ETV Bharat / city

ಕಾರಿಗೆ ಬೆಂಕಿ ಇಟ್ಟವರು ಪಾತ್ರಧಾರಿಗಳು ಅಷ್ಟೇ, ಸೂತ್ರಧಾರ ಮತ್ತೊಬ್ಬ ಇದ್ದಾನೆ: ಸತೀಶ್ ರೆಡ್ಡಿ - bangalore latest news

ಕಾರಿಗೆ ಬೆಂಕಿ ಹಚ್ಚಿ ಸಿಕ್ಕಿ ಬಿದ್ದವರು ಕೇವಲ ಪಾತ್ರಧಾರಿಗಳು. ಈ ದುಷ್ಕೃತ್ಯದ ಹಿಂದೆ ಒಬ್ಬ ಸೂತ್ರಧಾರ ಇದ್ದಾನೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

mla sathish reddy
ಶಾಸಕ ಸತೀಶ್ ರೆಡ್ಡಿ
author img

By

Published : Aug 14, 2021, 11:49 AM IST

ಬೆಂಗಳೂರು: ನನ್ನ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾದ ಮೂವರಲ್ಲಿ ಒಬ್ಬ ಕುಡುಕ, ಒಬ್ಬ ಡ್ರಗ್ಸ್​ ವ್ಯಸನಿ. ಇವರೆಲ್ಲ ಕೇಬಲ್‌ ಕೆಲಸಗಾರರು. ಇದರ ಹಿಂದೆ ಒಬ್ಬ ಸೂತ್ರಧಾರ ಇದ್ದಾನೆ. ಬಂಧಿತರು ಕೇವಲ ಪಾತ್ರಧಾರಿಗಳು ಅಷ್ಟೇ. ನನಗೆ ಒಂದಷ್ಟು ಮಾಹಿತಿ ಇದೆ, ಅವನ್ನು ಗೃಹ ಸಚಿವರಿಗೆ ತಿಳಿಸುತ್ತೇನೆ ಎಂದು ಶಾಸಕ ಸತೀಶ್ ರೆಡ್ಡಿ ಬಾಂಬ್ ಸಿಡಿಸಿದ್ದಾರೆ.

ಶಾಸಕ ಸತೀಶ್ ರೆಡ್ಡಿ ಮಾಹಿತಿ

ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಕುರಿತು, ತಮ್ಮ ಬೇಗೂರು ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಘಟನೆ ನಡೆದ 48 ಗಂಟೆಯಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ತನಿಖೆ ನೆಡೆಸಿದ್ದಾರೆ. ನಾನು ಯಾರಿಗೂ ವೈಯಕ್ತಿಕವಾಗಿ ತೊಂದರೆ ಮಾಡಿಲ್ಲ. ಸಿಕ್ಕಿರುವ ಮೂರು ಜನರ ವಿರುದ್ಧ ಪೊಲೀಸ್ ಠಾಣೆಗೆ ಈ ಹಿಂದೆ ಯಾವತ್ತೂ ದೂರು ಕೊಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಅವರು ಭೇಟಿಯಾಗಲು ರಾತ್ರಿ ಸುಮಾರು 9 ರಿಂದ 10 ಗಂಟೆ ಸಮಯದಲ್ಲಿ ಪ್ರಯತ್ನಿಸಿದ್ದಾರೆ. ಜನರು ಇರೋವಾಗ ಅವರು ಭೇಟಿಗೆ ಪ್ರಯತ್ನಿಸಿಲ್ಲ. ಇದು ತುಂಬ ಕ್ಲಿಯರ್ ಇದೆ. ಕೆಲಸ ಬೇಕು ಅಂದರೆ ಬೆಳಗ್ಗೆ ಬರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳ ಬಂಧನ ಕುರಿತು ಗೃಹ ಸಚಿವರು ಹೇಳಿದ್ದೇನು?

ಇನ್ನೂ ತನಿಖೆ ಮುಂದುವರೆದಿದೆ. ಬಂಧಿತರಲ್ಲಿ ಒಬ್ಬ ನೇಪಾಳಿ ಇದ್ದಾನೆ. ಅವನು ರಾತ್ರಿ 10 ಗಂಟೆ ನಂತರ ನನ್ನನ್ನು ಒಂಟಿಯಾಗಿ ಯಾಕೆ ಭೇಟಿ ಆಗುತ್ತಾನೆ. ಅವನಿಗೆ ಕಾರಣ ಇಲ್ಲದೇ ಏಕೆ ಬರುತ್ತಾನೆ ಯೋಚಿಸಿ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.