ETV Bharat / city

ನದಿ ಜೋಡಣೆ ವಿಚಾರದಲ್ಲಿ ನಮಗೆ ಅನ್ಯಾಯವಾದರೆ ಒಪ್ಪುವುದಿಲ್ಲ : ಸಚಿವ ಆರ್. ಅಶೋಕ್ - ಕೇಂದ್ರ ಬಜೆಟ್ ಕುರಿತು ಸಚಿವ ಆರ್.ಅಶೋಕ್ ಹೇಳಿಕೆ

ಕೇಂದ್ರ ಬಜೆಟ್ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್​.ಅಶೋಕ್, ಇದೊಂದು ಪ್ರಗತಿಪರ ಬಜೆಟ್. ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಹಾಕಲಾಗುತ್ತಿದೆ. ಡಿಜಿಟಲ್ ಮೂಲಕ ಶಿಕ್ಷಣ ಕೊಡಲು ತೀರ್ಮಾನ ಮಾಡಲಾಗಿದೆ. ಎಸ್​​ಸಿ, ಎಸ್​​ಟಿ ರೈತರಿಗೆ ವಿಶೇಷ ಯೋಜನೆ ಘೋಷಣೆ ಮಾಡಿದ್ದಾರೆ. ದೂರದೃಷ್ಟಿ ಯೋಜನೆ ಜಾರಿ ಮಾಡಲಾಗುತ್ತದೆ..

Minister R.Ashok on river linking plan
ನದಿ ಜೋಡಣೆ ವಿಚಾರದಲ್ಲಿ ನಮಗೆ ಅನ್ಯಾಯವಾದರೆ ಒಪ್ಪುವುದಿಲ್ಲ : ಸಚಿವ ಆರ್. ಅಶೋಕ್
author img

By

Published : Feb 2, 2022, 2:16 PM IST

ಬೆಂಗಳೂರು : ನದಿ ಜೋಡಣೆ ವಿಚಾರದಲ್ಲಿ ನಮಗೆ ಅನ್ಯಾಯವಾದರೆ ನಾವು ಒಪ್ಪುವುದಿಲ್ಲ. ನೀರು ಹಂಚಿಕೆ ವಿಚಾರದಲ್ಲಿ ಸಮಸ್ಯೆಯಾದರೆ ನಾವು ಅನುಮತಿ ಕೊಡುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮ ರಾಜ್ಯದ ನೀರಿಗೆ ತೊಂದರೆ ಆಗಬಾರದು. ನೀರು ಹಂಚಿಕೆಯಲ್ಲಿ ಸಮಸ್ಯೆಯಾದರೆ ನಾವು ಅನುಮತಿ ಕೊಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಜ್ಯ ಸರ್ಕಾರದ ಅನುಮತಿ ಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ನಮಗೆ ಅನ್ಯಾಯ ಆಗುವ ರೀತಿ ನಾವು ಒಪ್ಪಲ್ಲ ಎಂದು ನದಿ ಜೋಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕೇಂದ್ರ ಬಜೆಟ್ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್​.ಅಶೋಕ್, ಇದೊಂದು ಪ್ರಗತಿಪರ ಬಜೆಟ್. ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಹಾಕಲಾಗುತ್ತಿದೆ. ಡಿಜಿಟಲ್ ಮೂಲಕ ಶಿಕ್ಷಣ ಕೊಡಲು ತೀರ್ಮಾನ ಮಾಡಲಾಗಿದೆ. ಎಸ್​​ಸಿ, ಎಸ್​​ಟಿ ರೈತರಿಗೆ ವಿಶೇಷ ಯೋಜನೆ ಘೋಷಣೆ ಮಾಡಿದ್ದಾರೆ. ದೂರದೃಷ್ಟಿ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರಿಗೆ ಬಜೆಟ್‌ನಲ್ಲಿ ಏನಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಜೆಟ್ ಮಂಡನೆ ಮುನ್ನವೇ ಇದೊಂದು ನಿರಾಶದಾಯಕ ಬಜೆಟ್ ಅಂತಾ ಹೇಳುತ್ತಿದ್ದರು. ಬಜೆಟ್ ಮಂಡನೆ ಮಾಡಿ ಅವರಿಗೆ ಅನುಭವ ಇಲ್ಲ. ಹೀಗಾಗಿ, ಆ ರೀತಿ ಮಾತನಾಡುತ್ತಿದ್ದಾರೆ ಎಂದು ಆರ್​.ಅಶೋಕ್ ಟೀಕಿಸಿದರು.

ಇದನ್ನೂ ಓದಿ: ವಿದ್ಯಾರ್ಥಿಗಳು ಮತ್ತು ಯುವಕರ ನಡುವೆ ಗಲಾಟೆ : ಮಾರಕಾಸ್ತ್ರ ಹಿಡಿದು ಬಂದ ಯುವಕ.. ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.