ETV Bharat / city

ಆಡಂಬರದ ಹುಟ್ಟುಹಬ್ಬಕ್ಕೆ ಬ್ರೇಕ್​​ ಹಾಕಿದ ಶಾಸಕ... ಸಂತ್ರಸ್ತರಿಗೆ ದೇಣಿಗೆ ಸಂಗ್ರಹ - ಅಡಂಬರದ ಹುಟ್ಟುಹಬ್ಬಕ್ಕೆ ಬ್ರೇಕ್

ಬೆಂಗಳೂರು ಹೊರವಲಯದ ನೆಲಮಂಗಲ ಕ್ಷೇತ್ರದ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ತಮ್ಮ ಹುಟ್ಟುಹಬ್ಬವನ್ನು ಮಾಡಿಕೊಳ್ಳದೇ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದು, ಕೈಯಲ್ಲಿ ಡಬ್ಬ ಹಿಡಿದು ಅಂಗಡಿ ಮುಂಗಟ್ಟುಗಳಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದಾರೆ.

ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ ಶಾಸಕ
author img

By

Published : Aug 21, 2019, 10:00 AM IST

ನೆಲಮಂಗಲ: ಹುಟ್ಟುಹಬ್ಬದ ಆಚರಣೆಗಳಲ್ಲಿ ಮೋಜು ಮಸ್ತಿ ಹೆಚ್ಚಿರುವುದು ಸಾಮನ್ಯ. ಆದ್ರೆ ಇಂತಹ ಆಡಂಬರದ ಜನ್ಮದಿನ ಆಚರಣೆಗೆ ಬ್ರೇಕ್​ ಹಾಕಿ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ನೆಲಮಂಗಲ ಶಾಸಕ ಮಾದರಿಯಾಗಿದ್ದಾರೆ.

ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ ಶಾಸಕ

ಹೌದು, ಬೆಂಗಳೂರು ಹೊರವಲಯದ ನೆಲಮಂಗಲ ಕ್ಷೇತ್ರದ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ತಮ್ಮ ಹುಟ್ಟುಹಬ್ಬವನ್ನು ಮಾಡಿಕೊಳ್ಳದೇ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಕೈಯಲ್ಲಿ ಡಬ್ಬ ಹಿಡಿದು ಅಂಗಡಿ ಮುಂಗಟ್ಟುಗಳಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸಮೂರ್ತಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಅಗತ್ಯವಿದ್ದಷ್ಟು ಅನುದಾನ ಸಿಕ್ಕಿಲ್ಲ. ಸುಮಾರು 10 ಸಾವಿರ ಕೋಟಿ ಅನುದಾನಕ್ಕೆ ಒತ್ತಾಯವಿದೆ. ಆದರೆ ಕಡಿಮೆ ಮೊತ್ತದ ಹಣ ನೀಡಿರುವುದು ಕೇಂದ್ರ ಸರ್ಕಾರದ ವಿಫಲತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಶಾಸಕ ಶ್ರೀನಿವಾಸಮೂರ್ತಿ ಕಳೆದ ವರ್ಷದ ಹುಟ್ಟುಹಬ್ಬಕ್ಕೂ ಸಹ ಕೊಡಗು ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ್ದರು. ಈ ಬಾರಿಯೂ ಸಹ ಉತ್ತರ ಕರ್ನಾಟಕ ಹಾಗೂ ಕೊಡಗು ಎರಡು ಭಾಗಗಳಿಗೆ ದೇಣಿಗೆ ಸಂಗ್ರಹಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದೇ ವೇಳೆ ಮರಳುಕುಂಟೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ 30 ಸಾವಿರ ರೂ. ವೇತನವನ್ನು ಪಂಚಾಯತಿ ಅಧ್ಯಕ್ಷ ಅಶ್ವಥ್ ರಾಜು, ತಾಲೂಕು ಪಂಚಾಯತಿ ಅಧ್ಯಕ್ಷ ನಾಗಭೂಷಣ್, ಶಾಸಕರಿಗೆ ಹಸ್ತಾಂತರಿಸಿದರು.

Intro:ಅಡಂಬರದ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ನೆಲಮಂಗಲ ಶಾಸಕ,

ಅಂಗಡಿಗಳಿಗೆ ತೆರಳಿ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ
Body:ನೆಲಮಂಗಲ : ಬರ್ತಡೇ ಸೆಲಬ್ರೆಷನ್ ಅಂದ್ರೆ ಅಲ್ಲಿ ಮೋಜು ಮಸ್ತಿ. ಗುಂಡು ಪಾರ್ಟಿಯದ್ದೇ ಹವಾ. ಆದರೆ ಅಡಂಬರದ ಹುಟ್ಟು ಹಬ್ಬದ ಆಚರಣೆ ಬದಲಿಗೆ
ನೆರೆ ಸಂತ್ರಸ್ಥರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಶಾಸಕರು ಮಾದರಿಯಾಗಿದ್ದಾರೆ.

