ETV Bharat / city

ಕಾಂಗ್ರೆಸ್‌ನವರದು ತಪ್ಪಿದ್ರೂ ಬಂಧಿಸಿ.. ನಾ ಎಲ್ಲಿಯೂ ಓಡಿ ಹೋಗಿಲ್ಲ, CID ನೋಟಿಸ್​​ಗೆ ಲಿಖಿತ ಉತ್ತರ ನೀಡಿದ್ದೇನೆ : ಪ್ರಿಯಾಂಕ್ ಖರ್ಗೆ - ಗೃಹ ಸಚಿವ ಆರಗ ಜ್ಞಾನೇಂದ್ರ

ಸಾರ್ವಜನಿಕವಾಗಿ ಕೆಸರು ಎರಚಿ ನಿಮ್ಮ ಹುದ್ದೆಯ ಘನತೆಗೆ ಕುಂದುಂಟು ಮಾಡುವ ಬದಲು ದಿಟ್ಟತನ ಕ್ರಮ ಜರುಗಿಸಿ. ದುರ್ಬಲ ಗೃಹ ಸಚಿವ ಎಂಬ ಕಳಂಕದಿಂದ ಹೊರಬನ್ನಿ. ನಾವು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಿಗೆ ಸಲಹೆ ನೀಡಿದ್ದಾರೆ..

mla-priyanka-kharge-letter-to-home-minister-araga-jnanendra
ನಾನು ಎಲ್ಲಿಯೂ ಓಡಿ ಹೋಗಿಲ್ಲ, ಸಿಐಡಿ ನೋಟಿಸ್​​ಗೆ ಲಿಖಿತ ಉತ್ತರ ನೀಡಿದ್ದೇನೆ: ಪ್ರಿಯಾಂಕ್ ಖರ್ಗೆ
author img

By

Published : May 7, 2022, 7:12 PM IST

ಬೆಂಗಳೂರು : ರಾಜ್ಯದಲ್ಲಿ ಗೃಹ ಇಲಾಖೆ ನಂಬಿಕೆ ಕಳೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಆರೋಪ ಮಾಡಿದ್ದಾರೆ. ಗೃಹ ಸಚಿವರಿಗೆ ಪತ್ರ ಬರೆದಿರುವ ಅವರು, ದಕ್ಷತೆಗೆ ಹೆಸರಾಗಿದ್ದ ಪೊಲೀಸ್ ವ್ಯವಸ್ಥೆ ನಿಮ್ಮ ಉಸ್ತುವಾರಿಯಲ್ಲಿ ಅನಗತ್ಯ ಕಳಂಕ ಹೊತ್ತುಕೊಳ್ಳುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ಆಡಿಯೋ ಕ್ಲಿಪ್​​ನ ನೈಜತೆ ದೃಢಪಡಿಸಿಕೊಳ್ಳಲಾಗದಷ್ಟು ಮಟ್ಟಿಗೆ ಸಿಐಡಿ ದುರ್ಬಲವಾಗಿದೆ ಎಂದು ಅನ್ನಿಸುವುದಿಲ್ಲ.

ನಿಮ್ಮ ಒತ್ತಡದಿಂದ ಕೈಕಟ್ಟಿಕೊಂಡು, ಕುದುರೆ ಕಣ್ಣಿನಂತೆ ಹಗರಣವನ್ನು ನೋಡುತ್ತಿದೆ. ಈಗಾಗಲೇ ನಡೆದಿರುವ ಪಿಎಸ್‍ಐನ 545 ಮತ್ತು ಮುಂದೆ ನಡೆಯಬೇಕಿರುವ 402 ಪಿಎಸ್‍ಐ ಹುದ್ದೆಗಳ ಅಕ್ರಮಗಳಿಂದ ಕಂಗಾಲಾಗಿರುವ ನೀವು ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಪ್ರತಿಕ್ರಿಯಿಸುತ್ತಿದ್ದೀರಾ ಎನಿಸುತ್ತಿದೆ ಎಂದಿದ್ದಾರೆ.

ಹಗರಣದಲ್ಲಿ ವಸೂಲಿ ಮಾಡಲಾದ ಹಣ ಮರೆಮಾಚಲು ತನಿಖೆಯಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ. ಸಣ್ಣಪುಟ್ಟ ಆರೋಪಿಗಳನ್ನು ಹಿಡಿದು ಜಂಬ ಕೊಚ್ಚಿಕೊಳ್ಳಬೇಡಿ. ಪಿಎಸ್‍ಐ ಹುದ್ದೆ ಕೊಡಿಸಲು ಸಂಗ್ರಹಿಸಲಾದ ಹಣ ಎಲ್ಲೆಲ್ಲಿ ಹೋಗಿದೆ?, ಯಾರಿಗೆಲ್ಲಾ ಹಂಚಿಕೆಯಾಗಿದೆ? ಎಂದು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲು ಆರಂಭಿಸಿದರೆ, ನಿಮ್ಮ ಸರ್ಕಾರ ತನ್ನಷ್ಟಕ್ಕೆ ತಾನೇ ಪತನಗೊಳ್ಳುತ್ತದೆ ಎಂಬ ಮಾತುಗಳಿವೆ.

