ಬೆಂಗಳೂರು: ಕೋವಿಡ್-19 ರಿಂದ ಮೃತಪಟ್ಟ ಕುಟುಂಬಗಳಿಗೆ, ತಮ್ಮ ವಿಧಾನಸಭಾ ಕ್ಷೇತ್ರದ ಜನರಿಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಲಾ ಒಂದು ಲಕ್ಷ ರೂ. ಪರಿಹಾರ ಸಹಾಯ ಧನ ನೀಡಿದ್ದಾರೆ.
![minister-somashekhar-](https://etvbharatimages.akamaized.net/etvbharat/prod-images/ka-bng-01-money-to-covid-death-family-ka10033_08052021151148_0805f_1620466908_609.jpg)
ಓದಿ: ಲೆಕ್ಕ ಪರಿಶೀಲನೆ, ಸ್ಥಳ ಪರಿಶೀಲನೆ ಮೇಲಿನ ನಿರ್ಬಂಧ ಆದೇಶ ಹಿಂಪಡೆಯಿರಿ: ಸ್ಪೀಕರ್ಗೆ ರಾಮಲಿಂಗಾ ರೆಡ್ಡಿ ಪತ್ರ
ಯಶವಂತಪುರದ ಪ್ರತಿಯೊಂದು ವಾರ್ಡ್ ಹಾಗೂ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವೈಯುಕ್ತಿಕವಾಗಿ ಪರಿಹಾರ ನೀಡಿ ಇಂದಿನಿಂದ ನಿತ್ಯ ಒಂದೊಂದು ವಾರ್ಡ್‌ನ ಸೋಂಕಿನಿಂದ ಮೃತಪಟ್ಟ ಕುಟುಂಬಸ್ಥರಿಗೆ ತಲಾ 1 ಲಕ್ಷ ನಗದು ವಿತರಣೆ ಮಾಡಲಾಗುವುದು. ಇನ್ನು ಸಹಾಯ ಧನ ವಿತರಣಾ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಚಾಲನೆ ನೀಡಿದರು.
ಜೊತೆಗೆ ಇಂದು ಕೆಂಗೇರಿ ವಾರ್ಡ್ 159 ರಲ್ಲಿ ಕೊರೊನಾದಿಂದ ಮೃತಪಟ್ಟ 27 ಕುಟುಂಬಗಳಿಗೆ ನಿರ್ಮಲಾನಂದ ಸ್ವಾಮೀಜಿ ಅವರು ತಲಾ ಒಂದು ಲಕ್ಷ ನಗದು ವಿತರಿಸಿದರು. ಇನ್ನು ನಾಳೆಯಿಂದ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ 17 ಪಂಚಾಯಿತಿ ವ್ಯಾಪ್ತಿ ಹಾಗೂ 5 ವಾರ್ಡ್‌ನ ಜನರಿಗೆ ಸಹಾಯ ಮಾಡಲಾಗುವುದು.