ETV Bharat / city

ಜಾರಿ ನಿರ್ದೇಶನಾಲಯ ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ: ಶಾಸಕ ಜಮೀರ್ ಅಹ್ಮದ್ - ಜಮೀರ್ ಅಹ್ಮದ್ ಸುದ್ದಿ

ಪ್ರಾಪರ್ಟಿ ವಿಚಾರವಾಗಿ ದಾಳಿ ಮಾಡಲಾಗಿದೆ, ಜಾರಿ ನಿರ್ದೇಶನಾಲಯ ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.

mla zameer ahmed reaction about ed notice
ಶಾಸಕ ಜಮೀರ್ ಅಹ್ಮದ್ ಪ್ರತಿಕ್ರಿಯೆ
author img

By

Published : Aug 9, 2021, 3:46 PM IST

ಬೆಂಗಳೂರು: ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮಾತನಾಡಿದ್ದು, ಪ್ರಾಪರ್ಟಿ ವಿಚಾರವಾಗಿ ದಾಳಿ ಮಾಡಲಾಗಿದೆ. ED ಯಾವುದೇ ನೋಟಿಸ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

10 ದಿನ ಕಾಲಾವಕಾಶ:

ದಾಳಿಯ ವೇಳೆ ಶೇ. 90ರಷ್ಟು ದಾಖಲೆಗಳನ್ನು ಕೊಡಲಾಗಿದೆ. ಕೆಲವೊಂದು ದಾಖಲೆಗಳು ಬ್ಯಾಂಕ್​ನಲ್ಲಿದೆ. ಅದನ್ನು ಹತ್ತು ದಿನಗಳಲ್ಲಿ ಅಕೌಂಟ್ ಮೂಲಕ ಕಳುಹಿಸಿಕೊಡಿ ಎಂದು ಹೇಳಿದ್ದಾರೆ. ಹತ್ತು ದಿನಗಳ ಕಾಲಾವಕಾಶ ಪಡೆದುಕೊಳ್ಳಲಾಗಿದೆ ಎಂದರು.

ಶಾಸಕ ಜಮೀರ್ ಅಹ್ಮದ್ ಪ್ರತಿಕ್ರಿಯೆ

ಪರೋಕ್ಷವಾಗಿ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ:

ಕಾಂಗ್ರೆಸ್ ನಾಯಕರು ಯಾರೂ ದೂರು ಕೊಟ್ಟಿಲ್ಲ, ದೊಡ್ಡ - ದೊಡ್ಡ ರಾಜಕಾರಣಿಗಳು ದೂರು ಕೊಟ್ಟಿರೋ ಅನುಮಾನ ಇದೆ ಎಂದು ಹೇಳಿದರು. ನಾನು ಬಿಟ್ಟು ಬಂದಿರೋ ಪಕ್ಷದವರು ಮಾಡಿರುವ ಬಗ್ಗೆ ಅನುಮಾನ ಇದೇ ಎಂದು ಪರೋಕ್ಷವಾಗಿ ಹೆಚ್​ಡಿಕೆ ಕಡೆ ಬೆರಳು ಮಾಡಿ ಶಾಸಕ ಜಮೀರ್​ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅಡ್ವೋಕೇಟ್:

ಜಮೀರ್​ಗೆ ಇಡಿ ಕೇಸ್ ನಿರ್ವಹಣೆಗೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅಡ್ವೋಕೇಟ್ ಎನ್ನಲಾಗುತ್ತಿದ್ದು, ಸಿಬಲ್ ಜೊತೆ ಜಮೀರ್ ಮಾತುಕತೆ ನಡೆಸಿದ್ದಾರೆ.

ಇಂದು ನೋಟಿಸ್ ಜಾರಿ:

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಇಡಿ ದಾಳಿ ಪ್ರಕರಣದಲ್ಲಿ ದಾಖಲೆಗಳನ್ನ ಸಲ್ಲಿಸಲು ಇಡಿಯಿಂದ ಮೊದಲ ನೋಟಿಸ್​ ಜಾರಿ ಮಾಡಲಾಗಿದೆ ಎಂದು 10 ದಿನಗಳ ಒಳಗಾಗಿ ದಾಖಲೆಗಳನ್ನ ಸಲ್ಲಿಸಲು ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ದೊರೆತಿತ್ತು. ಜಮೀರ್ ಸಂಬಂಧಿತ 15 ಕಡೆ ದಾಳಿ ನಡೆಸಿದ್ದ ಇಡಿ ಸಂಸ್ಥೆ ಕೆಲವೊಂದು ದಾಖಲೆಗಳಿಲ್ಲದ ಆಸ್ತಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ದಾಖಲೆಗಳ ಜೊತೆ ಸ್ಪಷ್ಟನೆ ನೀಡಲು ಸೂಚನ ನೀಡಿದೆ ಎನ್ನಲಾಗಿತ್ತು.

ಬಂಬೂ ಬಜಾರ್ ಜಮೀರ್ ಮನೆಯ ಇಂಟೀರಿಯರ್ ಫೋಟೋಸ್ ತೆಗೆದುಕೊಂಡಿದ್ದ ಇಡಿ ಅಧಿಕಾರಿಗಳು, ದುಬಾರಿ ಬೆಲೆಯ ಇಂಟೀರಿಯರ್ ಡೆಕೋರೇಷನ್ , ಪೂರ್ತಿ ಮನೆಯ ಫೋಟೋಸ್​ಗಳನ್ನೂ ತೆಗೆದುಕೊಂಡಿದ್ರು. ಇನ್ನು ಕೆಲವೊಂದು ದಾಖಲಾತಿಗಳು ಸಿಕ್ಕಿದ್ದು, ಉಳಿದ ವಸ್ತುಗಳಿಗೆ ದಾಖಲಾತಿಗಳೇ ಇಲ್ಲ, ಹೀಗಾಗಿ ಹತ್ತು ದಿನಗಳಲ್ಲಿ ಡಾಕ್ಯುಮೆಂಟ್ ಅನ್ನು ಇಡಿ ಕೈಗೆ ಹಸ್ತಾಂತರಿಸಬೇಕು ಎಂದು ತಾಕೀತು ಮಾಡಿದೆ ಎನ್ನುವ ಮಾಹಿತಿ ದೊರೆತಿತ್ತು.

ಇದನ್ನೂ ಓದಿ:ಜಮೀರ್ ಮನೆ ಮೇಲೆ ಇಡಿ ದಾಳಿಗೆ ಕಾರಣ... ರೈಡ್ ಮುಕ್ತಾಯಗೊಂಡರೂ ಹೊರಬಾರದ ಶಾಸಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.