ETV Bharat / city

ಸಚಿವ ಅಶ್ವತ್ಥನಾರಾಯಣ್ ಕಚೇರಿ ಮುಂದೆ ಧರಣಿ ಕುಳಿತ ಎಂಎಲ್​ಸಿ ಮರಿತಿಬ್ಬೇಗೌಡ: ಕಾರಣ? - ಎಂಎಲ್​ಸಿ ಮರಿತಿಬ್ಬೇಗೌಡ ಧರಣಿ

ವಿಕಾಸಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವ ಕಚೇರಿ ಎದುರು ಧರಣಿ ಕುಳಿತ ವಿಧಾನಪರಿಷತ್​ ಸದಸ್ಯ ಮರಿತಿಬ್ಬೇಗೌಡ ಅವರಿಗೆ ಕಾಂಗ್ರೆಸ್​ನ ಎಂಎಲ್​ಸಿಗಳು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.

MLC Maritibbegowda held a rally in front of the Higher Education Minister's office
ಉನ್ನತ ಶಿಕ್ಷಣ ಸಚಿವರ ಕಚೇರಿ ಮುಂದೆ ಧರಣಿ ನಡೆಸಿದ ಎಂಎಲ್​ಸಿ ಮರಿತಿಬ್ಬೇಗೌಡ
author img

By

Published : May 9, 2022, 3:38 PM IST

ಬೆಂಗಳೂರು: ಪದವಿ ಕಾಲೇಜುಗಳ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರ ನಿಯೋಜನೆ ರದ್ದು ಹಾಗೂ ಕಡ್ಡಾಯ ವರ್ಗಾವಣೆ ವಿರೋಧಿಸಿ ವಿಧಾನಪರಿಷತ್​ನ ಜೆಡಿಎಸ್‍ ಸದಸ್ಯ ಮರಿತಿಬ್ಬೇಗೌಡ ಅವರು ಇಂದು ವಿಕಾಸಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್. ಅಶ್ವತ್ಥನಾರಾಯಣ್​ ಅವರ ಕಚೇರಿ ಬಳಿ ಕುಳಿತು ಧರಣಿ ನಡೆಸಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಲೇಜು ಶಿಕ್ಷಣ ಇಲಾಖೆಯಲ್ಲಿನ ಸುಮಾರು 1500ಕ್ಕೂ ಹೆಚ್ಚು ಸಹಾಯಕ ಹಾಗೂ ಸಹ ಪ್ರಾಧ್ಯಾಪಕರನ್ನು ಕಳೆದ 6-7 ವರ್ಷಗಳಿಂದ ಪೂರ್ಣ ಕಾರ್ಯಭಾರದಲ್ಲಿ ನಿಯೋಜನೆ ಮಾಡಲಾಗಿತ್ತು. ಈ ನಿಯೋಜನೆಯನ್ನು ಏಪ್ರಿಲ್ 30 ರಂದು ಮಧ್ಯರಾತ್ರಿ ರದ್ದುಪಡಿಸಿ, ಮೇ 4ರಂದು ಬಿಡುಗಡೆಗೊಂಡು, ಕೂಡಲೇ ಮೂಲ ಸ್ಥಾನದಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ. ನಂತರ ಸದರಿ, ಆದೇಶವನ್ನು ಮಾರ್ಪಡಿಸಿ, ಮೇ 10 ರಂದು ಬಿಡುಗಡೆಗೊಂಡು, ಮೂಲಸ್ಥಾನದಲ್ಲಿ ವರದಿ ಮಾಡಿಕೊಳ್ಳುವಂತೆ ಮೇ 3ರಂದು ಸಂಜೆ ಆದೇಶಿಸಲಾಗಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವರ ಕಚೇರಿ ಮುಂದೆ ಧರಣಿ ನಡೆಸಿದ ಎಂಎಲ್​ಸಿ ಮರಿತಿಬ್ಬೇಗೌಡ

ಈ ನಿಯೋಜನೆ ರದ್ದತಿ ಆದೇಶದಿಂದಾಗಿ ಕೆಲವು ಕಾಲೇಜುಗಳಲ್ಲಿ ಎಂ.ಬಿ.ಎ. ಕೋರ್ಸುಗಳನ್ನು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಪ್ರಾಧ್ಯಾಪಕರಿಗೆ ತುಂಬಾ ತೊಂದರೆ ಉಂಟಾಗಿದೆ. ನಿಯೋಜನೆ ರದ್ದು ತಾರತಮ್ಯ ಎಸಗಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಒಳಗಾಗಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಶಾಸಕರ ಸಭೆ ಕರೆದು ಚರ್ಚಿಸಿ ನಿಯೋಜನೆ ರದ್ದು ಮಾಡಬೇಕು ಎಂದು ಮರಿತಿಬ್ಬೇಗೌಡ ಆಗ್ರಹಿಸಿದರು.

