ETV Bharat / city

ಹೊಸಕೋಟೆ ಟೋಲ್ ಬಳಿ ಸರಣಿ ಅಪಘಾತ: 9 ವಾಹನ ಜಖಂ, 20ಕ್ಕೂ ಹೆಚ್ಚು ಮಂದಿಗೆ ಗಾಯ - ಹೊಸಕೋಟೆ ರಸ್ತೆ ಅಪಘಾತ

ಹೊಸಕೋಟೆಯ ಲಾಕ್ನೋ ಟೋಲ್ ಬಳಿ ಬಸ್ ಚಾಲಕ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿದ್ದ ಲಾರಿ ಡಿಕ್ಕಿ‌ ಹೊಡೆದಿದೆ. ಪರಿಣಾಮ ಲಾರಿಯ ಹಿಂದೆ ಬರುತ್ತಿದ್ದ ಹಲವು ವಾಹನಗಳು ಜಖಂಗೊಂಡಿವೆ.

ಸರಣಿ ಅಪಘಾತ
ಸರಣಿ ಅಪಘಾತ
author img

By

Published : Jun 26, 2022, 11:30 AM IST

Updated : Jun 26, 2022, 1:12 PM IST

ಬೆಂಗಳೂರು: ಹೊಸಕೋಟೆ ಟೋಲ್ ಬಳಿ ಬೆಳಗ್ಗೆ ಸರಣಿ ಅಪಘಾತ ಸಂಭವಿಸಿತು. ಘಟನೆಯಿಂದ 9 ವಾಹನಗಳಿಗೆ ಹಾನಿಯಾಗಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆರು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟೋಲ್ ಬಳಿ ಬಸ್ ಚಾಲಕ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿ ಬರುತ್ತಿದ್ದ ಲಾರಿ ಡಿಕ್ಕಿ‌ ಹೊಡೆದಿದೆ. ಈ ಸಂದರ್ಭದಲ್ಲಿ ಲಾರಿಯ ಹಿಂದೆ ಬರುತ್ತಿದ್ದ ಕಾರುಗಳು, ಸೇರಿದಂತೆ ಇತರೆ ವಾಹನಗಳು ಜಖಂಗೊಂಡಿವೆ. ಹೊಸಕೋಟೆಯಿಂದ ಕೋಲಾರ, ಆಂಧ್ರಪ್ರದೇಶಗಳಿಗೆ ಈ ವಾಹನಗಳು ಸಂಚರಿಸುತ್ತಿದ್ದವು.

ಹೊಸಕೋಟೆ ಟೋಲ್ ಬಳಿ ಸರಣಿ ಅಪಘಾತ

ಇದನ್ನೂ ಓದಿ: ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ 7 ಜನರ ದುರ್ಮರಣ

Last Updated : Jun 26, 2022, 1:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.