ETV Bharat / city

ಮೂವರು ಮಂತ್ರಿಗಳ ನಡುವೆ ಇಕ್ಕಳದಲ್ಲಿ ಸಿಕ್ಕಿಕೊಂಡಂತಾಗಿದೆ: ಪರಿಷತ್‌ ಕಲಾಪದಲ್ಲಿ ಸೋಮಣ್ಣ ಅಸಹಾಯಕತೆ

ವಸತಿ ಇಲಾಖೆ ಕೆಲಸ ಮಾಡಬೇಕು ಅಂದ್ರೆ ಅದು ಸುಲಭವಲ್ಲ ಬೇರೆ ಬೇರೆ ಇಲಾಖೆಗಳ ಅನುಮತಿ ಪಡೆದುಕೊಳ್ಳಬೇಕು. ನಾವು ಒಂದು ಕಡೆ ಕಂದಾಯ ಮಂತ್ರಿ, ಇನ್ನೊಂದು ಕಡೆ ಆರ್​ಡಿಪಿಆರ್ ಮಂತ್ರಿ, ಮತ್ತೊಂದು ಕಡೆ ಅರ್ಬನ್ ಡೆವಲಪ್ಮೆಂಟ್ ಮಂತ್ರಿ, ಮತ್ತೊಂದು ಕಡೆ ಡಿಸಿಗಳು ಇವರೆಲ್ಲರ ಮಧ್ಯೆ ಇಕ್ಕಳದಲ್ಲಿ ಸಿಕ್ಕಿಕೊಂಡಂತಾಗಿದೆ ಎಂದು ಸಚಿವ ಸೋಮಣ್ಣ ಪರಿಷತ್‌ ಕಲಾಪದಲ್ಲಿ ಹುಸಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Minister V.Somanna talking  Council Session update
ಮೂವರು ಮಂತ್ರಿಗಳ ನಡುವೆ ಇಕ್ಕಳದಲ್ಲಿ ಸಿಕ್ಕಿಕೊಂಡಂತಾಗಿದೆ - ಪರಿಷತ್‌ ಕಲಾಪದಲ್ಲಿ ಸೋಮಣ್ಣ ಅಸಹಾಯಕತೆ
author img

By

Published : Sep 22, 2021, 1:39 PM IST

Updated : Sep 22, 2021, 3:24 PM IST

ಬೆಂಗಳೂರು: ನಾನು ಮೂರು ಸಚಿವರ ಮಧ್ಯೆ ಇಕ್ಕಳದಂತೆ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ವಸತಿ ಸಚಿವ ವಿ ಸೋಮಣ್ಣ ಹುಸಿ ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗ ವಿಧಾನ ಪರಿಷತ್ ಕಲಾಪದಲ್ಲಿ ನಡೆದಿದೆ. ವಸತಿ ಯೋಜನೆಗಳ ಚರ್ಚೆಗೆ ಜೆಡಿಎಸ್ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ವಸತಿ ಯೋಜನೆಗಳ ಕುರಿತು ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಉಪ ಸಭಾಪತಿ ಪ್ರಾಣೇಶ್ ರೂಲಿಂಗ್ ನೀಡಿದರು.

ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ

ಬಾಗಲಕೋಟೆ ಜಿಲ್ಲೆಯಲ್ಲಿ ವಾಜಪೇಯಿ ವಸತಿ ಯೋಜನೆ ಅನುಷ್ಠಾನ ಸಂಬಂಧ ಹನುಮಂತ ನಿರಾಣಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಸತಿ ಇಲಾಖೆ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಪಣ ತೊಟ್ಟಿದ್ದೇನೆ. ಆದರೆ, ವಸತಿ ಇಲಾಖೆ ಕೆಲಸ ಮಾಡಬೇಕು ಅಂದ್ರೆ ಅದು ಸುಲಭವಲ್ಲ ಬೇರೆ ಬೇರೆ ಇಲಾಖೆಗಳ ಅನುಮತಿ ಪಡೆದುಕೊಳ್ಳಬೇಕು.

ನಾವು ಒಂದು ಕಡೆ ಕಂದಾಯ ಮಂತ್ರಿ, ಇನ್ನೊಂದು ಕಡೆ RDPR ಮಂತ್ರಿ, ಮತ್ತೊಂದು ಕಡೆ ಅರ್ಬನ್ ಡೆವಲಪ್ಮೆಂಟ್ ಮಂತ್ರಿ, ಮತ್ತೊಂದು ಕಡೆ ಡಿಸಿಗಳು ಇವರೆಲ್ಲರ ಮಧ್ಯೆ ಇಕ್ಕಳದಲ್ಲಿ ಸಿಕ್ಕಿಕೊಂಡಂತಾಗಿದೆ ಎಂದು ಹುಸಿ ಅಸಹಾಯಕತೆ ವ್ಯಕ್ತಪಡಿಸಿ ನಗೆ ಬೀರಿದರು. ಕಳೆದ‌ ಮೂರು ವರ್ಷಗಳಿಂದ ನೂತನ ವಸತಿಗಳನ್ನು ಹಂಚಿಕೆ ಮಾಡಿಲ್ಲ ಎಂದರು.

