ETV Bharat / city

ಯದ್ವಾತದ್ವಾ ಮಳೆ ಬಿದ್ದು ನೆರೆಗೆ ಯಕ್ಕುಟ್ಹೋದ ಹೆದ್ದಾರಿಗಳು; 2 ವರ್ಷದಲ್ಲಿ ಇಷ್ಟೊಂದ್__ಕೋಟಿ ನಷ್ಟ!

ಬಿಟ್ಟೂ ಬಿಡದೇ ಮಳೆ ಸುರಿದ ಕಾರಣ ರಾಷ್ಟ್ರೀಯ ಹೆದ್ದಾರಿಗಳು ಕಿತ್ತು ಹೋಗಿವೆ. ಅವೈಜ್ಞಾನಿಕ ರಸ್ತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೆದ್ದಾರಿಗಳು ಜೀವಕಂಟಕವಾಗುತ್ತಿವೆ..

national-highways-damages
ಹೆದ್ದಾರಿ
author img

By

Published : Sep 9, 2020, 8:29 PM IST

ಬೆಂಗಳೂರು : ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟಕ್ಕೆ ಅತಿ ಹೆಚ್ಚು ಹಾನಿಗೊಳಗಾಗಿರುವುದು ರಾಜ್ಯದಲ್ಲಿನ ರಸ್ತೆಗಳು. ಪ್ರವಾಹದ ರಭಸಕ್ಕೆ ರಾಜ್ಯದಲ್ಲಿ ಹಾದು ಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಕೊಚ್ಚಿ ಹೋಗಿವೆ.

ರಾಷ್ಟ್ರೀಯ ಹೆದ್ದಾರಿ ರಾಜ್ಯದ ಪ್ರಮುಖ ನಗರಗಳು ಮತ್ತು ಇತರ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿ. ರಾಷ್ಟ್ರೀಯ ಹೆದ್ದಾರಿ ಆರ್ಥಿಕ ಚಟುವಟಿಕೆ, ಜನ ಸಂಚಾರಕ್ಕಾಗಿನ ಸಂಪರ್ಕ ಸೇತುವಾಗಿದೆ. ಸುಮಾರು 7,600 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ.

ಪ್ರಮುಖ ನಗರಗಳು, ಇತರ ರಾಜ್ಯದ ರಾಜಧಾನಿಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಇತ್ತೀಚೆಗೆ ರಾಜ್ಯದಲ್ಲಾಗುತ್ತಿರುವ ಮಳೆಯ ಆರ್ಭಟಕ್ಕೆ ನಲುಗಿವೆ. ಮಳೆಯಿಂದ ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಗಳು ತೀವ್ರ ಪ್ರಮಾಣದಲ್ಲಿ ಹಾನಿಗೀಡಾಗುತ್ತಿವೆ.

ನೆರೆಗೆ ಯಕ್ಕುಟ್ಹೋದ ಹೆದ್ದಾರಿಗಳು

ಮಳೆಗೆ ಹಾನಿಗೀಡಾದ ರಾಷ್ಟ್ರೀಯ ಹೆದ್ದಾರಿ : ಈ ಬಾರಿ ಮಳೆಗೆ ಒಟ್ಟು 22.38 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳು ಹಾನಿಗೀಡಾಗಿವೆ. ಅವುಗಳ ದುರಸ್ಥಿ ಕಾರ್ಯ ಆದ್ಯತೆ ಮೇರೆಗೆ ಮಾಡಬೇಕಾಗಿದೆ. ಇದಕ್ಕಾಗಿ ಸುಮಾರು 27.07 ಕೋಟಿ ರೂ. ವೆಚ್ಚ ತಗುಲಲಿದೆ. ಇದರ ತಕ್ಷಣ ದುರಸ್ಥಿಗಾಗಿ ಸುಮಾರು 12.90 ಕೋಟಿ ರೂ. ವೆಚ್ಚವಾಗಲಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಸುಮಾರು 14 ಸೇತುವೆ ಪ್ರವಾಹಕ್ಕೆ ಹಾನಿಗೀಡಾಗಿವೆ.

ಜಿಲ್ಲೆಮಳೆಗೆ ಹಾಳಾಗಿರುವ ರಾ.ಹೆದ್ದಾರಿ (ಕಿ.ಮೀ)
ಕೊಡಗು0.5
ಶಿವಮೊಗ್ಗ1.65
ಉಡುಪಿ3.65
ಚಿಕ್ಕಮಗಳೂರು12.6
ಉತ್ತರ ಕನ್ನಡ2.225
ಹಾಸನ1.2
ಗದಗ1

ಉಳಿದಂತೆ ಮಳೆಯಿಂದ ಬೆಂಗಳೂರು-ಮೈಸೂರು, ಬೆಂಗಳೂರು-ಹೊಸಕೋಟೆ, ಬೆಂಗಳೂರು-ಮಂಗಳೂರು, ಬೆಂಗಳೂರು-ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಡಾಂಬರ್ ಕಿತ್ತು ಹೋಗಿದೆ. ಅಲ್ಲಲ್ಲಿ ರಸ್ತೆ ಗುಂಡಿ ಬಿದ್ದಿರುವುದರಿಂದ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.

ಕಳೆದ ಬಾರಿಯ ಮಳೆಗೆ ಭಾರೀ ಹಾನಿ : ಕಳೆದ ಬಾರಿ ಸುರಿದ ಭೀಕರ ಮಳೆ ರಾಜ್ಯದ ರಾಷ್ಟ್ರೀಯ ಹೆದ್ದಾರಿಯನ್ನು ತೀವ್ರ ಪ್ರಮಾಣದಲ್ಲಿ ಹಾನಿಗೊಳಗಾಗಿಸಿತ್ತು. ಸುಮಾರು 277.28 ಕಿ.ಮೀ ಉದ್ದದ ರಸ್ತೆಗಳು ಹಾನಿಗೊಂಡಿದ್ದವು. ಕಳೆದ ಬಾರಿಯ ವರುಣಾರ್ಭಟಕ್ಕೆ ಮಂಗಳೂರಿನಲ್ಲಿ 197.63 ಕಿ.ಮೀ., ಹಾಸನದಲ್ಲಿ 48.20 ಕಿ.ಮೀ‌, ಶಿವಮೊಗ್ಗದಲ್ಲಿ 30.15 ಕಿ.ಮೀ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಹಾನಿಗೀಡಾಗಿದ್ದವು. ಸುಮಾರು 15.11 ಕೋಟಿ ರೂಪಾಯಿ‌ನಲ್ಲಿ ಹಾನಿಗೀಡಾದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ಥಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.