ETV Bharat / city

ನಾನು ಇದ್ದರೂ ಜೆಡಿಎಸ್..ಸತ್ರೂ ಜೆಡಿಎಸ್: ಶಾಸಕ ಗೌರಿಶಂಕರ್ - ಹೆಚ್​ ಡಿ ಕುಮಾರಸ್ವಾಮಿ

ವಿದೇಶ ಪ್ರವಾದಿಂದ ವಾಪಸ್​ ಆಗಿರುವ ಜೆಡಿಎಸ್​ ಶಾಸಕ ಗೌರಿಶಂಕರ್​ ಯಾವುದೇ ಕಾರಣಕ್ಕೂ ಅಡ್ಡ ಮತದಾನ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

JDS MLA Gowrishankar talked to Media
ಶಾಸಕ ಗೌರಿಶಂಕರ್​​ ಮಾಧ್ಯಮದವರೊಂದಿಗೆ ಮಾತನಾಡಿದರು
author img

By

Published : Jun 10, 2022, 7:18 AM IST

ದೇವನಹಳ್ಳಿ : ರಾಜ್ಯಸಭಾ ಚುನಾವಣೆ ಸಮಯದಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ವಿದೇಶಿ ಪ್ರವಾಸದಲ್ಲಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಇಂದು ವಿದೇಶದಿಂದ ಆಗಮಿಸಿದ ಅವರು ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು.

ರಾಜ್ಯಸಭಾ ಚುನಾವಣೆ ಕಾವು ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರತಿಯೊಬ್ಬ ಶಾಸಕರ ಹಾಜರಿ ಬಹಳ ಮುಖ್ಯವಾಗಿದೆ. ಇದೇ ಸಮಯದಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ದುಬೈ ಪ್ರವಾಸದಲ್ಲಿದ್ದರು. ಇದು ಜೆಡಿಎಸ್ ಪಕ್ಷಕ್ಕೆ ಆತಂಕವನ್ನುಂಟು ಮಾಡಿತ್ತು. ಆದರೆ, ಇಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಗೊಂದಲಕ್ಕೆ ತೆರೆ ಎಳೆದರು.

ಶಾಸಕ ಗೌರಿಶಂಕರ್​​ ಮಾಧ್ಯಮದವರೊಂದಿಗೆ ಮಾತನಾಡಿದರು

ಮಾಧ್ಯಮದೊಂದಿಗೆ ಮಾತನಾಡಿದ ಅವರು 6 ತಿಂಗಳ ನಿಗದಿಯಾದ ಪ್ರವಾಸವಾಗಿತ್ತು, ಪ್ರತಿ ವರ್ಷ ನಾನು ಕುಟುಂಬ ಸಮೇತ ಪ್ರವಾಸಕ್ಕೆ ಹೋಗುವೆ ಅದರಂತೆ ನಾನು ದುಬೈ ಪ್ರವಾಸಕ್ಕೆ ಹೋಗಿದ್ದೆ, ಈ ಸಮಯದಲ್ಲಿ ಮಾಧ್ಯಮದಲ್ಲಿ ಬರುತ್ತಿದ್ದ ಸುದ್ದಿ ಕೇಳಿ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದೇನೆ. ನಾನು ಇದ್ದರೂ ಜೆಡಿಎಸ್ ಸತ್ತರೂ ಜೆಡಿಎಸ್ ನಾವು ಬದುಕಿರುವವರೆಗೂ ಜೆಡಿಎಸ್​ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಅಡ್ಡ ಮತದಾನ ಮಾಡುವುದಿಲ್ಲ. ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಲಿದ್ದೇನೆ ಎಂದರು.

ಇದನ್ನೂ ಓದಿ : ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿದ್ರೂ ಕಾಂಗ್ರೆಸ್ ಗೆಲ್ಲಲ್ಲ: ಹೆಚ್​​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.