್ಯಕ್ರಮದ ಮೂಲಕ ಹಸಿದವರ ಹೊಟ್ಟೆ ತುಂಬಿಸಲು ಮುಂದಾದ ಹೋಟೆಲ್ ಮಾಲೀಕರು

ಸಂಚಿ ಅಂದರೆ ಚೀಲ, ತನಗೆ ಊಟ ಕೊಳ್ಳುವ ವ್ಯಕ್ತಿ ಮತ್ತೊಂದನ್ನು ಅಲ್ಲಿರುವ ಚೀಲ ಅಥವಾ ಡಬ್ಬಿಯ ಹೆಸರಲ್ಲಿ ಕೊಳ್ಳುವ ವ್ಯವಸ್ಥೆ. ಪಾಶ್ಚಾತ್ಯ ದೇಶಗಳಲ್ಲಿ ಇದನ್ನು ಒನ್ ಫಾರ್ ದ ವಾಲ್ ಎಂದು ಕರೆಯುತ್ತಾರೆ. ಹೋಟೆಲಿಗೆ ಹೋಗುವ ವ್ಯಕ್ತಿ ಒಂದು ಹೆಚ್ಚುವರಿ ಊಟದ ಹಣ ನೀಡಿ ಒಂದು ಟೋಕನ್ ಪಡೆಯುತ್ತಾರೆ. ಆ ಟೋಕನ್‌ನ ಅಲ್ಲೇ ಇಟ್ಟಿರುವ ಡಬ್ಬಿಗೆ ಹಾಕಿ ಬಂದುಬಿಡ್ತಾರೆ.

ನಂತರ ಇನ್ಯಾರೋ ಹಣವಿಲ್ಲದ ಹಸಿದ ವ್ಯಕ್ತಿ ತನಗೆ ಸಂಚಿನಿಂದ ಒಂದು ಊಟ ಕೊಡಿ ಎಂದು ಕೇಳಬಹುದು. ಆಗ ತನಗೆ ಪರಿಚಯವೇ ಇಲ್ಲದವರು ನೀಡಿದ ಹಣದಿಂದ ಆ ಊಟ ಹಸಿದವನ ಪಾಲಾಗಲಿದೆ. ಈ ಅಭಿಯಾನಕ್ಕೆ ಇಂದು ರಾಜ್ಯ ಚಿತ್ರಕಲಾ ಪರಿಷತ್ ಕಲಾ ಗ್ಯಾಲರಿಯಲ್ಲಿ ಚಾಲನೆ ನೀಡಲಾಯಿತು‌. ಕಾರ್ಯಕ್ರಮದಲ್ಲಿ ಪರಿಷತ್ ಅಧ್ಯಕ್ಷ ಶಂಕರ್, ಚಿಂತಕ ಗುರುರಾಜ ಕರ್ಜಗಿ ಸೇರಿ ಮೊದಲಾದವರು ಉಪಸ್ಥಿತರಿದ್ದರು.

ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಮಾತನಾಡಿ, ಈಗಾಗಲೇ ಬೆಂಗಳೂರಿನ 100 ಹೋಟೆಲುಗಳು ಇದಕ್ಕೆ ಕೈಜೋಡಿಸಿವೆ. ಇದರಿಂದಾಗಿ ಹೋಟೆಲುಗಳಲ್ಲೂ ಇನ್ಮುಂದೆ ಊಟ ತಿಂಡಿ ದಾನ ಮಾಡಬಹುದು. ಆರಂಭದಲ್ಲಿ ಭಾಗವಹಿಸುವ ಪ್ರತಿ ಹೋಟೆಲಿನಲ್ಲಿ ಎರಡು ದರಗಳ ಟೋಕನ್ ಇರಿಸಲು ನಿರ್ಧಾರ ಮಾಡಲಾಗಿದೆ.

ನಿರ್ಗತಿಕರು, ಬಡವರು, ಬಡ ವಿದ್ಯಾರ್ಥಿಗಳು, ಭಿಕ್ಷುಕರು, ದುಡಿಯಲು ಅಶಕ್ತರಾದವರು, ಅಂಗವಿಕಲರಿಗೆ ಸಂಚಿಗೊಂದು ಅನುಕೂಲವಾಗಲಿದೆ.‌ ಬೆಂಗಳೂರಿನ ವಿದ್ಯಾರ್ಥಿ ಭವನ, ಎಸ್ ಎಲ್ ವಿ, ಹೋಟೆಲ್ ದ್ವಾರಕಾ, ಹಳ್ಳಿಮನೆ, ನಂದನ ಪ್ಯಾಲೇಸ್ ಮುಂತಾದ ನಾನಾ ಹೋಟೆಲುಗಳು ಇದರಲ್ಲಿ ಭಾಗಿಯಾಗಿವೆ ಎಂದರು.

ಮುಂದಿನ ದಿನಗಳಲ್ಲಿ ಇಷ್ಟವಿದ್ದವರು ಹುಟ್ಟುಹಬ್ಬ, ಸ್ಮರಣೆ ಮುಂತಾದ ಕಾರ್ಯಕ್ರಮಗಳಿಗೂ 'ಸಂಚಿಗೊಂದು' ಬಳಸಬಹುದು. ಇದಕ್ಕೆ ಬರುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಸ್ವಯಂಪ್ರೇರಿತರಾಗಿ ಹೆಚ್ಚಿನ ಹೋಟೆಲುಗಳು ಭಾಗಿಯಾಗಲಿ ಎನ್ನುವ ಉದ್ದೇಶವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.