ETV Bharat / city

ಇಂದು ರಥ ಸಪ್ತಮಿ: ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ 108 ಸೂರ್ಯ ನಮಸ್ಕಾರ - undefined

ನಗರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಬೃಹತ್ ಸಾಮೂಹಿಕ ಸಪ್ತ ನಮಸ್ಕಾರ ಹಾಗೂ 108 ಸೂರ್ಯ ನಮಸ್ಕಾರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.

108 ಸೂರ್ಯ ನಮಸ್ಕಾರ
author img

By

Published : Feb 12, 2019, 10:04 AM IST

ಬೆಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ವತಿಯಿಂದ, ರಥಸಪ್ತಮಿ ಪ್ರಯುಕ್ತ ಇಂದು ಬೃಹತ್ ಸಾಮೂಹಿಕ ಸಪ್ತ ನಮಸ್ಕಾರ ಹಾಗೂ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ
undefined

ಸಂಸ್ಕಾರ-ಸಂಘಟನೆ-ಸೇವೆ ಎಂಬ ಧ್ಯೇಯ ವಾಕ್ಯದಿಂದ ಪತಂಜಲಿ ಯೋಗ ಸಂಸ್ಥೆಯು 1980 ರಿಂದ ಉಚಿತ ಯೋಗ ಶಿಕ್ಷಣ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಜನರಿಗೆ ಆರೋಗ್ಯ, ಧನಾತ್ಮಕ ಚಿಂತನೆ, ಕ್ರಿಯಾಶೀಲ ವ್ಯಕ್ತಿತ್ವ ಹಾಗೂ ಆದರ್ಶವಾಗಿರುವ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಯು ಕೆಲಸ ಮಾಡುತ್ತಿದೆ.

ಈಗಾಗಲೇ ವಿಶ್ವದೆಲ್ಲೆಡೆ ಯೋಗ ತನ್ನದೇ ರೀತಿಯಲ್ಲಿ ಖ್ಯಾತಿಯನ್ನು ಹೊಂದಿರುವುದರಿಂದ, ಇಂದಿನ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರದ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಈ ಸೂರ್ಯದೇವನ ಪ್ರಾರ್ಥನೆಯನ್ನು ಸ್ಮರಿಸುತ್ತಾ ಸೂರ್ಯ ನಮಸ್ಕಾರ ಮಾಡಿದರು. ಸಣ್ಣ ಮಕ್ಕಳಿಂದ ಹಿಡಿದು ವೃದ್ಧವರೆಗೂ ಚಳಿಯನ್ನು ಲೆಕ್ಕಿಸದೆ ಬೆಳಗಿನ 5 ಗಂಟೆಯಿಂದ ಕ್ರಿಯಾಶೀಲತೆಯಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.