ETV Bharat / city

ಸಂಸದ ನಳೀನ್ ಕುಮಾರ್ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಹೈಕೋರ್ಟ್​ ತಡೆಯಾಜ್ಞೆ

ತಮ್ಮ ವಿರುದ್ಧ ದಾಖಲಾಗಿರುವ ಎಫ್​​ಐಆರ್ ಹಾಗೂ ಚಾರ್ಜ್ ಶೀಟ್ ರದ್ದು ಕೋರಿ ಸಂಸದ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ದಾಖಲಾಗಿರುವ ಎಫ್ಐಆರ್ ಹಾಗೂ ಚಾರ್ಜ್ ಶೀರ್ಟ್​​ಗೆ ತಡೆ ನೀಡಿದೆ.

MP Controversial statement case: High Court granted interdict
author img

By

Published : Aug 19, 2019, 10:12 PM IST

Updated : Aug 19, 2019, 10:24 PM IST

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರೆನ್ನಲಾದ ಸಂಸದ ನಳಿನ್ ಕುಮಾರ್ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಚಾರ್ಜ್ ಶೀರ್ಟ್​​ಗೆ ಹೈಕೋರ್ಟ್ ತಡೆ ನೀಡಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್​​ಐಆರ್ ಹಾಗೂ ಚಾರ್ಜ್ ಶೀಟ್ ರದ್ದು ಕೋರಿ ನಳಿನ್ ಕುಮಾರ್ ಕಟೀಲ್ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆಯನ್ನು ಇಂದು ಹೈಕೋರ್ಟ್​​ನ ಏಕಸದಸ್ಯ ಪೀಠ ಕೈಗೆತ್ತಿಕೊಂಡಿತ್ತು.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅರುಣ್​ ಶ್ಯಾಮ್, ರಾಜಕೀಯ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಪ್ರಕರಣ ದಾಖಲಿಸುವಾಗ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ ಪ್ರಕರಣಕ್ಕೆ ತಡೆ ನೀಡಿ. ಆದೇಶ ಹೊರಡಿಸಿದೆ.

ಮಂಗಳೂರಿನಲ್ಲಿ ಕಾರ್ತಿಕ್ ಎಂಬುವರ ಕೊಲೆ ಪ್ರಕರಣದ ಆರೋಪಿಗಳನ್ನು ಹತ್ತು ದಿನದೊಳಗೆ ಬಂಧಿಸಬೇಕು. ಇಲ್ಲವಾದಲ್ಲಿ ಇಡೀ‌‌ ಜಿಲ್ಲೆಗೆ ಬೆಂಕಿ‌ಯಿಡುವುದಾಗಿ ಕೋಣಾಜೆ ಪೊಲೀಸ್ ಸರ್ಕಲ್ ಇನ್ಸ್​ಪೆಕ್ಟರ್ ವಿರುದ್ಧ ಆವೇಶಭರಿತ ಮಾತುಗಳ‌ನ್ನಾಡಿದ್ದರು ಎಂಬ ಆರೋಪ ಇದಾಗಿದೆ.

ಈ ಸಂಬಂಧ ಅದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನ್ಯಾಯಾಲಯ ಹಲವು ಬಾರಿ ಹಾಜರಾಗುವಂತೆ ಸಮನ್ಸ್ ಜಾರಿ ನೀಡಿದ್ದರೂ ನಳೀನ್‌ ಕುಮಾರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜನಪ್ರತಿನಿಧಿಗಳ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಜಾಮೀನು ರಹಿತ ಬಂಧನ ವಾರೆಂಟ್‍ ಹೊರಡಿಸಿದ್ದರು. ಇದೀಗ ಹೈಕೋರ್ಟ್ ಪ್ರಕರಣಕ್ಕೆ ತಡೆ ನೀಡಿದೆ.

Intro:ನಳೀನ್ ಕುಮಾರ್ ವಿವಾದಾತ್ಮಕ ಹೇಳಿಕೆ
ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವ ದಕ್ಷಿಣಾ ಕನ್ನಡ ಸಂಸದ ನಳಿನ್ ಕುಮಾರ್ ವಿವಾದಾತ್ಮಕ ಹೇಳಿಕೆಗೆ ದಾಖಲಾಗಿರುವ ಎಫ್ಐ ಆರ್ ಹಾಗೂ ಚಾರ್ಜ್ ಶೀಟ್ಗೆ ಹೈಕೋರ್ಟ್ ತಡೆ ನೀಡಿದೆ

ತಮ್ಮ ವಿರುದ್ದ ದಾಖಲಾಗಿರುವ ಎಫ್ ಐ ಆರ್ ಹಾಗೂ ಚಾರ್ಜ್ ಶೀಟ್ ರದ್ದು ಕೋರಿ ದಕ್ಷಿಣಾ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ರು. ಈ ಅರ್ಜಿ ವಿಚಾರ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಅರ್ಣ್ ಶ್ಯಾಮ್ ವಾದ ಮಂಡನೆ ಮಾಡಿ ರಾಜಕೀಯ ಉದ್ದೇಶದಿಂದ ಈರೀತಿ ಮಾಡಲಾಗಿದೆ. ಹಾಗೆ ಪ್ರಕರಣ ದಾಖಲಿಸುವಾಗ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ರು.

ವಾದ ಆಲಿಸಿದ ನ್ಯಾಯಪೀಠ ಪ್ರಕರಣಕ್ಕೆ ತಡೆ ಕೋರಿ ಆದೇಶ ಹೊರಡಿಸಿದೆ.

ಮಂಗಳೂರಿನಲ್ಲಿ ಕಾರ್ತಿಕ್ ಎಂಬುವರ ಕೊಲೆ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿ ಕೋಣಾಜೆ ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಉದ್ದೇಶಿಸಿ ಆರೋಪಿಗಳನ್ನು ಹತ್ತು ದಿನದೊಳಗಾಗಿ ಬಂಧಿಸದಿದ್ದರೆ ಇಡೀ‌‌ ಜಿಲ್ಲೆಗೆ ಬೆಂಕಿ‌ ಇಡುವುದಾಗಿ ಆವೇಶಭರಿತ ಮಾತುಗಳ‌‌ ಮೂಲಕ‌ ಭಯದ ವಾತಾವರಣ‌ ಮೂಡಿಸಿದ್ದರು. ನಂತ್ರ ‌ಈ ಸಂಬಂಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಸಂಬಂಧ ನ್ಯಾಯಾಲಯ ಹಲವು ಬಾರಿ ಹಾಜರಾಗುವಂತೆ ಸಮನ್ಸ್ ಜಾರಿ ನೀಡಿದ್ದರೂ ನಳೀನ್‌ ಕುಮಾರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇತ್ತಿಚ್ಚೆಗೆ ಜನಪ್ರತಿನಿಧಿಗಳ ನ್ಯಾ.ರಾಮಚಂದ್ರ ಡಿ.ಹುದ್ದಾರ್ ಜಾಮೀನು ರಹಿತ ಬಂಧನ ವಾರೆಂಟ್‍ ಹೊರಡಿಸಿದ್ರು. ಇದೀಗ ಹೈಕೋರ್ಟ್ ಪ್ರಕರಣಕ್ಕೆ ತಡೆ ನೀಡಿದೆ
Body:KN_BNG_06_NALIN KUMAR_7204498Conclusion:KN_BNG_06_NALIN KUMAR_7204498
Last Updated : Aug 19, 2019, 10:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.