ETV Bharat / city

ಇಂದಿನದ್ದು ಮೊದಲ ಹಂತವಷ್ಟೇ, ಬಿಜೆಪಿಗೆ ಬರುವ ಇತರ ಪಕ್ಷಗಳ ಶಾಸಕರ ಪಟ್ಟಿಯೂ ಸಿದ್ಧವಿದೆ: ಆರ್. ಅಶೋಕ್

ನಮ್ಮ ನಾಯಕರು 150+ ಗುರಿಯನ್ನು ಕೊಟ್ಟಿದ್ದಾರೆ. ಕೇಂದ್ರದ ನಾಯಕರು, ರಾಜ್ಯದ ನಾಯಕರ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನೇ ನಿರ್ಮಿಸುತ್ತೇವೆ.

More people are joining the bjp party form congress and jds
ಇಂದಿನದ್ದು ಮೊದಲ ಹಂತವಷ್ಟೇ
author img

By

Published : May 7, 2022, 10:56 PM IST

ಬೆಂಗಳೂರು: ಇಂದಿನ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಕೇವಲ ಮೊದಲ ಹಂತದ ಕಾರ್ಯಕ್ರಮ, ಹಂತಗಳು ಇನ್ನು ಸಾಕಷ್ಟಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬೇರೆ ಪಕ್ಷದಿಂದ ಬಿಜೆಪಿಗೆ ಬರಲಿದ್ದಾರೆ. ಇತರ ಪಕ್ಷಗಳ ಹಾಲಿ ಶಾಸಕರ ಪಟ್ಟಿಯೂ ಸಿದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಕರ್ನಾಟಕದಲ್ಲಿ ಚುನಾವಣಾ ಪರ್ವ: ಖಾಸಗಿ ಹೋಟೆಲ್​ನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಅವರು, ಕರ್ನಾಟಕದಲ್ಲಿ ಚುನಾವಣಾ ಪರ್ವವನ್ನು ಬಿಜೆಪಿ ಶುರು ಮಾಡಿದೆ. ಬೇರೆ ಪಕ್ಷಗಳು ಗೊಂದಲದಲ್ಲಿದೆ, ಕಾಂಗ್ರೆಸ್ ನಾಯಕತ್ವ ಗೊಂದಲದಲ್ಲಿ ಹೊರಳಾಡುತ್ತಿದೆ. ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಚುನಾವಣಾ ಸಿದ್ಧತೆ ಶುರು ಮಾಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಬರುವವರನ್ನು ಸೇರಿಸಿಕೊಂಡು ಅಲ್ಲಿ ಕೂಡ ಬಿಜೆಪಿ ಗೆಲ್ಲಬೇಕು ಎಂದು ಬಿಜೆಪಿ ನಾಯಕರು ರಣತಂತ್ರ ರೂಪಿಸಿದ್ದಾರೆ. ಇದು ಕೇವಲ ಆರಂಭಿಕ ಹಂತ ಇನ್ನು ಹಲವರನ್ನ ಗುರುತು ಮಾಡಿದ್ದೇವೆ. ಇಂದು ಪಕ್ಷ ಸೇರ್ಪಡೆಗೊಳ್ಳುತ್ತಿರುವವರ ಜೊತೆ ಕಳೆದ ಐದಾರು ತಿಂಗಳಿಂದ ಚರ್ಚೆ ನಡೆಸಲಾಗಿದೆ ನಮ್ಮ ಎಲ್ಲ ನಾಯಕರ ಅನುಮತಿ ಪಡೆದು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುತ್ತಿದ್ದೇವೆ ಎಂದರು.

ಇಂದಿನದ್ದು ಮೊದಲ ಹಂತವಷ್ಟೇ ಆರ್.ಅಶೋಕ್

150+ ಗುರಿ: ಹಾಲಿ ಶಾಸಕರ ಪಟ್ಟಿ ಕೂಡ ಅಧ್ಯಕ್ಷರ ಬಳಿ ಇದೆ, ಶಾಸಕರು ಸಂಪರ್ಕದಲ್ಲಿ ಇದ್ದಾರೆ. ತಾಂತ್ರಿಕ ಕಾರಣಕ್ಕಾಗಿ ಅವರ ಹೆಸರು ಬಹಿರಂಗ ಮಾಡುತ್ತಿಲ್ಲ, ಸೂಕ್ತ ಸಮಯದಲ್ಲಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಹೆಸರು ಬಹಿರಂಗ ಮಾಡಲಿದ್ದಾರೆ. ನಮ್ಮ ನಾಯಕರು 150+ ಗುರಿಯನ್ನು ಕೊಟ್ಟಿದ್ದಾರೆ. ಕೇಂದ್ರದ ನಾಯಕರು, ರಾಜ್ಯದ ನಾಯಕರ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಬೇಕು ಎಂದು ಕೆಲಸ ಮಾಡಬೇಕಾಗಿದೆ. ಈಗ ಪಕ್ಷ ಸೇರ್ಪಡೆಗೊಳ್ಳುತ್ತಿರುವವರು ಹಿಂದೆ ಸಚಿವರಾಗಿದ್ದವರು, ಶಾಸಕರಾಗಿದ್ದವರು ಎಂದರು.

ಬೊಮ್ಮಾಯಿ, ಕಟೀಲ್ ಪರ್ಮನೆಂಟ್ ಜೋಡಿ: ಎಲ್ಲಾ ಸಿಎಂಗೂ ಒಂದು ಹೆಸರಿದೆ, ಸ್ಟಾರ್‌ಗಳಿಗೂ ಆ ಸ್ಟಾರ್ ಈ ಸ್ಟಾರ್, ರಾಕ್ ಸ್ಟಾರ್ ಎಂದು ಹೆಸರು ಕೊಟ್ಟಿದ್ದಾರೆ, ಅದೇ ರೀತಿ ಬೊಮ್ಮಾಯಿ ಅವರಿಗೂ ಕಾಮನ್ ಮ್ಯಾನ್ ಸಿಎಂ ಎಂದು ಜನ ಹೆಸರು ಕೊಟ್ಟಿದ್ದಾರೆ. ಅವರು ಕಾಮನ್ ಮ್ಯಾನ್ ಬಜೆಟ್ ನೀಡಿದ್ದಾರೆ. ದಾರಿಯಲ್ಲಿ ಹೋಗೋರಿಗೂ ಬಜೆಟ್‌ನಲ್ಲಿ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷರು ಅಶ್ವಮೇಧ ಯಾಗ ಮಾಡಿದ್ದಾರೆ. ಏಳು ಬಾರಿ ಇಡೀ ಕರ್ನಾಟಕ ಸುತ್ತಿದ್ದಾರೆ. ಅಧ್ಯಕ್ಷರು ಹಾಗೂ ಸಿಎಂ ಪರ್ಮನೆಂಟ್ ಜೋಡಿಯಾಗಿದ್ದು, ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಿಲ್ಲ: ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.