ಬೆಂಗಳೂರು: ನಾರಾಯಣ ನೇತ್ರಾಲಯ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅತ್ಯಾಧುನಿಕ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಿಸಲಿದೆ. ರೆಟಿನಲ್ ಡಿಸ್ಟ್ರೊಫೀಸ್ ಮತ್ತು ಬೆಳವಣಿಗೆಯ ವೈಪರೀತ್ಯಗಳಂತಹ ಚಿಕಿತ್ಸೆ ನೀಡಲಾಗದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಅತ್ಯಾಧುನಿಕ ಪುನರ್ವಸತಿ ಕೇಂದ್ರದಿಂದ ಅನುಕೂಲವಾಗಲಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ, ದೇಶದಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಮಕ್ಕಳು ನೇತ್ರ ರೋಗಗಳಿಂದ ಬಳಲುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಭಾಗಶಃ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಕಾರ್ಟಿಕಲ್ ವಿಷನ್, ಇಂಪೇರ್‌ಮೆಂಟ್, ರೆಟಿನಲ್ ಡಿಸ್ಟ್ರೊಫೀಸ್ ಸಮಸ್ಯೆ ಈ ಮಕ್ಕಳನ್ನು ಬಾಧಿಸುತ್ತಿದೆ. ಈ ಮಕ್ಕಳಿಗೆ ದೃಷ್ಟಿ ಪುನರ್ವಸತಿ ಅಗತ್ಯವಿದೆ ಎಂದು ತಿಳಿಸಿದರು.