ETV Bharat / city

ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕ ಬದಲಾಯಿಸುವುದು ಸರಿಯಲ್ಲ.. ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ - MLC H Vishwanath

ಕೇವಲ ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕವನ್ನು ಬದಲಾಯಿಸುವುದು ಸರಿಯಲ್ಲ. ಮಕ್ಕಳು ಎಂದೂ ಏಕ ಪಕ್ಷದ ದೃಷ್ಟಿಕೋನದಲ್ಲಿ ಬೆಳೆಯಬಾರದು. ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಹೆಚ್​.ವಿಶ್ವನಾಥ್​ ಆಗ್ರಹಿಸಿದ್ದಾರೆ..

MLC H.Vishwanath Pressmeet
ಎಂಎಲ್​ಸಿ ಹೆಚ್​ ವಿಶ್ವನಾಥ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : May 24, 2022, 3:44 PM IST

ಬೆಂಗಳೂರು : ಪಠ್ಯ ಪುಸ್ತಕಗಳ ಪರಿಷ್ಕರಣೆಯನ್ನು ರದ್ದುಗೊಳಿಸಿ, ಶಿಕ್ಷಣವನ್ನು ಕೇಸರಿಕರಣ ಮಾಡುವುದರಿಂದ ತಪ್ಪಿಸಬೇಕು ಎಂದು ಶಿಕ್ಷಣ ಸಚಿವರಿಗೆ ವಿಧಾನ ಪರಿಷತ್​ ಸದಸ್ಯ ಅಡುಗೂರು ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಮಂಗಳವಾರ ಪ್ರೆಸ್​ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯನ್ನು ರದ್ದುಗೊಳಿಸಬೇಕು.

ಅವರಲ್ಲಿ ಯಾರು ಸರಿಯಾದ ಶಿಕ್ಷಣ ತಜ್ಞರಲ್ಲ. ಅಲ್ಲದೇ, ಆ ಸಮಿತಿಯನ್ನು ಸ್ಥಾಪಿಸುವಾಗ ಆಗಲಿ ಅಥವಾ ಪುಸ್ತಕ ಪರಿಷ್ಕರಣೆ ಮಾಡುವಾಗ ಆಗಲಿ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ದೂರಿದರು.

ಎಂಎಲ್​ಸಿ ಹೆಚ್​ ವಿಶ್ವನಾಥ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದು..

ಕೇವಲ ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕವನ್ನು ಬದಲಾಯಿಸುವುದು ಸರಿಯಲ್ಲ. ಇದು ಮಕ್ಕಳ ಭವಿಷ್ಯದ ಪ್ರಶ್ನೆ. ಮಕ್ಕಳು ಎಂದೂ ಏಕ ಪಕ್ಷಾ ದೃಷ್ಟಿಕೋನದಲ್ಲಿ ಬೆಳೆಯಬಾರದು. ಅದು ಉತ್ತಮ ಬೆಳವಣಿಗೆ ಅಲ್ಲ. ಹಾಗಾಗಿ, ಈ ಪಠ್ಯವನ್ನು ರದ್ದುಗೊಳಿಸಬೇಕು ಎಂದರು.

ಪಠ್ಯ ಪುಸ್ತಕಗಳ ಪರಿಕ್ಷರಣೆ ತಪ್ಪಲ್ಲ: ಹಿಂದಿನ ಪಠ್ಯ ಪುಸ್ತಕಗಳು ಸಂಪೂರ್ಣವಾಗಿ ಸರಿ ಇದೆ ಎಂದು ಹೇಳುವುದಿಲ್ಲ. ಅದರಲ್ಲಿಯೂ ಅನೇಕ ತಪ್ಪಿತ್ತು. ಆದರೆ, ಅನೇಕ ಚರ್ಚೆಗಾಗಿ ನಂತರ ಆ ಪಠ್ಯ ಪುಸ್ತಕಗಳನ್ನು ಜಾರಿಗೆ ತರಲಾಗಿತ್ತು. ಇಲ್ಲಿ ಯಾವುದೇ ಒಂದು ನಿಯಮ, ಎನ್‌ಸಿಆರ್‌ಟಿ ವಿಷಯಗಳನ್ನು ಅನುಸರಿಸಿಲ್ಲ. ಅದು ತಪ್ಪು. ಹಾಗಾಗಿ, ಈ ಸಮಿತಿಯನ್ನು ರದ್ದು ಮಾಡಿ, ಉನ್ನತ ಮಟ್ಟದ ಸಮಿತಿ ರಚಿಸಿ ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಹಿಂಪಡೆದು, ಹಿಂದಿನ ಪುಸ್ತಕಗಳನ್ನೇ ಆದಷ್ಟು ಬೇಗ ನೀಡಿ: ಪೋಷಕರು, ಶಿಕ್ಷಣ ತಜ್ಞರ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.