ETV Bharat / city

ದಿಢೀರ್ ದೆಹಲಿಗೆ ತೆರಳಿದ ಸಚಿವ ಶ್ರೀರಾಮುಲು: ಹೈಕಮಾಂಡ್​ನಿಂದ ಬಂದಿತ್ತಾ ಬುಲಾವ್..?

author img

By

Published : Jul 21, 2021, 12:38 PM IST

ಕಳೆದ ರಾತ್ರಿ ಆಪ್ತರ ಜೊತೆ ಮಾತುಕತೆ ನಡೆಸಿದ್ದ ಸಚಿವ ಶ್ರೀರಾಮುಲು ಬೆಳ್ಳಂಬೆಳಗ್ಗೆಯೇ ದೆಹಲಿಗೆ ತೆರಳಿದ್ದಾರೆ. ಈಗಾಗಲೇ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ರೇಣುಕಾಚಾರ್ಯ ಕೂಡ ದೆಹಲಿಗೆ ದೌಡಾಯಿಸಿದ್ದಾರೆ. ಇದರ ನಡುವೆ ಶ್ರೀರಾಮುಲು ತೆರಳಿರುವುದು ಅಚ್ಚರಿಗೆ ಕಾರಣವಾಗಿದೆ.

Minister Sriramulu
ದಿಢೀರ್ ದೆಹಲಿಗೆ ತೆರಳಿದ ಸಚಿವ ಶ್ರೀರಾಮುಲು

ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ಸಚಿವ ಬಿ.ಶ್ರೀರಾಮುಲು ನವದೆಹಲಿಗೆ ತೆರಳಿದ್ದು, ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ಚರ್ಚೆ ಸಮಯದಲ್ಲಿ ರಾಮುಲು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.

ಕಳೆದ ರಾತ್ರಿ ಆಪ್ತರ ಜೊತೆ ಮಾತುಕತೆ ನಡೆಸಿದ್ದ ಸಚಿವ ಶ್ರೀರಾಮುಲು, ಬೆಳ್ಳಂಬೆಳಗ್ಗೆಯೇ ದೆಹಲಿಗೆ ತೆರಳಿದ್ದಾರೆ. ಈಗಾಗಲೇ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡ ದೆಹಲಿಗೆ ದೌಡಾಯಿಸಿದ್ದಾರೆ. ಇದರ ನಡುವೆ ಶ್ರೀರಾಮುಲು ತೆರಳಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಮೌನವಾಗಿ ಕುಳಿತಿದ್ದರೆ, ಅತ್ತ ಆಪ್ತರೆಲ್ಲಾ ದೆಹಲಿಯತ್ತ ಮುಖ ಮಾಡುತ್ತಿದ್ದಾರೆ‌.

ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ಶ್ರೀರಾಮುಲು ದೆಹಲಿಗೆ ತೆರಳಿದ್ದು, ಯಾವ ಉದ್ದೇಶಕ್ಕೆ ಅವರನ್ನ ಕರೆಸಿಕೊಳ್ಳಲಾಗಿದೆ. ಯಾವ ಮಾಹಿತಿ ಅವರಿಂದ ನಿರೀಕ್ಷೆ ಮಾಡಿದೆ ಎಂಬುದು ಬಹಿರಂಗವಾಗಿಲ್ಲ. ಪ್ರಮುಖ ಖಾತೆ ವಾಪಸ್ ಪಡೆದು ಸಮಾಜಕಲ್ಯಾಣ ಇಲಾಖೆ ಕೊಟ್ಟರೂ ಪಕ್ಷದ ವಿರುದ್ಧ ಮಾತನಾಡದೇ ಕೆಲಸ ಮಾಡಿಕೊಂಡು ಹೋಗಿದ್ದು, ಪಕ್ಷ ನಿಷ್ಟೆ ಕಾರಣಕ್ಕೆ ಕರೆಸಿಕೊಂಡು ಕೆಲ ಮಾಹಿತಿ ಪಡೆಯಲಾಗುತ್ತಿದೆ ಎನ್ನಲಾಗಿದೆ.

ಶೆಟ್ಟರ್ ವಾಪಸ್​

ಇನ್ನು ಸಚಿವ ಜಗದೀಶ್ ಶೆಟ್ಟರ್ ದೆಹಲಿಯಿಂದ ಇಂದು ರಾಜ್ಯಕ್ಕೆ ವಾಪಸ್​​ ಆಲಿದ್ದಾರೆ. ಕಳೆದ ಒಂದು ವಾರಗಳಿಂದಲೂ ಗುಜರಾತ್ ಮತ್ತು ದೆಹಲಿಯಲ್ಲಿ ಬೀಡು ಬಿಟ್ಟಿರುವ ಶೆಟ್ಟರ್, ಕಟೀಲ್ ಆಡಿಯೋ ಬಿಡುಗಡೆ ಹಾಗೂ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಬಳಿಕ ದೆಹಲಿಯಲ್ಲಿಯೇ ಠಿಕಾಣಿ ಹೂಡಿದ್ದರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿರುವ ಜಗದೀಶ್ ಶೆಟ್ಟರ್ ದೆಹಲಿಯಲ್ಲಿಯೇ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವಾರು ನಾಯಕರನ್ನು ಭೇಟಿ ಮಾಡಿದ್ದಾರೆ.

ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಅರುಣ್ ಸಿಂಗ್ ಭೇಟಿಗೆ ಸಮಾಯಾಕಾಶ ಸಿಗದಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರೇಣುಕಾಚಾರ್ಯ ವಿರುದ್ಧ ನಡೀತಿದ್ಯಾ ಷಡ್ಯಂತ್ರ?.. ಸಿಡಿ ಅಸ್ತ್ರಕ್ಕೆ ಬೆಚ್ಚಿ ದೆಹಲಿಗೆ ತೆರಳಿದ್ರಾ ಸಿಎಂ ರಾಜಕೀಯ ಕಾರ್ಯದರ್ಶಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.