ಪದವಿ ತರಗತಿಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಹಾಗೂ ಮೌಲ್ಯಮಾಪನ ಪ್ರಾರಂಭವಾಗಿದೆ. ಏಳೆಂಟು ವರ್ಷಗಳಿಂದ ನಿಯೋಜನೆ ಮೇಲೆ ಇದ್ದ 1500ಕ್ಕೂ ಹೆಚ್ಚು ಮಂದಿ ಪ್ರಾಧ್ಯಾಪಕರ ನಿಯೋಜನೆ ರದ್ದು ಮಾಡಲಾಗಿದೆ. ಮಧ್ಯರಾತ್ರಿ ಈ‌ ಆದೇಶ ಮಾಡಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಇವರು ಬಿಡುಗಡೆಗೊಂಡ ಬಳಿಕ ಇವರ ಸ್ಥಾನದಲ್ಲಿ ನಿಯೋಜನೆಗೊಂಡ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಾರೆ. ನಿಯೋಜನೆ ರದ್ದು ಮಾಡಿದ್ದರಿಂದ ಅವರ ಜಾಗಕ್ಕೆ ಮೂರು ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕಾಗುತ್ತದೆ. ನಿಯೋಜನೆ ರದ್ದು ಮಾಡಿ‌ ಮೂಲ ಸ್ಥಾನಕ್ಕೆ ಕಳಿಸುವ ಬಗ್ಗೆ ವಿರೋಧ ಇಲ್ಲ, ಆದರೆ, ಹತ್ತಾರು ವರ್ಷಗಳಿಂದ ನಿಯೋಜನೆಗೊಂಡಿದ್ದ ಅಷ್ಟು ಜನರನ್ನು ಒಮ್ಮೆಲೆ ರದ್ದು ಮಾಡುವುದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಮೂರು ಹಂತದಲ್ಲಿ ಈ ಪ್ರಕ್ರಿಯೆ ಮಾಡಬೇಕಿತ್ತು. ಇದರಲ್ಲಿ ವಿಕಲಚೇತನರು, ಪತಿ-ಪತ್ನಿ ಪ್ರಕರಣದವರು, ಕ್ಯಾನ್ಸರ್ ರೋಗಿಗಳು ಇದ್ದಾರೆ. ನಿಯೋಜನೆ ರದ್ದು ಸಂದರ್ಭದಲ್ಲಿ ಇದ್ಯಾವುದನ್ನು ಪರಿಗಣಿಸಿಲ್ಲ. ಈ ಬಗ್ಗೆ ಸಚಿವರಿಗೆ ಎರಡು ಬಾರಿ ಪತ್ರ ಬರೆದಿದ್ದೆ, ಸಭೆ ಕರೆದು ಚರ್ಚಿಸುವಂತೆ ಮನವಿ ಮಾಡಿದ್ದೆ. ಆದ್ರೆ ಆ ಪತ್ರಕ್ಕೆ ಉತ್ತರ ಸಿಕ್ಕಿಲ್ಲ ಎಂದು ಎಂಎಲ್​ಸಿ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ತಿಂಗಳು 25 ರಿಂದ 28ರವರೆಗೆ 900 ಸಹಾಯಕ ಪ್ರಾಧ್ಯಾಪಕರ ವರ್ಗಾವಣೆ ನಡೆದಿದೆ. ಆ ವರ್ಗಾವಣೆ ಅವೈಜ್ಞಾನಿಕವಾಗಿದೆ. ಬೆಂಗಳೂರಿನಲ್ಲಿ‌ 25 ವರ್ಷ ಕೆಲಸ ಮಾಡಿದವರನ್ನು ಮತ್ತೆ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಕೆಲವರು ನಕಲಿ ಸರ್ಟಿಫಿಕೇಟ್ ಕೊಟ್ಟು ಬೆಂಗಳೂರು, ಮಂಗಳೂರು, ಮೈಸೂರಿಗೆ ವರ್ಗಾವಣೆ ಆಗಿದ್ದಾರೆ. ಸತ್ಯಾಸತ್ಯತೆಯನ್ನು ಈ ಸಂದರ್ಭದಲ್ಲಿ ಪರಿಶೀಲನೆ ಮಾಡಿಲ್ಲ. ಇದು ಕೂಡಾ ಅವೈಜ್ಞಾನಿಕ, ಈ‌ ಆದೇಶ ಹಿಂಪಡೆಯಬೇಕು ಎಂದು‌ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮರಿತಿಬ್ಬೇಗೌಡರ ಧರಣಿಗೆ ಕಾಂಗ್ರೆಸ್​ನ ಎಂಎಲ್​ಸಿಗಳು ಸಹ ಬೆಂಬಲ ವ್ಯಕ್ತಪಡಿಸಿದರು. ವಿಧಾನಪರಿಷತ್​ನ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಗೋವಿಂದರಾಜು, ಯು.ವಿ.ವೆಂಕಟೇಶ್, ಮೋಹನ್ ಕೊಂಡಜ್ಜಿ, ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಧರಣಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಮುಸ್ಲಿಮರ ಓಲೈಕೆಗೆ ಮುಂದಾದ್ರಾ ಶ್ರೀರಾಮುಲು?: ಮಸೀದಿ ಅಭಿವೃದ್ಧಿ ಹೆಸರಲ್ಲಿ ಭರ್ಜರಿ ದೇಣಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.