'ದಿವ್ಯಾ ಅವರ ಕಾರು ಎಲ್ಲಿತ್ತು?' : ಸತ್ಯ ಕಹಿ, ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಪ್ರತಿಪಕ್ಷಗಳತ್ತ ಬೆರಳು ತೋರಿಸಿ ತಮ್ಮನ್ನು ತಾವು ಸಾಚಾ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದೀರಾ?. ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿವ್ಯಾ ಹಾಗರಗಿ ಅವರ ಕಾರು, ಆಕೆ ತಲೆ ಮರೆಸಿಕೊಂಡ ಕಾಲಾವಧಿಯಲ್ಲಿ ಯಾರ ಊರಿನಲ್ಲಿ ನಿಂತಿತ್ತು ಎಂಬ ವದಂತಿಗಳು ಸಾರ್ವಜನಿಕವಾಗಿ ಹರಿದಾಡುತ್ತಿವೆ. ಜೆ.ಜೆ.ನಗರ ಕೊಲೆ ಪ್ರಕರಣದಲ್ಲಿ ವದಂತಿಗಳನ್ನೇ ನಂಬಿ ಹೇಳಿಕೆ ನೀಡಿ, ಕೆಲವೇ ಗಂಟೆಗಳಲ್ಲಿ ಕ್ಷಮೆಯಾಚಿಸಿದ ನಿಮಗೆ, ಪಿಎಸ್‍ಐ ಹಗರಣದಲ್ಲಿನ ವದಂತಿಗಳ ಬಗ್ಗೆ ಮಾಹಿತಿ ಇರುವುದಿಲ್ಲವೇ ? ಮೊದಲು ದಿವ್ಯಾ ಅವರ ಕಾರು ನಿಲುಗಡೆ ಬಗ್ಗೆ ಸ್ಪಷ್ಟನೆ ನೀಡಿ ಎಂದು ಪ್ರಿಯಾಂಕ್​ ಖರ್ಗೆ ಆಗ್ರಹಿಸಿದ್ದಾರೆ.

'ಯಾಕೆ ಮೈಪರಚಿಕೊಳ್ಳುವಿರಿ?': ಸಿಐಡಿ ತನಿಖೆಯಲ್ಲಿ ಪಿಎಸ್‍ಐ ಹಗರಣದ ಆರೋಪಿಗಳು ನೀಡಿರುವ ಎಲ್ಲಾ ಹೇಳಿಕೆಗಳನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿ, ಚೆರಿ ಪಿಕ್ ನಡವಳಿಕೆ ಬಿಡಿ. ಯಾವುದರಲ್ಲೂ ನಿಮ್ಮ ತಪ್ಪಿಲ್ಲ ಎಂದಾದರೆ ಎಲ್ಲದಕ್ಕೂ ಯಾಕೆ ಮೈ ಪರಚಿಕೊಳ್ಳುವಿರಿ?, ಗೃಹ ಸಚಿವರ ಹುದ್ದೆಯ ಘನತೆಯಂತೆ ನಡೆದುಕೊಳ್ಳಿ ಎಂದು ಹಿರಿಯರಾದ ನಿಮಗೆ ಹೇಳಬೇಕೇ? ಸಿಐಡಿ ನನಗೆ ನೀಡಿರುವ ನೋಟಿಸ್‍ಗೆ ನಾನು ಲಿಖಿತವಾಗಿ ಉತ್ತರ ನೀಡಿದ್ದೇನೆ. ಎಲ್ಲಿಯೂ ಓಡಿ ಹೋಗಿಲ್ಲ, ‘ನನ್ನ ಕಡೆಯವರು ಅಥವಾ ಯಾರೇ ಭಾಗಿಯಾಗಿದ್ದರೂ ಮುಲ್ಲಾಜಿಲ್ಲದೇ ಕ್ರಮ ಕೈಗೊಳ್ಳಿ’ ಎಂದು ಮೊದಲ ದಿನದ ಪತ್ರಿಕಾಗೋಷ್ಠಿಯಲ್ಲೇ ನಾನು ಹೇಳಿದ್ದೇನೆ ಎಂದಿದ್ದಾರೆ.

'ದಿಟ್ಟತನ ಕ್ರಮ ಜರುಗಿಸಿ': ಇನ್ನೂ ಯಾಕೆ ಮೀನಮೇಷ ಎಣಿಸುತ್ತಿದ್ದೀರಿ?. ಸಾರ್ವಜನಿಕವಾಗಿ ಕೆಸರು ಎರಚಿ ನಿಮ್ಮ ಹುದ್ದೆಯ ಘನತೆಗೆ ಕುಂದುಂಟು ಮಾಡುವ ಬದಲು ದಿಟ್ಟತನ ಕ್ರಮ ಜರುಗಿಸಿ. ದುರ್ಬಲ ಗೃಹ ಸಚಿವ ಎಂಬ ಕಳಂಕದಿಂದ ಹೊರಬನ್ನಿ. ನಾವು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್‍ನವರು ಹೇಳಿದಂತೆ, ಬಿಜೆಪಿಯವರು ಮತ್ತು ನಿಮ್ಮ ಸರ್ಕಾರದ ಸಚಿವರು ಹೇಳಲು ಸಾಧ್ಯವೇ?. ನಾನು ಪ್ರಿಯಾಂಕ್ ಖರ್ಗೆ ನಿಮ್ಮ ಸರ್ಕಾರದ ಬಿಟ್ ಕಾಯಿನ್ ಹಗರಣದಿಂದ ಈವರೆಗೂ ಮಾತು ಬದಲಿಸಿಲ್ಲ. ನನ್ನ ಮಾತುಗಳು ಸುಳ್ಳು ಎಂದು ಸಾಬೀತುಪಡಿಸಲು ನಿಮ್ಮಿಂದ ಆಗಿಲ್ಲ. ಈಗಲೂ ನಿಮ್ಮ ಮುಂದೆ ನನ್ನ ಆರೋಪಗಳ ಸವಾಲಿದೆ. ಮೊದಲು ಅದಕ್ಕೆ ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: 2,500 ಕೋಟಿ ರೂ. ಕೊಟ್ರೆ ಸಿಎಂ ಸ್ಥಾನ ವಿಚಾರ: ತನಿಖೆಗೆ ಭಾಸ್ಕರ್‌ ರಾವ್‌ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.