ETV Bharat / city

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮನೆ ಹಿಂಭಾಗದ ನಿವೇಶನದಲ್ಲಿ ಗಾಂಜಾ ಬೆಳೆ

ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಅವರು, ಬೆಂಗಳೂರಿನ ಆರ್​​.ಟಿ.ನಗರ ನಿವಾಸದ ಆಸುಪಾಸಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಗಮನಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Miscreants who grow ganja in Bengaluru
ಗೋಪಾಲಕೃಷ್ಣ ಬೇಳೂರು ಮನೆ ಹಿಂಭಾಗದ ನಿವೇಶನದಲ್ಲಿ ಗಾಂಜಾ ಬೆಳೆದ ಕಿಡಿಗೇಡಿಗಳು
author img

By

Published : Jul 13, 2022, 9:30 AM IST

ಬೆಂಗಳೂರು: ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರ್.ಟಿ.ನಗರದ ಮಂಜುನಾಥ್ ಲೇಔಟ್​​ನ ಮುಖ್ಯ ರಸ್ತೆಯಲ್ಲಿರುವ ಮನೆ ಹಿಂಭಾಗದ ಖಾಲಿ ನಿವೇಶನದಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ. ಮಾದಕ ದ್ರವ್ಯದ ಗಿಡಗಳ‌ನ್ನು ಕಂಡ ಶಾಸಕರು ಖುದ್ದು ಆರ್.ಟಿ.ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ನಿವೇಶನ ಮಾಲೀಕರಿಂದಲೂ ಮಾಹಿತಿ ಕಲೆ ಹಾಕಲಾಗಿದೆ.

ಗೋಪಾಲಕೃಷ್ಣ ಬೇಳೂರು ಮಾತನಾಡಿ, "ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ ಬೆಳೆಯುವುದು ಅಥವಾ ಮಾರಾಟ ಮಾಡುವ ಪ್ರಕರಣಗಳು ಗೊತ್ತಿತ್ತು. ಆದರೀಗ ರಾಜಧಾನಿ ಬೆಂಗಳೂರಿನಲ್ಲಿಯೇ ಗಾಂಜಾ ಬೆಳೆಯಲಾಗುತ್ತಿದೆ. ಯುವ ಸಮುದಾಯವನ್ನು ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ಪೊಲೀಸ್ ಇಲಾಖೆ ಇಲ್ಲಿ ಗಾಂಜಾ ಬೆಳೆಯುವವರಿಗೆ ಸಹಕಾರ ನೀಡುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ" ಎಂದು ಆರೋಪಿಸಿದರು.

ganja

ಇದನ್ನೂ ಓದಿ: ಸುಳ್ಳು ಸಾಕ್ಷ್ಯ ಸೃಷ್ಟಿ: ಮತ್ತೆ ಬಂಧನಕ್ಕೊಳಗಾದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.