ಒಂದೆಡೆ ಅಂಗಡಿ ಮುಂಗಟ್ಟು ಗಳಿಗೆ ತೆರಳಿ ದೇಣಿಗೆ ಸಂಗ್ರಹಿಸುತ್ತಿರುವ ಶಾಸಕರು, ಶಾಸಕರು ಹಿಡಿದಿರುವ ದೇಣಿಗೆ ಡಬ್ಬಕ್ಕೆ ಕೈಲಾದ ಹಣ ಹಾಕುತ್ತಿರುವ ಅಂಗಡಿ ಮಾಲೀಕರು. ಪ್ರವಾಹದ ಹಿನ್ನಲೆಯಲ್ಲಿ ಶಾಸಕರೊಬ್ಬರು ತಮ್ಮ ಹುಟ್ಟು ಹಬ್ಬಕ್ಕೆ ಬ್ರೇಕ್ ಹಾಕಿ, ನೆರೆ ಸಂತ್ರಸ್ಥರಿಗೆ ದೇಣಿಗೆ ಸಂಗ್ರಹ ಮಾಡುವ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಹೌದು, ಬೆಂಗಳೂರು ಹೊರವಲಯ ನೆಲಮಂಗಲ ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಮ್ಮ ಹುಟ್ಟು ಹಬ್ಬವನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ದೇಣಿಗೆ ಸಂಗ್ರಹಕ್ಕೆ ಮೀಸಲಿಟ್ಟು.
ಇದೇ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸಮೂರ್ತಿ ಕೇಂದ್ರ ಮತ್ತು ರಾಜ್ಯ ಎರಡು ಕಡೆ ಬಿಜೆಪಿ ಸರ್ಕಾರವಿದೆ, ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ಅಗತ್ಯವಿದ್ದಷ್ಟೂ ಅನುದಾನ ಸಿಕ್ಕಿಲ್ಲ. ಸುಮಾರು ೧೦ ಸಾವಿರ ಕೋಟಿ ಅನುದಾನಕ್ಕೆ ಒತ್ತಾಯವಿದೆ, ಆದರೆ ಕಡಿಮೆ ಮೊತ್ತವಾಗಿ ಹಣ ನೀಡಿರುವುದು ಕೇಂದ್ರ ಸರ್ಕಾರದ ವಿಫಲತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ಶಾಸಕ ಶ್ರೀನಿವಾಸಮೂರ್ತಿ ರ ಕಳೆದ ವರ್ಷದ ಹುಟ್ಟಿದ ಹಬ್ಬವು ಕೊಡಗು ಸಂತ್ರಸ್ಥರಿಗೆ ದೇಣಿಗೆ ಸಂಗ್ರಹಿಸಿದ್ದೇವು, ಈ ಬಾರಿ ಉತ್ತರ ಕರ್ನಾಟಕ ಹಾಗೂ ಕೊಡಗು ಎರಡು ಭಾಗಗಳಿಗೂ ದೇಣಿಗೆ ಸಂಗ್ರಹಿಸಿದ್ದೇವೆ, ಮುಂದೆಂದೂ ಈ ರೀತಿ ಅತೀವೃಷ್ಟಿ ಆಗದರಲಿ ಎಂದು ಭಗವಂತನನ್ನು ಶಾಸಕ ಪ್ರಾರ್ಥಿಸಿದರು. ಇದೇ ವೇಳೆಯಲ್ಲಿ ಮರಳುಕುಂಟೆ ಗ್ರಾಮ ಪಂಚಾಯತಿ ಜನ ಪ್ರತಿನಿಧಿಗಳ ವೇತನವಾಗಿ ೩೦ ಸಾವಿರ ರೂಪಾಯಿಯನ್ನು ಪಂಚಾಯತಿ ಅಧ್ಯಕ್ಷ ಅಶ್ವಥ್ ರಾಜು, ತಾಲೂಕು ಪಂಚಾಯತಿ ಅಧ್ಯಕ್ಷ ನಾಗಭೂಷಣ್ ಶಾಸಕರಿಗೆ ಹಸ್ತಾಂತರಿಸಿದರು.

01a-ಬೈಟ್: ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕ, ನೆಲಮಂಗಲConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.