ಬೆಂಗಳೂರು: ಕೊರೊನಾ 3ನೇ ಅಲೆ ಭೀತಿಯ ನಡುವೆಯೇ ನಾಗರಪಂಚಮಿ ಹಬ್ಬದ ಸಂಭ್ರಮ ಜೋರಾಗೇ ಇತ್ತು. ಶ್ರಾವಣ ಮಾಸದ ಶುಕ್ಲಪಕ್ಷದ ಮೊದಲ ಹಬ್ಬವಾಗಿದ್ದು, ನಾಡಿನೆಲ್ಲೆಡೆ ಇಂದು ನಾಗರಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ನಗರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಭಕ್ತರು ನಾಗರ ವಿಗ್ರಹಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಹೂವು, ಹಣ್ಣು, ಕಾಯಿ ತಂದು ಭಕ್ತರು ಪೂಜೆ ಮಾಡಿ, ಹಾಲು, ತುಪ್ಪ ಮೊಸರಿನಿಂದ ಅಭಿಷೇಕ ಮಾಡಿದರು.
ಪ್ರತಿ ಬಾರಿ ಹಬ್ಬದ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಬಂದು ದೇವರ ದರ್ಶನ ಪಡೆಯುತ್ತಿದ್ದರು. ಆದ್ರೆ ಕೊರೊನಾ ಹಿನ್ನೆಲೆ ಹಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದ್ದು, ಕೆಲವು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಕೋವಿಡ್ ಭೀತಿಯಿಂದ ದೇವಸ್ಥಾನಗಳಿಗೆ ಬರಲು ಜನ ಕೂಡ ಹಿಂಜರಿಯುತ್ತಿದ್ದಾರೆ. ಹೀಗಾಗಿ ಭಕ್ತಾಧಿಗಳ ಸಂಖ್ಯೆ ಇಳಿಕೆಯಾಗಿದೆ.