ಚರ್ಚೆಗೆ ಬಿಗಿಪಟ್ಟು ​

ಈ ವೇಳೆ, ಚರ್ಚೆಗೆ ಅವಕಾಶ ಕೊಡುವಂತೆ ಜೆಡಿಎಸ್ ಸದಸ್ಯರು ಗದ್ದಲವೆಬ್ಬಿಸಿದರು. ಇದು ಇಡೀ ರಾಜ್ಯದ ಸಮಸ್ಯೆ, ಮೂರು ವರ್ಷಗಳಿಂದ ಯಾಕೆ ಹೊಸ ವಸತಿ ಯೋಜನೆ ನೀಡಿಲ್ಲ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಲೇಬೇಕು ಅಂತ ಬಿಗಿಪಟ್ಟು ಹಿಡಿದರು. ಈ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಹೇಳಿದರು.

ಗದ್ದಲದ ನಡುವೆ ಜೆಡಿಎಸ್ ಸದಸ್ಯರ ಬೇಡಿಕೆ ಕುರಿತು ಉತ್ತರಿಸಿದ ಸಚಿವ ಸೋಮಣ್ಣ, ವಸತಿ ಯೋಜನೆಯಡಿ ಬಾಕಿ ಇರುವ ನಿವಾಸಗಳ ಹಂಚಿಕೆಯನ್ನು ಲಾಜಿಸ್ಟಿಕ್ ಎಂಡ್‌ಗೆ ತರಲು ಪ್ರಯತ್ನ ನಡೆಸುತ್ತಿದ್ದೇವೆ. ಮುಂದಿನ‌ ಗುರುವಾರದ ಒಳಗೆ ಎಷ್ಟು ಮನೆ ಕೊಡಲಾಗುತ್ತದೆ. ಮೂರು ವರ್ಷದಲ್ಲಿ ಮನೆ ಕೊಡದಿರುವುದು ಎಷ್ಟು? ಯಾಕೆ ಕೊಡಲಿಲ್ಲ?, ನಮ್ಮ ಸರ್ಕಾರ, ಹಿಂದಿನ ಸರ್ಕಾರ, ಅದರ ಹಿಂದಿನ ಬಿಜೆಪಿ ಸರ್ಕಾರ ಎಷ್ಟೆಷ್ಟು ಹಣ ಇಟ್ಟಿದ್ದರು, ಖರ್ಚಾಗಿದ್ದೆಷ್ಟು, ಮನೆ ಅಲಾಟ್ ಎಷ್ಟು,? ವಿವರ ನೀಡಲಾಗುತ್ತದೆ ಎಂದರು.

ಆದರೂ ಜೆಡಿಎಸ್ ಸದಸ್ಯರು ‌ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಮುಂದುವರೆಸಿದರು ಅಂತಿಮವಾಗಿ ಉಪ ಸಭಾಪತಿ ಪ್ರಾಣೇಶ್ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಲಾಗುತ್ತದೆ ಎಂದು ರೂಲಿಂಗ್ ನೀಡಿ ಗದ್ದಲಕ್ಕೆ ತೆರೆ ಎಳೆದರು.

ಮೀನುಗಾರರ ಮರಣ ಕುರಿತು ಪೊಲೀಸ್ ವರದಿ ಪಡೆದು ಪರಿಹಾರ:

ಸಮುದ್ರ ಮೀನುಗಾರಿಕೆಯ ಸಮಯದಲ್ಲಿ ದೋಣಿ ಮುಳುಗಡೆಯಿಂದ ಮೃತಪಟ್ಟವರಿಗೆ 6 ಲಕ್ಷ ಪರಿಹಾರ ಒದಗಿಸಿದ್ದೇವೆ. ಈಗಾಗಲೇ ಮೃತಪಟ್ಟವರಿಗೆ ಪರಿಹಾರ ನೀಡಲಾಗಿದೆ. ಮೊನ್ನೆ 4 ಮಂದಿ ಸಾವನ್ನಪ್ಪಿರುವವರಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಮೀನುಗಾರಿಕೆ ಸಚಿವ ಅಂಗಾರ ತಿಳಿಸಿದ್ದಾರೆ.

ಮೀನುಗಾರರ ಮರಣ ಕುರಿತು ಪೊಲೀಸ್ ವರದಿ ಪಡೆದು ಪರಿಹಾರ ನೀಡುವುದಾಗಿ ಸಚಿವ ಎಸ್‌.ಅಂಗಾರ ಹೇಳಿದರು

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿಸೇಲ್, ಸೀಮೆ ಎಣ್ಣೆ ವಿಚಾರವಾಗಿ ಕೇಂದ್ರ ಸರ್ಕಾರದ ಸಹಕಾರ ಕೋರಿದ್ದೇವೆ. 16 ಯೋಜನೆಗಳಲ್ಲಿ ಸರಿಯಾಗಿ ಅನುಷ್ಠಾನ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ. ಈ ಯೋಜನೆಯ ಕಾರ್ಯರೂಪಕ್ಕೆ ತರುವಲ್ಲಿ ಕೆಲವು ಸಮಸ್ಯೆಗಳಿವೆ, ಅದನ್ನ ಸರಿಪಡಿಸಿಕೊಂಡು ಯೋಜನೆ ಪೂರ್ಣಗೊಳಿಸುತ್ತೇನೆ ಎಂದರು.

ಸಮುದ್ರದಲ್ಲಿ ದೋಣಿ ಮುಳುಗಿ ಮೃತಪಟ್ಟವರ ಬಗ್ಗೆ ಪೋಲಿಸರಿಂದ ವರದಿ ಬಂದ ಬಳಿಕ ಪರಿಹಾರ ನೀಡುತ್ತೇವೆ. ಸಾಲಮನ್ನಾ 1,200 ಜನಕ್ಕೆ ಬಾಕಿ ಇದೆ. ಬ್ಯಾಂಕ್ ಅಕೌಂಟ್ ಸಮಸ್ಯೆ ಇದೆ. ಅದನ್ನ ಸರಿಪಡಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಮಹಿಳೆಯರಿಗೆ ಸಾಲ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮುಜಿರಾಯಿ ಜಾಗ ಸರ್ವೆ:

ಮುಜರಾಯಿ ಇಲಾಖೆಯ ಜಾಗದ ಸರ್ವೆ ಮಾಡಲು ಚಿಂತನೆ ಮಾಡಲಾಗುತ್ತಿದೆ. ಮುಜರಾಯಿ ಕಟ್ಟಡ ಬಾಡಿಗೆ ನೀಡಿರುವ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಸುಸಜ್ಜಿತ ವಾತಾವರಣ ನಿರ್ಮಾಣ ಮಾಡುವುದು. ಮಲೆ ಮಹದೇಶ್ವರ ಪ್ರಾಧಿಕಾರದ ಮಾದರಿ, ಎ ಗ್ರೇಡ್ ದೇವಸ್ಥಾನಗಳನ್ನ ವ್ಯವಸ್ಥಿತವಾಗಿ ಕಾಂಪೌಂಡ್ ಹಾಕುವುದು, ಪಾರ್ಕಿಂಗ್ ವ್ಯವಸ್ಥೆ ಸುಸಜ್ಜಿತವಾಗಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಜಿರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಮುಜರಾಯಿ ಇಲಾಖೆಯ ಜಾಗದ ಸರ್ವೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ಸಚಿವ ಶಶಿಕಲಾ ಜೊಲ್ಲೆ ಹೇಳಿದರು

ಪ್ರಶ್ನೋತ್ತರ ಕಲಾಪದಲ್ಲಿ ಮುಜರಾಯಿ ಇಲಾಖೆಗೆ ಆಸ್ತಿಗಳಿಗೆ ಬೌಂಡರಿ ಫೀಕ್ಸ್ ಆಗಬೇಕು. ದೇವಸ್ಥಾನಗಳಿಂದ ದೂರು ಕಟ್ಟಡಗಳು ಕಟ್ಟಿ. ಇದಕ್ಕಾಗಿ ಟೆಕ್ನಿಕಲ್ ಟೀಮ್ ಸಹಾಯ ಪಡಕೊಳ್ಳಬೇಕು ಎಂದು ಕಾಂತರಾಜ್ ಪ್ರಶ್ನೆಗೆ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ, ಸದಸ್ಯರು ಮುಜರಾಯಿ ಇಲಾಖೆಯ ಆಸ್ತಿಗಳ ಬಾಡಿಗೆ ಬಗ್ಗೆ ಮಾಹಿತಿ ಕೇಳಿದ್ದಾರೆ.

ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಮಾಹಿತಿ ಬಂದ ಮೇಲೆ ಕೊಡುತ್ತೇವೆ. ಅಲ್ಲದೆ ಕಟ್ಟಡಗಳು ಕಟ್ಟುವ ವಿಚಾರದಲ್ಲಿ ಸದಸ್ಯರ ಕೊಟ್ಟ ಸಲಹೆ ಪರಿಗಣಿಸುತ್ತೇವೆ. ಆಸ್ತಿಯನ್ನು ಇಂದಿನ ಮಾರುಕಟ್ಟೆ ಬೆಲೆಗೆ ಬಾಡಿಗೆ, ಗುತ್ತಿಗೆ ನೀಡಲಾಗುತ್ತದೆ‌ ಎಂದರು.

Last Updated : Sep 22, 2021, 3:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.